ಮೈಸೂರು: ಮೈಸೂರು ನಗರಸಭೆಯಿಂದ ಘನತ್ಯಾಜ್ಯ ವಸ್ತುಗಳ ನಿರ್ವಹಣಾ ಘಟಕ ಸ್ಥಾಪಿಸುವಾಗ ಕೈತಪ್ಪಿನಿಂದ ಒತ್ತುವರಿಗೊಂಡ ಜಮೀನಿಗೆ ಸಂಬಂಧಿಸಿದಂತೆ, ಜಮೀನು ಮಾಲೀಕರಿಗೆ ರೂ. 1,60,82,242/- ಪರಿಹಾರ ಚೆಕ್ ವಿತರಿಸಲಾಯಿತು. ಈ ಕಾರ್ಯಕ್ರಮ ಮೈಸೂರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಉಪಲೋಕಾಯುಕ್ತ ಕೆ.ಎನ್. ಫಣೀಂದ್ರ, ಲೋಕಾಯುಕ್ತ ಅಧಿಕಾರಿಗಳು, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಸಿಇಒ ಉಪಸ್ಥಿತರಿದ್ದರು.
ಮಾಲೀಕರಾದ ಕೆ. ಪುಟ್ಟಮಾದಯ್ಯ ಬಿನ್ ಲೇಟ್ ಮಾದಯ್ಯ ಅವರು, ತಮ್ಮ ಅಕ್ಕತಂಗಿಯರ ಹೆಸರಿನಲ್ಲಿ ಇರುವ ಸರ್ವೆ ನಂ. 222 ರ 3.35 ಎಕರೆ ಜಮೀನು ನಗರಸಭೆಯು ಕೈತಪ್ಪಾಗಿ ಉಪಯೋಗಿಸಿದ್ದನ್ನು ಪ್ರಶ್ನಿಸಿ ಲೋಕಾಯುಕ್ತ ಕಛೇರಿಗೆ ದೂರು ಸಲ್ಲಿಸಿದ್ದರು. ಲೋಕಾಯುಕ್ತರು ಪರಿಶೀಲನೆ ನಡೆಸಿ ಕ್ರಮಕ್ಕೆ ಶಿಫಾರಸು ಮಾಡಿದರು. ಇದನ್ನು ಅನುಸರಿಸಿ ನಂಜನಗೂಡು ನಗರಸಭೆಯ ಕೌನ್ಸಿಲ್ ಸಭೆಯಲ್ಲಿ ವಿಷಯಕ್ಕೆ ಅನುಮೋದನೆ ದೊರಕಿದ್ದು, ಜಿಲ್ಲಾಧಿಕಾರಿಗಳು ಜಮೀನಿನ ಮೌಲ್ಯ ನಿಗದಿ ಮಾಡಿ 31.07.2025ರಂದು ಆಡಳಿತಾತ್ಮಕ ಮಂಜೂರಾತಿ ನೀಡಿದರು. ಇದೀಗ ನಂಜನಗೂಡು ನಗರಸಭೆಯು ಪರಿಹಾರ ಚೆಕ್ ವಿತರಿಸಿದೆ.