Friday, April 4, 2025
Google search engine

Homeಸ್ಥಳೀಯಮೈಸೂರು: ತಸ್ತಿಕ್ ವೇತನ‌ ನೊಂದಣಿ ಪ್ರಾರಂಭ

ಮೈಸೂರು: ತಸ್ತಿಕ್ ವೇತನ‌ ನೊಂದಣಿ ಪ್ರಾರಂಭ

ಮೈಸೂರು: ದೇವಾಲಯದ ಅರ್ಚಕರು ಹಾಗೂ ಸಿಬ್ಬಂದಿ ವರ್ಗದವರಿಗೆ ಸರ್ಕಾರದ ಧಾರ್ಮಿಕ ದತ್ತಿ‌ ಇಲಾಖೆ ವತಿಯಿಂದ ನೀಡಲಾಗುವ ತಸ್ತಿಕ್ ವೇತನ ನೇರ ಖಾತೆಗೆ ಜಮಾವಣೆ‌ ನೊಂದಣಿಗೆ ಗುರುವಾರ ನಂಜರಾಜ ಬಹುದ್ದೂರ್ ಛತ್ರದಲ್ಲಿ ಚಾಲನೆ ನೀಡಲಾಯಿತು.

ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರ ಆದೇಶದಂತೆ ಸುಮಾರು 300 ಕ್ಕೂ ಅಧಿಕ ಅರ್ಚಕರು ಹಾಗೂ ವರ್ಗದವರ ಖಾತೆಗೆ ಸೇವಾ ಸಿಂಧು ಮೂಲಕ ನೇರವಾಗಿ ಜಮಾವಣೆಗೊಳ್ಳುವ ನೊಂದಣಿ ಕಾರ್ಯಕ್ಕೆ ಮೈಸೂರು ಮುಜರಾಯಿ ತಹಸೀಲ್ದಾರ್ ವಿದ್ಯುತ್ ಲತಾ, ಕೆ.ಆರ್.ನಗರ ತಹಸೀಲ್ದಾರ್ ಚಂದ್ರಶೇಖರ್ ಅವರುಗಳ ಸಮ್ಮುಖದಲ್ಲಿ ಚಾಲನೆ ದೊರೆಯಿತು. ತಸ್ತಿಕ್ ಯೋಜನೆಯಡಿ ವರ್ಷಕ್ಕೆ ಹಣ ಅರ್ಚಕರು ಮತ್ತು ಸಿಬ್ಬಂದಿ ವರ್ಗಕ್ಕೆ ಲಭಿಸಲಿದೆ.

ಇದೇ ಸಂದರ್ಭದಲ್ಲಿ ತಸ್ತಿಕ್ ವೇತನ‌ ನೊಂದಣಿ ಸ್ಥಳಕ್ಕೆ ಭೇಟಿ ನೀಡಿದ ಅಪರ ಜಿಲ್ಲಾಧಿಕಾರಿ ಶಿವರಾಜ್ ಮೈಸೂರು ಜಿಲ್ಲೆಯ ಎಲ್ಲಾ ತಾಲೂಕಿನ ಅರ್ಚಕರು ಸೇವಾ ಸಿಂಧು ಮುಖಾಂತರ ನೊಂದಾಯಿಸಿಕೊಳ್ಳುವ ಮೂಲಕ ಸದುಪಯೋಗಪಡಿಸಿಕೊಳ್ಳಬೇಕೆಂದು ಅರ್ಚಕರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮೈಸೂರು ಜಿಲ್ಲಾ ಅರ್ಚಕರ ಸಂಘದ ಅಧ್ಯಕ್ಷರಾದ ವಿದ್ವಾನ್ ಕೃಷ್ಣಮೂರ್ತಿ ಅರ್ಚಕರಿಗೆ ಖಾತೆಗೆ ಸೇವಾ ಸಿಂಧು ಮೂಲಕ ನೇರವಾಗಿ ಜಮಾಮನೆಗೊಳಿಸುವ ಕಾರ್ಯಕ್ಕೆ ಸರ್ಕಾರ ಮುಂದಾಗಿರುವುದು ಅರ್ಚಕ ವರ್ಗಕ್ಕೆ ಸಂತಸ ತಂದಿದೆ ಹಾಗೂ ವಿಶೇಷವಾಗಿ ಸರ್ಕಾರದ ಮುಜರಾಯಿ ಸಚಿವರಾದ ರಾಮಲಿಂಗ ರೆಡ್ಡಿ ರವರಿಗೆ ಅರ್ಚಕರ ಪರವಾಗಿ ಧನ್ಯವಾದಗಳು ತಿಳಿಸಿದರು.

ಈ ಸಂದರ್ಭದಲ್ಲಿ ಅಧಿಕಾರಿಗಳಾದ ರಘು, ಚೇತನ್, ಅರ್ಚಕರ ಸಂಘದ ಅಧ್ಯಕ್ಷರಾದ ವಿದ್ವಾನ್ ಕೃಷ್ಣಮೂರ್ತಿ, ಹಾಗೂ ಮೈಸೂರು ಜಿಲ್ಲೆಯ ಎಲ್ಲಾ ತಾಲೂಕಿನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.

RELATED ARTICLES
- Advertisment -
Google search engine

Most Popular