Monday, December 2, 2024
Google search engine

Homeಕ್ಯಾಂಪಸ್ ಕಲರವಮೈಸೂರು: ಬಗೆಹರಿಯದ ಮಹಾರಾಣಿ ಕಾಲೇಜಿನ ವಿದ್ಯಾರ್ಥಿಗಳ ಸಮಸ್ಯೆ; AIDSO ನೇತೃತ್ವದಲ್ಲಿ ಮುಂದುವರೆದ ಹೋರಾಟ

ಮೈಸೂರು: ಬಗೆಹರಿಯದ ಮಹಾರಾಣಿ ಕಾಲೇಜಿನ ವಿದ್ಯಾರ್ಥಿಗಳ ಸಮಸ್ಯೆ; AIDSO ನೇತೃತ್ವದಲ್ಲಿ ಮುಂದುವರೆದ ಹೋರಾಟ

ಮೈಸೂರು: ಎಸ್. ಸಿ ,ಎಸ್. ಟಿ ವಿದ್ಯಾರ್ಥಿಗಳಿಗೆ ಜೀರೋ ಪೇಮೆಂಟ್ ತೆಗೆದು ಹಾಕಿ, ಧೀಡೀರನೆ ಪ್ರವೇಶ ಶುಲ್ಕವನ್ನು ಕಟ್ಟುವಂತೆ ಒತ್ತಾಯಿಸುತ್ತಿರುವದರ ವಿರುದ್ಧ ಮತ್ತು ಪರೀಕ್ಷಾ ಶುಲ್ಕ ಏರಿಕೆಯ ವಿರುದ್ಧ ಎಐಡಿಎಸ್ಓ ವಿದ್ಯಾರ್ಥಿ ಸಂಘಟನೆಯ ನೇತೃತ್ವದಲ್ಲಿ ಜಂಟಿ ನಿರ್ದೇಶಕರ ಕಛೇರಿ ಎದುರು ಮಹಾರಾಣಿ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿ ಮನವಿ ಪತ್ರವನ್ನು ಸಲ್ಲಿಸಲಾಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಜಿಲ್ಲಾ ಕಾರ್ಯದರ್ಶಿಗಳಾದ ನಿತಿನ್ ಅವರು ಮಾತನಾಡಿ ಮಹಾರಾಣಿ ಕಾಲೇಜಿನ ಜೀರೋ ಪೇಮೆಂಟ್ ತೆಗೆದು ಹಾಕಿರುವುದನ್ನು ಮತ್ತು ಶುಲ್ಕ ಏರಿಕೆ ಸಮಸ್ಯೆಯನ್ನು ಮೈಸೂರು ವಿಶ್ವವಿದ್ಯಾನಿಲಯ ಕುಲಪತಿಗಳೊಂದಿಗೆ ಮಾತನಾಡಿದಾಗ ನಮಗೂ ಮಹಾರಾಣಿ ಕಾಲೇಜಿಗೂ ಯಾವುದೇ ಸಂಬಂಧವಿಲ್ಲ, ಇದು ಸರ್ಕಾರದ ಕೆಳಗೆ ಬರುತ್ತದೆ ಎಂದು ಹೇಳಿದರು.

ಜಂಟಿ ನಿರ್ದೇಶಕರ ಜೊತೆ ಮಾತನಾಡಿದಾಗ ಇದು ಮೈಸೂರು ವಿಶ್ವವಿದ್ಯಾನಿಲಯದ ಸಮಸ್ಯೆ ನಮಗೆ ಸಂಬಂಧಪಟ್ಟದಲ್ಲ ಎಂದು ಹೇಳಿದರು. ವಿಶ್ವವಿದ್ಯಾನಿಲಯದ ಮತ್ತು ಜಂಟಿ ನಿರ್ದೇಶಕರ ಈ ನಿರ್ಲಕ್ಷ್ಯ ಧೋರಣೆ ವಿದ್ಯಾರ್ಥಿಗಳಲ್ಲಿ ಆಕ್ರೋಶವನ್ನು ಉಂಟುಮಾಡಿದೆ. ಪರೀಕ್ಷೆಗೆ ಇನ್ನು 20 ದಿನಗಳೆ ಬಾಕಿ ಇರುವುದು ಆದರೂ ಪ್ರತಿದಿನವೂ ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯಕ್ಕೆ ಅಲೆಯುತ್ತಿದ್ದಾರೆ , ಆದರೆ ಅವರ ಸಮಸ್ಯೆಗಳನ್ನು ಬಗೆಹರಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ವರ್ಷದವರೆಗೂ ಎಸ್. ಸಿ ,ಎಸ್. ಟಿ ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕವನ್ನು ಪಾವತಿಸುತ್ತಿರಲಿಲ್ಲ, ಜೀರೋ ಪೇಮೆಂಟ್ ಇರುತ್ತಿತ್ತು. ಆದರೆ ಈ ವರ್ಷ ಏಕಾಏಕಿ ವಿದ್ಯಾರ್ಥಿಗಳಿಗೆ 1700 ರಿಂದ 2000 ವರೆಗೆ ಪರೀಕ್ಷಾ ಶುಲ್ಕವನ್ನು ಪಾವತಿಸುವಂತೆ ಒತ್ತಾಯಿಸುತ್ತಿದ್ದಾರೆ. ಇದರ ಜೊತೆಗೆ ಓಬಿಸಿ ಹಾಗೂ ಇತರೆ ವರ್ಗದ ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕವು ಹಿಂದಿನ ವರ್ಷಕ್ಕಿಂತ ಈ ವರ್ಷ ಹೆಚ್ಚು ಮಾಡಿದ್ದಾರೆ.ಇದರ ವಿರುದ್ಧ ಮಹಾರಾಣಿ ಪದವಿ ಕಾಲೇಜಿನ ವಿದ್ಯಾರ್ಥಿಗಳು ಎರಡು ಬಾರಿ ಪ್ರತಿಭಟನೆ ಮಾಡಿದ್ದಾರೆ ಆದರೆ ಅವರಿಗೆ ಯಾವುದೇ ರೀತಿ ನ್ಯಾಯ ದೊರಕಿಲ್ಲ.

