ಮೈಸೂರು: ರಿಷಬ್ ಶೆಟ್ಟಿ ನಟನೆಯ ಕಾಂತಾರ ಸಿನಿಮಾ ಸಕ್ಸಸ್ ಆದ ನಂತರ ತಲೆ ಎತ್ತಿದ್ದ ಮೈಸೂರಿನ ರಿಂಗ್ ರಸ್ತೆಯ ಕೇರ್ಗಳ್ಳಿ ಬಳಿ ಇರುವ ಕೊರಗಜ್ಜ ದೇವಸ್ಥಾನ ಆರಂಭದಲ್ಲೇ ವಿವಾದದಕ್ಕೀಡಾಗಿತ್ತು. ಮಂಗಳೂರಿನ ದೈವ ಆರಾಧಕರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ ಈಗ ಭೂ ವಿವಾದದ ಜತೆಗೆ ಸಂಬಂಧಿಕರ ಕಲಹದಿಂದಾಗಿ ಮೈಸೂರಿನ ರಿಂಗ್ ರಸ್ತೆಯ ಕೇರ್ಗಳ್ಳಿ ಬಳಿ ಇರುವ ಕೊರಗಜ್ಜ ದೇವಸ್ಥಾನಕ್ಕೆ ಕಳೆದ ಒಂದು ತಿಂಗಳಿಂದ ಬೀಗ ಹಾಕಲಾಗಿದೆ.
ಈ ಹಿಂದೆ ಟ್ರಸ್ಟಿಗಳ ನಡುವೆ ನಡೆದಿದ್ದ ಜಗಳಕ್ಕೆ ಬೀಗ ಹಾಕಲಾಗಿತ್ತು. ನಂತರ ಅರ್ಚಕ ತೇಜುಕುಮಾರ್ ಹಾಗು ಪತ್ನಿ ನಡುವೆ ಕಲಹ ಉಂಟಾಗಿತ್ತು. ಸದ್ಯ ತೇಜುಕುಮಾರ್ ಸಂಬಂಧಿಕರ ನಡುವೆ ಜಗಳವಾಗಿದ್ದು, ಇದೀಗ ದೇವಸ್ಥಾನಕ್ಕೆ ಬೀಗ ಹಾಕಲಾಗಿದೆ. ಇದೀಗ ದೇವಸ್ಥಾನದ ಅರ್ಚಕ ತೇಜುಕುಮಾರ್ ದೇವಸ್ಥಾನಕ್ಕೆ ಬೀಗ ಜಡಿದು ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.