Friday, April 11, 2025
Google search engine

Homeಸ್ಥಳೀಯಮೈಸೂರು: ಪ್ರೊ.ವಿ.ಕೆ.ನಟರಾಜ್ ನಿಧನ

ಮೈಸೂರು: ಪ್ರೊ.ವಿ.ಕೆ.ನಟರಾಜ್ ನಿಧನ

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ ಅಭಿವೃದ್ಧಿ ಅಧ್ಯಯನ ವಿಭಾಗದ ಪ್ರಾಧ್ಯಾಪಕರೂ ಮುಖ್ಯಸ್ಥರೂ ಆಗಿದ್ದ ಪ್ರೊ.ವಿ.ಕೆ.ನಟರಾಜ್ (85) ಸೋಮವಾರ ಬೆಳಿಗ್ಗೆ ಅನಾರೋಗ್ಯದಿಂದ ನಿಧನರಾದರು. ಅವರಿಗೆ ಇಬ್ಬರು ಪುತ್ರಿಯರು ಇದ್ದಾರೆ.

ನಿವೃತ್ತಿ ನಂತರ ಚೆನ್ನೈನ ಎಂಐಡಿಎಸ್ (ಮದ್ರಾಸ್ ಇನಸ್ಟಿಟ್ಯೂಟ್ ಆಫ್ ಡೆವಲಪ್‌ಮೆಂಟಲ್ ಸ್ಟಡೀಸ್) ನಿರ್ದೇಶಕರಾಗಿದ್ದರು. ಬಳಿಕ ಇಂಡೊ- ಕೆನಡಿಯನ್ ಸ್ಟಡಿ ಸೆಂಟರ್ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು.
ಅರ್ಥಶಾಸ್ತ್ರ ಕುರಿತು ಇಂಗ್ಲಿಷ್ ಪತ್ರಿಕೆಗಳಿಗೆ ಲೇಖನ ಬರೆಯುತ್ತಿದ್ದ ಅವರು, ವಲ್ಡ್೯ ಬ್ಯಾಂಕಿನ ಸಲಹೆಗಾರರಾಗಿದ್ದರು.

ಖ್ಯಾತ ಸರೋದ್ ವಾದಕರಾಗಿದ್ದ ಪಂ.ರಾಜೀವ ತಾರಾನಾಥರ ಆತ್ಮೀಯ ಒಡನಾಡಿಯೂ ಆಗಿದ್ದರು.

ಅವರ ದೇಹವನ್ನು ಮಂಗಳವಾರ ಬೆಳಿಗ್ಗೆ 11 ಗಂಟೆಗೆ ನಗರದ ಜೆಎಸ್ ಎಸ್ ಆಸ್ಪತ್ರೆಗೆ ದಾನವಾಗಿ ನೀಡಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

RELATED ARTICLES
- Advertisment -
Google search engine

Most Popular