ಮೈಸೂರು: ಮೈಸೂರಿನ ಟೌನ್‌ಹಾಲ್ ಬಳಿ ಮಹಿಷ ಉತ್ಸವ ಆಚರಣೆ ಹಿನ್ನೆಲೆ ಪುರಭವನದ ಆವರಣಕ್ಕೆ ಸಾವಿರಾರು ಜನರು ಆಗಮಿಸುತ್ತಿದ್ದಾರೆ.
ಮಹಿಷ ದಸರಾ, ಚಾಮುಂಡಿ ಚಲೋ ಜಟಾಪಟಿ ಹಿನ್ನಲೆ ಮೈಸೂರು ನಗರ ಹಾಗೂ ಚಾಮುಂಡಿ ಬೆಟ್ಟದಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದ್ದು, ಮಹಿಷ ಉತ್ಸವ ವೇದಿಕೆ ಕಾರ್ಯಕ್ರಮಕ್ಕೆ ಮಾತ್ರ ಅವಕಾಶ ನೀಡಲಾಗಿದೆ.
ಮಹಿಷ ದಸರಾ ಆಚರಣಾ ಸಮಿತಿಯಿಂದ ಮಹಿಷ ಉತ್ಸವ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ವೇದಿಕೆ ಕಾರ್ಯಕ್ರಮಕ್ಕೆ ಮಹಿಷ ಆರಾಧಕರು ಆಗಮಿಸುತ್ತಿದ್ದಾರೆ.
ಮೈಸೂರಿನ ಪುರಭವನದಲ್ಲಿ ಮಹಿಷ ದಸರಾ ಆಚರಣೆ ಹಿನ್ನೆಲೆ ಪುರಭವನದ ಸುತ್ತ ಪೋಲಿಸ್ ಸರ್ಪಗಾವಲನ್ನು ಹಾಕಲಾಗಿದೆ.

ಕಾರ್ಯಕ್ರಮಕ್ಕೆ ಆಗಮಿಸುವವನ್ನು ಮೆಟಲ್ ಡಿಟಕ್ಟರ್ ನಿಂದ ಶೋಧಿಸುತ್ತಿರುವ ಪೊಲೀಸರು ಒಳಗೆ ಪ್ರವೇಶ ನೀಡುತ್ತಿದ್ದಾರೆ.
ಮೈಸೂರಿನ ಅಸ್ಮಿತೆಗಾಗಿ ಮಹಿಷ ದಸರಾ ಆಚರಣೆ, ರಾಜ್ಯದ ಮೂಲ ನಿವಾಸಿಗಳಿಂದ ಮಹಿಷ ಸಾಂಸ್ಕೃತಿಕ ಹಬ್ಬ ಘೋಷವಾಕ್ಯದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರಿಗೆ ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿದ್ದು, ಕಾರ್ಯಕ್ರಮಕ್ಕೂ ಮುನ್ನ ಅಂಬೇಡ್ಕರ್, ಭೀಮ ಗೀತೆ, ಹಾಗೂ ಕ್ರಾಂತಿ ಗೀತೆಗಳನ್ನು ಹಾಡಲಾಯಿತು.
ಮೈಸೂರಿನ ಅಶೋಕಪುರಂನಿಂದ ಬೈಕ್ ರ್ಯಲಿ ಮೂಲಕ ನೂರಾರು ಜನರು ವೇದಿಕೆ ಕಾರ್ಯಕ್ರಮ ನಡೆಯುವ ಪುರಭವನಕ್ಕೆ ಆಗಮಿಸಿದ್ದಾರೆ.
