ಮೈಸೂರು: ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ನಡೆಸಿರುವುದನ್ನು ಖಂಡಿಸಿ ಮೈಸೂರು ನಗರ ಮತ್ತುಜಿಲ್ಲಾ ಮಹಿಳಾ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಬಾಯಿಗೆ ಕಪ್ಪು ಪಟ್ಟಿ ಧರಿಸಿ ಜಿಪಂಕಚೇರಿ ಮುಂಭಾಗದಲ್ಲಿ ಶನಿವಾರ ಪ್ರತಿಭಟಿಸಿದರು.
ಜನಾಂಗೀಯದ್ವೇಷದಿಂದ ಮಣಿಪುರ ಹೊತ್ತಿಉರಿಯುತ್ತಿದೆ. ಗಲಭೆ ನಿಯಂತ್ರಿಸುವಲ್ಲಿ ವಿಫಲವಾಗಿರುವ ಮಣಿಪುರದ ಮುಖ್ಯಮಂತ್ರಿಯನ್ನ ವಜಾಗೊಳಿಸಿ, ಕಾನೂನು ಮತ್ತು ಸುವ್ಯವಸ್ಥೆಕಾಪಾಡಬೇಕುಎಂದು ಆಗ್ರಹಿಸಿ, ಹಿಂಸೆ ನಿಲ್ಲಿಸಿ ಮಣಿಪುರ ಉಳಿಸಿ, ನಿಲ್ಲಿಸಿ ನಿಲ್ಲಿಸಿ ಮಣಿಪುರದಲ್ಲಿ ಹಿಂಸೆಯನ್ನು ನಿಲ್ಲಿಸಿ, ನಾವು ಮಣಿಪುರದಲ್ಲಿ ಶಾಂತಿಯನ್ನು ಬಯಸುತ್ತೇವೆ, ಬಲಿಷ್ಠ ರಾಷ್ಟ್ರಕ್ಕಾಗಿ ಮಹಿಳೆಯರನ್ನು ಗೌರವಿಸಿ ಎಂದು ಪೋಸ್ಟರ್‌ಗಳನ್ನು ಪ್ರದರ್ಶಿಸಿದರು. ಅಲ್ಲದೆ, ದೇಶದ ಹೆಣ್ಣುಮಕ್ಕಳ ನೋವಿಗೆ ಸಾವಿಗೆ ನಾವೆಲ್ಲರೂದನಿಯಾಗಬೇಕಿದೆಎಂದುಕರೆ ನೀಡಿದರು.
ಜನಾಂಗೀಯ ಸಂಘರ್ಷ ಮತ್ತು ಹಿಂಸಾಚಾರದಿಂದ ನಲುಗಿ ಹೋಗಿರುವ ಮಣಿಪುರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಕಾಪಾಡುವಲ್ಲಿ ವಿಫಲವಾಗಿರುವ ಮುಖ್ಯಮಂತ್ರಿ ಬೀರೇನ್ ಸಿಂಗ್ ನೇತೃತ್ವದ ಬಿಜೆಪಿ ಸರ್ಕಾರವನ್ನು ವಜಾಗೊಳಿಸಿ, ರಾಷ್ಟ್ರಪತಿ ಆಡಳಿತ ಜಾರಿಗೊಳಿಸಬೇಕು ಎಂದುಅವರು ಒತ್ತಾಯಿಸಿದರು.
ಮಹಿಳಾ ಕಾಂಗ್ರೆಸ್ ನಗರಾಧ್ಯಕ್ಷೆ ಪುಷ್ಪಲತಾಚಿಕ್ಕಣ್ಣ, ಜಿಲ್ಲಾಧ್ಯಕ್ಷೆ ಲತಾ ಸಿದ್ದಶೆಟ್ಟಿ, ಮಾಜಿ ಮೇಯರ್ ಮೋದಾಮಣಿ, ಪಾಲಿಕೆ ಸದಸ್ಯೆ ಶೋಭಾ ಸುನಿಲ್, ಮುಖಂಡರಾದ ಪುಷ್ಪವಲ್ಲಿ, ಶಾರದಾ ಸಂಪತ್, ಲತಾ ಮೋಹನ್, ಚಂದ್ರಕಲಾ, ಭವ್ಯ, ಲೀಲಾ ಪಂಪಾಪತಿ, ಪ್ರೇಮ, ರಾಜೇಶ್ವರಿ, ಸುಧಾ ಮಾದೇವಯ್ಯ, ಪುಷ್ಪ, ಶೋಭಾ, ಗಾಯತ್ರಿ ನಾರಾಯಣ್, ಇಂದ್ರ, ಬೃಂದಾ, ನಾಗರತ್ನ, ಕಮಲ, ದೇವಮಣ್ಣಿ, ಪಾರ್ವತಮ್ಮ, ಮಮತಾ, ಸೌಭಾಗ್ಯ, ನಾಗರತ್ನ, ಮಧು ಮಾಲಿನಿ, ಕಾವ್ಯ, ರಾಣಿ ಮೊದಲಾದವರು ಇದ್ದರು.