ಬಹುಪಾಲು ವಿದ್ಯಾರ್ಥಿಗಳಿಗೆ ಇಲ್ಲಿಯವರೆಗೆ ಸೂಕ್ತ ಸಮಯಕ್ಕೆ ವಿದ್ಯಾರ್ಥಿ ವೇತನ ಬಂದಿಲ್ಲ , ಆದ್ದರಿಂದ ಶುಲ್ಕವನ್ನು ಕಟ್ಟಲು ಬಹಳ ಕಷ್ಟವಾಗಿದೆ. ಮಹಾರಾಣಿ ಕಾಲೇಜಿಗೆ ಸುತ್ತಮುತ್ತಲಿನ ಎಲ್ಲಾ ಹಳ್ಳಿಯ ಬಡ ವಿದ್ಯಾರ್ಥಿನಿಯರು ವಿದ್ಯಾಭ್ಯಾಸ ಪಡೆದುಕೊಳ್ಳಲು ಬರುತ್ತಾರೆ, ಆದರೆ ಸರ್ಕಾರ ಮತ್ತು ಮೈಸೂರು ವಿಶ್ವವಿದ್ಯಾನಿಲಯ ತನ್ನ ವ್ಯಾಪಾರ ಧೋರಣೆಯಿಂದ ವಿದ್ಯಾರ್ಥಿಗಳಿಂದ ಸುಲಿಗೆ ಮಾಡಲು ಪ್ರಯತ್ನಿಸುತ್ತಿದೆ. ಆದರಿಂದ ಈ ಕೂಡಲೇ ಎಸ್. ಸಿ ,ಎಸ್ .ಟಿ ವಿದ್ಯಾರ್ಥಿಗಳಿಗೆ ಜೀರೋ ಪೇಮೆಂಟ್ ಮಾಡಿಸಿಕೊಳ್ಳಬೇಕು ಮತ್ತು ಬಡ ವಿದ್ಯಾರ್ಥಿಗಳಿಂದ ಶಿಕ್ಷಣವನ್ನು ಕಸಿದುಕೊಳ್ಳುವ ಈ ಧೋರಣೆಯನ್ನು ಕೈಬಿಡಬೇಕು .

ಬೇಡಿಕೆಗಳು.

  1. ಈ ಹಿಂದಿನಂತೆ ಎಸ್. ಸಿ ,ಎಸ್. ಟಿ ವಿದ್ಯಾರ್ಥಿಗಳಿಗೆ ಜೀರೋ ಪೇಮೆಂಟ್ ಮಾಡಿಸಿಕೊಳ್ಳಬೇಕು.
  2. ಪರೀಕ್ಷಾ ಪ್ರವೇಶಾತಿ ಶುಲ್ಕದ ಏರಿಕೆಯನ್ನು ಕೈ ಬಿಡಬೇಕು.

ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ನಿತಿನ್, ಉಪಾಧ್ಯಕ್ಷರಾದ ಸ್ವಾತಿ ಪದಾಧಿಕಾರಿಗಳಾದ ಹೇಮ, ಚಂದ್ರಿಕಾ, ಅಂಜಲಿ, ಅಭಿಷೇಕ್ ಹಾಗೂ ಮಹಾರಾಣಿ ಕಾಲೇಜಿನ ವಿದ್ಯಾರ್ಥಿಗಳಾದ ಸಿಂಚನ ,ರಂಜಿತ, ಚಂದನ, ನಿಕಿತ ,ರಕ್ಷಿತ ಹಾಗೂ ನೂರಾರು ಮಹಾರಾಣಿ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

RELATED ARTICLES
- Advertisment -
Google search engine

Most Popular