ಜೆ ಎಸ್ ಎಸ್ ಮೈಸೂರು ಅರ್ಬನ್ ಹಾತ್ ನಲ್ಲಿ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಮಗ್ಗ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ.
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ನಾಗರಿಕರಿಗೊಂದು ಸುವರ್ಣ ಅವಕಾಶ (ಇಂದಿನಿಂದ) 11-08-2023 ರಿಂದ 20-08-2023 ರ ವರೆಗೆ ಜೆಎಸ್ಎಸ್ ಮೈಸೂರು ಅರ್ಬನ್ ಹಾತ್ ನಲ್ಲಿ ವಸ್ತ್ರ ಉತ್ಸವ -2023 ಮಗ್ಗ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಏರ್ಪಡಿಸಲಾಗಿದೆ.
ನೇಕಾರರು ನೇಕಾರಸಹಕಾರ ಸಂಘಗಳು ತಯಾರು ಮಾಡುತ್ತಿರುವ ಕೈಮಗ್ಗ ಉತ್ಪನ್ನಗಳಿಗೆ ಹೆಚ್ಚಿನ ಮಾರುಕಟ್ಟೆಯನ್ನು ಒದಗಿಸುವ ದೃಷ್ಟಿಯಿಂದ ಮತ್ತು ಕೈಮಗ್ಗ ಉತ್ಪನ್ನಗಳು ನಶಿಸಿ ಹೋಗದಂತೆ ಕಾಪಾಡಿಕೊಂಡು ಹೋಗಲು ಈ ಮೇಳವನ್ನು ಆಯೋಜನೆ ಮಾಡಲಾಗಿದೆ. ಕೈಮಗ್ಗ ನೇಕಾರರು ಮತ್ತು ಕರಕುಶಲಕರ್ಮಿಗಳು ತಾವು ತಯಾರು ಮಾಡಿದ ಉತ್ಪನ್ನಗಳನ್ನು ಒಂದೇ ಸೂರಿನಡಿ ಮಾರಾಟ ಮಾಡಲು ಅವಕಾಶವನ್ನು ಕಲ್ಪಿಸಿಕೊಡಲಾಗುತ್ತಿದೆ.
ಈ ಮೇಳದಲ್ಲಿ ದೇಶದ ಸುಮಾರು 75ಕ್ಕೂ ಹೆಚ್ಚು ಕೈಮಗ್ಗ ನೇಕಾರರು ಮತ್ತು ಕುಶಲಕರ್ಮಿಗಳು ಉತ್ಪಾದಿಸಿರುವ ಉತ್ಪನ್ನಗಳು ಪ್ರದರ್ಶನ ಮತ್ತು ಮಾರಾಟ ಗೊಳ್ಳುತ್ತಿದೆ.
ಮೇಳದಲ್ಲಿ ಪ್ರದರ್ಶನ ಗೊಳ್ಳುತ್ತಿರುವ ಉತ್ಪನ್ನಗಳು:
ನಮ್ಮ ರಾಜ್ಯದ ರೇಷ್ಮೆ ಸೀರೆ, ಮೊಳಕಾಲ್ಕೂರು ಸೀರೆ ಇಳಕಲ್ ಸೀರೆ ಕಸೂತಿ ಸೀರೆ ತಮಿಳುನಾಡು ರಾಜ್ಯದ ಪರಿಶುದ್ಧ ಕಾಂಜಿವರಂ ಸೀರೆಗಳು, ಕೇರಳ ರಾಜ್ಯದ ಕೈಮಗ್ಗ ಉತ್ಪನ್ನಗಳು, ಬಿಹಾರ್ ತಸ್ಕರ್ ಸೀರೆಗಳು, ಪಶ್ಚಿಮ ಬಂಗಾಳದ ಕಾಂತಾ ಸೀರೆ, ಬಲಚುರಿ ಸೀರೆ, ಭುಟಿಕ್ ಸೀರೆ ಕಾಟನ್ ಸೀರೆಗಳು, ಉತ್ತರ ಪ್ರದೇಶ ರಾಜ್ಯದ ಬನಾರಸಿ ಸಿಲ್ಕ್ ಸೀರೆಗಳು, ಚಿಕನ್ ಎಂಬ್ರಾಡರಿ ಸೀರೆಗಳು, ಮಧ್ಯ ಪ್ರದೇಶದ ಚಂದೇರಿ, ಮಹೇಶ್ವರಿ ಸಿಲ್ಕ್ ಸೀರೆಗಳು, ಒರಿಸ್ಸಾ ರಾಜ್ಯದ ಸಂಬಲ್ವುರಿ ಸೀರೆ ಇಕ್ಕತ್ ಸೀರೆಗಳು, ಬೋಂಕಾಯಿ ಸೀರ ಕಾಶ್ಮೀರದ ಪರೀನಾ ಶಾಲ್ ಗಳು, ಆಂಧ್ರ ಪ್ರದೇಶ ರಾಜ್ಯದ ಗೊಡ್ವಲ್ ಕಲಮ್ಮಾರಿ ಸೀರೆಗಳು, ಪೋಚಂಪಲ್ಲಿ ಸೀರೆಗಳು ಗುಜರಾತ್ ರಾಜ್ಯದ ಪಟೋಲಾ ಸೀರೆಗಳು, ವಿವಿಧ ರಾಜ್ಯಗಳ ಡ್ರಸ್ ಮಟೀರಿಯಲ್ ಗಳು ಹಾಗೂ ಕರಕುಶಲಕರ್ಮಿಗಳು ತಯಾರು ಮಾಡಿರುವ ಕರಕುಶಲ ವಸ್ತುಗಳು ಒಂದೇ ಸೂರಿನಡಿ ಮೈಸೂರಿನ ಜನತೆಗೆ ದೊರೆಯುತ್ತವೆ.
ಇಂದು ನಡೆದ ಕಾರ್ಯಕ್ರಮದಲ್ಲಿ ಕೆ.ಆರ್. ಕ್ಷೇತ್ರದ ಶಾಸಕ ಶ್ರೀವತ್ಸ ಅವರು ಮೇಳವನ್ನ ಉದ್ಘಾಟಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಲೆಕ್ಕಪರಿಶೋಧಕ ವಿಭಾಗದ ನಿರ್ದೇಶಕ ಕೆ.ಆರ್.ಸಂತಾನಂ, ಯೋಜನಾಧಿಕಾರಿಗಳಾದ ಎಂ ಶಿವನಂಜಸ್ವಾಮಿ, ರಾಕೇಶ್ ರೈ, ಸಂಯೋಜನಾಧಿಕಾರಿ ಸುಂದರಪ್ಪ, ಮಲ್ಲಿಕಾರ್ಜುನ ಸ್ವಾಮಿ ಭಾಗವಹಿಸಿದ್ದರು.
