Thursday, April 3, 2025
Google search engine

Homeಸ್ಥಳೀಯಮೈಸೂರು: ವಿವಿಧ ಗ್ರಾಮಗಳಲ್ಲಿ ಕಾಣಿಸಿಕೊಂಡ ಹುಲಿ- ಮುಂದುವರೆದ ಕಾರ್ಯಾಚರಣೆ

ಮೈಸೂರು: ವಿವಿಧ ಗ್ರಾಮಗಳಲ್ಲಿ ಕಾಣಿಸಿಕೊಂಡ ಹುಲಿ- ಮುಂದುವರೆದ ಕಾರ್ಯಾಚರಣೆ

ಮೈಸೂರು: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಹುಲಿ ಕಾಣಿಸಿಕೊಂಡ ಹಿನ್ನೆಲೆ, ಚಿರತೆ ಕಾರ್ಯಪಡೆ ಹಾಗೂ ಅರಣ್ಯ ಸಿಬ್ಬಂದಿಗಳು ಕಾರ್ಯಾಚರಣೆ ಮುಂದುವರೆಸಿದ್ದಾರೆ.

ಮೈಸೂರಿನ ದಡದಹಳ್ಳಿಯ ತೋಟವೊಂದರಲ್ಲಿ ಹುಲಿ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಅರಣ್ಯ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. 

ತಾಯಿಯಿಂದ ಬೇರ್ಪಟ್ಟಿರುವ ಹುಲಿಯಾಗಿದ್ದು, ಇದು ಮೈಸೂರಿನ ಸುತ್ತಮುತ್ತ ಗ್ರಾಮಗಳಲ್ಲಿ ಓಡಾಡುತ್ತಿದೆ ಎನ್ನಲಾಗಿದೆ. ಹುಲಿ ಆಗಾಗ ಸ್ಥಳ ಬದಲಾವಣೆ ಮಾಡುತ್ತಿರುವುದರಿಂದ ಕಾರ್ಯಾಚರಣೆಯನ್ನ ಪದೇ ಪದೇ ಬದಲಾಯಿಸುವ ಅನಿವಾರ್ಯತೆ ಎದುರಾಗಿದೆ.

ಹುಲಿ ಚಲನವಲನ ಪತ್ತೆಗೆ ಟ್ರ್ಯಾಪ್ ಕ್ಯಾಮರಾ, ನೆಟ್ ವರ್ಕ್ ಕ್ಯಾಮರಾ, ಐ ಆರ್ ಕ್ಯಾಮರಾ ಬಳಸಲಾಗುತ್ತಿದೆ. ಹುಲಿ ಸೆರೆಗೆ ಬೋನಿರಿಸಲಾಗಿದೆ. ಸಾರ್ವಜನಿಕರು ಹುಲಿ ಕಾಣಿಸಿಕೊಂಡರೆ ಸಹಾಯವಾಣಿ 1926 ಮಾಹಿತಿ ಮಾಡಿ. ಹುಲಿ ಕಾಣಿಸಿಕೊಂಡ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಬಾರದು. ಅರಣ್ಯ ಇಲಾಖೆ ಸಿಬ್ಬಂದಿಗಳ ಕಾರ್ಯಾಚರಣೆಗೆ ಸಹಕಾರ ನೀಡಬೇಕು ಎಂದು ಸಾರ್ವಜನಿಕರಲ್ಲಿ ಮೈಸೂರು ಅರಣ್ಯ ಇಲಾಖೆ ಮನವಿ ಮಾಡಿದೆ.

RELATED ARTICLES
- Advertisment -
Google search engine

Most Popular