ಮೈಸೂರು: ಇಂದು ಹಾರ್ಪಿಕ್ ವರ್ಲ್ಡ್ ಟಾಯ್ಲೆಟ್ ಕಾಲೇಜು ವತಿಯಿಂದ ಕೌಶಲ್ಯ ಮತ್ತು ನಡವಳಿಕೆಯ ಬಗ್ಗೆ ಹಾಗೂ ಕೆಲಸದ ಸ್ಥಳದಲ್ಲಿ ಸುರಕ್ಷತೆ ಮತ್ತು ಜಾಗೃತಿಯ ಬಗ್ಗೆ ತರಬೇತಿ ನೀಡಲಾಯಿತು.
08 ಪಾಲಿಕೆಯ ಪೌರಕಾರ್ಮಿಕರಿಗೆ ಅನುಕಂಪದ ಆಧಾರದ ಮೇಲೆ ನೇಮಕಾತಿ ಪತ್ರ ನೀಡಲಾಯಿತು. ಹಾಗೂ ತರಬೇತಿ ಪಡೆದ ಪೌರಕಾರ್ಮಿಕರಿಗೆ ಹಾರ್ಪಿಕ್ ವರ್ಲ್ಡ್ ಟಾಯ್ಲೆಟ್ ಇವರ ವತಿಯಿಂದ ಉಚಿತವಾಗಿ ಟೀಶರ್ಟ್ ಹಾಗೂ ಹಾಟ್ ಫ್ಲಾಸ್ ವಿತರಿಸಿದರು.
ಸದರಿ ಕಾರ್ಯಕ್ರಮದಲ್ಲಿ ಆಯುಕ್ತರಾದ ಅಶಾದ್ ಉರ್ ರೆಹ್ಮಾನ್ ಶರೀಫ್, ಜಿ ಎಸ್ ಸೋಮಶೇಖರ್, ಉಪ ಆಯುಕ್ತರು(ಆಡಳಿತ) ಹಾಗೂ ಪ್ರತಿಭಾ, ವಲಯ ಆಯುಕ್ತರು-6 ಹಾಗೂ ಶ್ರೀಮತಿ ಮೈತ್ರಿ, ಪರಿಸರ ಅಭಿಯಂತರರು ಹಾಗೂ ಆರೋಗ್ಯ ನಿರೀಕ್ಷಕರು ಬಸವರಾಜು ಹಾಗೂ ಇತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಹಾರ್ಪಿಕ್ ವರ್ಲ್ಡ್ ಟಾಯ್ಲೆಟ್ ಕಾಲೇಜಿನ ರಾಜ್ಯ ವ್ಯವಸ್ಥಾಪಕ, ಜಗದೀಶ್ ಎಂ (ರಿಥ್ವಿನ್) ಹಾಗೂ ರಾಜ್ಯ ಸಂಚಾಲಕಿ ಬಿಂದು ಎಂ (ರಕ್ಷಾ) ರವರು ತರಬೇತಿ ನೀಡಿದ್ದು, ಪಾಲಿಕೆಯು ಇವರ ಸೇವೆಗೆ ಅಭಿನಂದನೆಗಳನ್ನು ಸಲ್ಲಿಸುತ್ತದೆ.