ಮೈಸೂರು : ಮುಡಾ ಹಗರಣಕ್ಕೆ ಸಬಂಧಪಟ್ಟಂತೆ ಇದೀಗ ಇಡಿ ಅಧಿಕಾರಿಗಳು ಒಟ್ಟು 252 ನಿವೇಶನಗಳ ಒಟ್ಟು 440 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಮುಡಾ ಅಧಿಕಾರಿಗಳು ಅಕ್ರಮವಾಗಿ ನೀಡಿದ 252 ನಿವೇಶನಗಳನ್ನು ಇದೀಗ ಇಡಿ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ.
ಅಲ್ಲದೇ ಮುಡಾದ ಮಾಜಿ ಆಯುಕ್ತರಾದ ದಿನೇಶ್ ಕುಮಾರ್ ಬಳಿ ಇದ್ದ 32 ಸೈಟ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. 40.8 ಕೋಟಿ ಮೌಲ್ಯದ ನಿವೇಶನಗಳನ್ನು ಇಡಿ ಅಧಿಕಾರಿಗಳು ವರ್ಷಕ್ಕೆ ಪಡೆದುಕೊಂಡಿದ್ದಾರೆ. ಅಧಿಕಾರಿಗಳು ಅಕ್ರಮವಾಗಿ 752 ಸೈಟ್ ಗಳನ್ನು ಅಲಾಟ್ ಮಾಡಿದ್ದರು. ಮುಡಾ ಅಧಿಕಾರಿಗಳೇ ಅಕ್ರಮದಲ್ಲಿ ಭಾಗಿಯಾಗಿರುವುದು ಸಾಬೀತು ಆಗಿತ್ತು.ಮಾಜಿ ಆಯುಕ್ತ ದಿನೇಶ್ ಬಳಿ ಇರುವ 32 ನಿವೇಶನಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ದಿನೇಶ್ ಕುಟುಂಬಸ್ಥರ ಹೆಸರಿನಲ್ಲಿ ಆಸ್ತಿ ಮಾಡಿದ್ದ ಎನ್ನಲಾಗಿದೆ.