ಮೈಸೂರು :ರಾಜ್ಯ ನಗರಾಭಿವೃದ್ಧಿ ಸಂಸ್ಥೆಯ ವತಿಯಿಂದ ಚುನಾಯಿತ ಜನಪ್ರತಿನಿಧಿಗಳಿಗೆ ‘ನಗರಾಡಳಿತ’ ವಿಷಯ ಕುರಿತು ಗುಂಡ್ಲುಪೇಟೆ ಪುರಸಭೆಯಲ್ಲಿ ಆಯ್ಕೆಗೊಂಡಿರುವ ಚುನಾಯಿತ ಪ್ರತಿನಿಧಿಗಳಿಗೆ ರಾಜ್ಯ ನಗರಾಭಿವೃದ್ಧಿ ಸಂಸ್ಥೆ ಮೈಸೂರು ವತಿಯಿಂದ ಆಯೋಜಿಸಲಾಗಿತ್ತು. ತರಬೇತಿಯನ್ನು ಸಂಸ್ಥೆ ನಿರ್ದೇಶಕರಾದ ಶ್ರೀ ವೆಂಕಟೇಶ ಕಡಗದ ಕೈ ಉದ್ಘಾಟಿಸಿದರು. ಸಂಸ್ಥೆ ಉಪನಿರ್ದೇಶಕರು ಶ್ರೀ ರಾಜು ಸಿ ರವರು ಪ್ರೇರಣಾ ನುಡಿಗಳ ನಾಡಿದರು. ತರಬೇತಿಯ ಸಂಯೋಜಕರು ಹಾಗೂ ಬೋಧಕರಾದ ಬಿ ವಿ ವೆಂಕಟೇಶ್ ಮತ್ತು ಶ್ರೀಮತಿ ತೇಜಸ್ವಿನಿ ಕೆ ಹಾಗೂ ಬೋಧಕೇತರ ಸಿಬ್ಬಂದಿಗಳು ಹಾಜರಿದ್ದರು..
ಈ ಸಂದರ್ಭದಲ್ಲಿ ಗುಂಡ್ಲುಪೇಟೆ ಪುರಸಭೆ & ಜಮಕಂಡಿ ಚುನಾಯಿತ ಜನಪ್ರತಿನಿಧಿಗಳು ಹಾಜರಿದ್ದರು.
