ಮೈಸೂರು: ಮೈಸೂರು ರಂಗಾಯಣದ ಆವರಣದಲ್ಲಿ ಇಪ್ಪತ್ತೊಂದನೇ ವರ್ಷದ ಚಿಣ್ಣರಮೇಳ ದಿನಾಂಕ:14-04-2025 ರಿಂದ 10-05-2025 ರವರೆಗೆ ನಡೆಯಲಿದ್ದು, ಮಕ್ಕಳ ರಂಗ ತರಬೇತಿ ಶಿಬಿರಕ್ಕೆ ಅರ್ಜಿ ವಿತರಣೆ ಮಾಡಲಾಗುತ್ತಿದೆ.
2025 ಮಾರ್ಚ್ 31ಕ್ಕೆ 7 ವರ್ಷಗಳು ತುಂಬಿದ ಮತ್ತು ಈ ದಿನಾಂಕಕ್ಕೆ 15 ವರ್ಷ ಮೀರಿರದ ಮಕ್ಕಳಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ದಿನಾಂಕ:06-04-2025 ರಂದು ಬೆಳಿಗ್ಗೆ 10.00 ಗಂಟೆಗೆ ರಂಗಾಯಣದ ಕಚೇರಿಯಲ್ಲಿ ಒಬ್ಬರಿಗೆ ಒಂದರಂತೆ ಅರ್ಜಿ ವಿತರಿಸಲಾಗುವುದು. ಪ್ರತಿ ಅರ್ಜಿಯ ಶುಲ್ಕ ರೂ.100/-ಗಳಾಗಿದ್ದು, 250 ಅರ್ಜಿಗಳನ್ನು ಮಾತ್ರ ನೀಡಲಾಗುವುದು. ಮೊದಲು ಬಂದವರಿಗೆ ಮೊದಲ ಆದ್ಯತೆ.
ಭರ್ತಿ ಮಾಡಿದ ಅರ್ಜಿಗಳನ್ನು ದಿನಾಂಕ:09-04-2025ರ ಸಂಜೆ 5.00 ಗಂಟೆಯೊಳಗೆ ರಂಗಾಯಣದ ಕಚೇರಿಗೆ ಖುದ್ದಾಗಿ ಸಲ್ಲಿಸಬೇಕು. ಚಿಣ್ಣರಮೇಳದ ಪ್ರವೇಶ ಶುಲ್ಕ ಮಗುವೊಂದಕ್ಕೆ ರೂ.3,500/-ಗಳ ಈ ಮೊತ್ತವನ್ನು ಉಪ ನಿರ್ದೆಶಕರು, ರಂಗಾಯಣ ಮೈಸೂರು ಇವರ ಹೆಸರಿಗೆ ಡಿ.ಡಿ ತೆಗೆದು ಅರ್ಜಿ ಜೊತೆ ಲಗತ್ತಿಸಬೇಕು. ಮಗುವಿನ ಜನ್ಮದಿನದ ದೃಢೀಕರಣಕ್ಕಾಗಿ ಆಧಾರ್ ಕಾರ್ಡ್ ಪ್ರತಿ ಅಥವಾ ಮಗುವಿನ ಹೆಸರು ನಮೂದಿಸಿರುವ ಜನನ ಪ್ರಮಾಣಪತ್ರವನ್ನು ಅರ್ಜಿ ಜೊತೆ ಲಗತ್ತಿಸಬೇಕು. ಅರ್ಜಿಗಾಗಿ ಸಾಲಿನಲ್ಲಿ ನಿಂತವರು ಅರ್ಜಿಯಲ್ಲಿ ಮತ್ತು ರಸೀದಿಯಲ್ಲಿ ಕಡ್ಡಾಯವಾಗಿ ಮಗುವಿನ ಹೆಸರನ್ನು ಬರೆಸಿ ರೂ.100/-ಗಳನ್ನು ಪಾವತಿಸಿ ರಸೀದಿಯೊಂದಿಗೆ ಅರ್ಜಿಯನ್ನು ಪಡೆಯುವುದು ಹಾಗೂ ಭರ್ತಿ ಮಾಡಿದ ಅರ್ಜಿಯನ್ನು ರಸೀದಿಯೊಂದಿಗೆ ಮರಳಿ ಸಲ್ಲಿಸಬೇಕು ಎಂದು ರಂಗಾಯಣದ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.