ಮೈಸೂರು: ದುಬಾರಿ ಬೆಲೆಯ ಕಾರು ಕದ್ದು ಮಾರಾಟ ಮಾಡುತ್ತಿದ್ದ ಬಾಬು ಎಂಬ ಕಳ್ಳನನ್ನು ಮೈಸೂರಿನ ವಿವಿ ಪುರಂ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಬಾಬು ಬಂಧಿತ ಆರೋಪಿ.
ಮಾಜಿ ಸಚಿವ ಶಿವಣ್ಣ ಸೇರಿದಂತೆ ಹಲವರ ಐಶಾರಾಮಿ ಕಾರುಗಳನ್ನು ಕಳ್ಳತನ ಮಾಡಿ, ಹೊರ ರಾಜ್ಯಗಳಿಗೆ ಮಾರಾಟ ಮಾಡುತ್ತಿದ್ದ.
ಆಂಧ್ರಪ್ರದೇಶ ಮೂಲದ ಆರೋಪಿ ಬಾಬು ಕಳ್ಳತನದ ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಸದ್ಯ ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿ 3 ಕಾರು, ಚಿನ್ನಾಭರಣ, ದುಬಾರಿ ವಾಚ್ ಗಳನ್ನು ಜಪ್ತಿ ಮಾಡಿದ್ದಾರೆ. ಇನ್ನು ಆರೋಪಿ ಬಾಬು ಕಾರುಗಳ ಜೊತೆ ಮನೆಗಳ್ಳತನವೂ ಮಾಡುತ್ತಿದ್ದ ಎಂಬ ಬಗ್ಗೆ ತನಿಖೆ ವೇಳೆ ತಿಳಿದು ಬಂದಿದೆ. ಆರೋಪಿಯಿಂದ ಮತ್ತಷ್ಟು ಮಾಹಿತಿಗಳನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ.