ಮೈಸೂರು: ಕೆಎಂಪಿ ಕೆ ಚಾರಿಟೇಬಲ್ ಟ್ರಸ್ಟ್ ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಮಹಿಳೆಯರಿಗಾಗಿ ಆಯೋಜಿಸಿದ ಆನ್ಲೈನ್ ವರಮಹಾಲಕ್ಷ್ಮಿ ಸೆಲ್ಫಿ ಸ್ಪರ್ಧೆಯಲ್ಲಿ 250ಕ್ಕೂ ಹೆಚ್ಚು ಸ್ಪರ್ಧಿಗಳು ಆನ್ಲೈನ್ ಮೂಲಕ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ಅತ್ಯುತ್ತಮ ಸೆಲ್ಫಿ ಚಿತ್ರಕ್ಕೆ ರಾಮಾನುಜಾ ರಸ್ತೆಯಲ್ಲಿರುವ ನಮೋ ಯೋಗ ಭವನದಲ್ಲಿ ವಿಜೇತರಾದ ರಿಷು ಪುರುಷೋತ್ತಮ್, ಪ್ರಮೀಳಾ ರಾಧಾಕೃಷ್ಣ, ಎಚ್ ಎಸ್ ಪ್ರೇಮಾವತಿ, ಗಾಯಿತ್ರಿ ಜಿ, ಚೈತ್ರ ಗುರುದತ್, ಹರ್ಷಿತ, ರೂಪಶ್ರೀ, ವಿಜಯಲಕ್ಷ್ಮಿ, ಕಲಾ, ಶೃತಿ, ಸುಧಾಬಾಯಿ, ಶಿಲ್ಪ ಅರುಣ್, ಹರ್ಷಿಣಿ ವಿಜಯ್, ನೇತ್ರಾವತಿ ಯಶವಂತ್ ಕುಮಾರ್, ಪ್ರೀತಿ ವಿನಯ್, ರವರಿಗೆ ಬಹುಮಾನ ವಿತರಿಸಿ ಮಾತನಾಡಿದ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರಾದ ನಾರಾಯಣಗೌಡ ಸಿ ಮಕ್ಕಳಿಗೆ ಆಸ್ತಿಯನ್ನು ಮಾಡದೆ ಮಕ್ಕಳನ್ನೇ ಆಸ್ತಿ ಮಾಡಬೇಕು. ಮಾತ್ರವಲ್ಲದೆ ನಮ್ಮ ಧರ್ಮದ ಜಾಗೃತಿಯನ್ನು ಎಲ್ಲರಲ್ಲೂ ಮೂಡಿಸಬೇಕು ಎಂದು ತಿಳಿಸಿದರು ಮಂದಿನ ಪೀಳಿಗೆಯ ಮಕ್ಕಳನ್ನು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಪ್ರೇರೇಪಿಸಬೇಕು. ಈ ಮೂಲಕ ಹಿಂದೂ ಸನಾತನ ಸಂಸ್ಕೃತಿ ರಕ್ಷಿಸಬೇಕು ಎಂದರು.
ನಂತರ ಮಾತನಾಡಿದ ಕಾಂಗ್ರೆಸ್ ಯುವ ಮುಖಂಡರಾದ ಎನ್ ಎಂ ನವೀನ್ ಕುಮಾರ್ ತಾಯಂದಿರನ್ನೆಲ್ಲಾ ತೊಡಗಿಸಿಕೊಂಡು ನಡೆಸಿಕೊಂಡು ಬರುವಂತಹ ಅತಿ ದೊಡ್ಡ ಹಬ್ಬ ಶ್ರೀ ವರಮಹಾಲಕ್ಷ್ಮಿ ವ್ರತ , ನಮ್ಮ ಸಂಸ್ಕಾರ ಸಂಸ್ಕೃತಿ ಉಳಿಯಬೇಕೆಂದರೆ ಇಂತಹ ಹಬ್ಬಗಳು ಎಲ್ಲಾ ಕಡೆಗಳಲ್ಲಿ ಒಟ್ಟುಗೂಡಿ ನಡೆಸಲ್ಪಡುವುದು ಅತಿ ಮುಖ್ಯವಾಗಿದೆ ಎಂದು ಹೇಳಿದರು
ಮುಖ್ಯ ಅತಿಥಿಗಳಾಗಿ ಆಗಮಿಸಿದ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರಾದ ನಾರಾಯಣಗೌಡ, ಕಾಂಗ್ರೆಸ್ ಮುಖಂಡರಾದ ಎನ್ ಎಂ ನವೀನ್ ಕುಮಾರ್, ಮಾಜಿನಗರ ಪಾಲಿಕಾ ಸದಸ್ಯರಾದ ಮ ವಿ ರಾಮಪ್ರಸಾದ್, ಸಮೃದ್ಧಿ ವಾರ್ತಾ ಪತ್ರಿಕೆಯ ಸಂಪಾದಕರಾದ ಸಹನಾ, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಚಿದನ್ವಿ ಟ್ರಸ್ಟ್ ಅಧ್ಯಕ್ಷರಾದ ನಾಗಮಣಿ, ಅಥರ್ವ ಸ್ಕಿಲ್ ಫೌಂಡೇಶನ್ ಅಧ್ಯಕ್ಷರಾದ ಪುಷ್ಪ, ಅಧ್ಯಕ್ಷರಾದ ವಿಕ್ರಮ ಅಯ್ಯಂಗಾರ್, ಅಜಯ್ ಶಾಸ್ತ್ರಿ, ಕೆ ಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ,ಸಚಿಂದ್ರ, ಚಕ್ರಪಾಣಿ, ಹಾಗೂ ಇನ್ನಿತರರು ಭಾಗವಹಿಸಿದ್ದರು.