Wednesday, September 17, 2025
Google search engine

Homeಸ್ಥಳೀಯಮೈಸೂರು: ₹13 ಲಕ್ಷ ಮೌಲ್ಯದ ಮಾದಕ ಪದಾರ್ಥಗಳು ನಾಶ

ಮೈಸೂರು: ₹13 ಲಕ್ಷ ಮೌಲ್ಯದ ಮಾದಕ ಪದಾರ್ಥಗಳು ನಾಶ

ಮೈಸೂರು: ಮೈಸೂರು ನಗರ ಪೊಲೀಸ್‌ ಠಾಣೆಗಳಲ್ಲಿ ಎನ್.ಡಿ.ಪಿ.ಎಸ್. (NDPS – Narcotic Drugs and Psychotropic Substances Act) ಕಾಯ್ದೆಯಡಿಯಲ್ಲಿ ಅಮಾನತ್ತುಪಡಿಸಿದ್ದ 23 ಪ್ರಕರಣಗಳಿಗೆ ಸಂಬಂಧಿಸಿದ ಮಾದಕ ಪದಾರ್ಥಗಳನ್ನು ಶಾಸ್ತ್ರೀಯ ಹಾಗೂ ಪರಿಸರ ಸ್ನೇಹಿ ವಿಧಾನದಲ್ಲಿ ನಾಶಪಡಿಸಲಾಗಿದೆ. ಈ ಕ್ರಮವನ್ನು ನ್ಯಾಯಾಲಯದ ಅನುಮತಿಯೊಂದಿಗೆ ಡ್ರಗ್ ಡಿಸ್ಪೋಸಲ್ ಕಮಿಟಿಯ ಸಮಕ್ಷಮದಲ್ಲಿ ಜಾರಿಗೊಳಿಸಲಾಗಿದೆ.

ಅಮಾನತ್ತುಪಡಿಸಲಾಗಿದ್ದ ಮಾದಕ ವಸ್ತುಗಳ ಪೈಕಿ ಒಟ್ಟು 43 ಕಿಲೋಗ್ರಾಂ 308 ಗ್ರಾಂ ಗಾಂಜಾ ಹಾಗೂ ಮತ್ತೊಂದು ಪ್ರಕರಣದಲ್ಲಿ 3.75 ಗ್ರಾಂ ಮೆಥ್‌ಅಮ್ಫೆಟಮಿನ್ ಪತ್ತೆಯಾಗಿದ್ದು, ಇದರ ಒಟ್ಟು ಮೌಲ್ಯ ರೂ. 13,15,000/- ಎಂದು ಅಂದಾಜಿಸಲಾಗಿದೆ. ಈ ಎಲ್ಲಾ ವಸ್ತುಗಳನ್ನು ಇಂದು ನಿಗದಿತ ಪ್ರಕ್ರಿಯೆಯಂತೆ ನಾಶಪಡಿಸಲಾಯಿತು.

ಈ ಮಹತ್ವದ ಕಾರ್ಯಾಚರಣೆಯಲ್ಲಿ ಡ್ರಗ್ ಡಿಸ್ಪೋಸಲ್ ಕಮಿಟಿಯ ಅಧ್ಯಕ್ಷರೂ ಆಗಿರುವ ಕೆ.ಎಸ್. ಸುಂದರ್ ರಾಜ್, ಉಪ ಪೊಲೀಸ್ ಆಯುಕ್ತ (ಅಪರಾಧ ಮತ್ತು ಸಂಚಾರ), ಉಪಸ್ಥಿತರಿದ್ದು ಕಾರ್ಯಾಚರಣೆಯ ಮೇಲ್ವಿಚಾರಣೆಯನ್ನು ಮಾಡಿದ್ದಾರೆ. ಅವರ ಜೊತೆಗೆ ಕಮಿಟಿಯ ಇತರೆ ಸದಸ್ಯರು, ಪೊಲೀಸ್ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸಹ ಪಾಲ್ಗೊಂಡಿದ್ದರು.

RELATED ARTICLES
- Advertisment -
Google search engine

Most Popular