Friday, April 18, 2025
Google search engine

Homeರಾಜ್ಯಸುದ್ದಿಜಾಲಮೈಸೂರು ವಾರಿಯರ್ಸ್:ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಆಶೀರ್ವಾದ ಪಡೆಯುವ ಮೂಲಕ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ

ಮೈಸೂರು ವಾರಿಯರ್ಸ್:ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಆಶೀರ್ವಾದ ಪಡೆಯುವ ಮೂಲಕ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ

ಮೈಸೂರು: ಮೈಸೂರು ವಾರಿಯರ್ಸ್‌ನ ಮಾಲೀಕರು ಮತ್ತು ಸೈಕಲ್ ಪ್ಯೂರ್ ಅಗರಬತ್ತಿಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಅರ್ಜುನ್ ರಂಗ , ಮೈಸೂರು ವಾರಿಯರ್ಸ್ ತಂಡದ ಕರುಣ್ ನಾಯರ್, ಸುಚಿತ್ ಜೆ, ಗೌತಮ್ ಕೆ, ಮನೋಜ್ ಭಾಂಡಗೆ, ಪ್ರಸಿದ್ಧ್ ಕೃಷ್ಣ , ಸಿ ಎ ಕಾರ್ತಿಕ್, ವೆಂಕಟೇಶ್ ಎಂ, ವಿದ್ಯಾಧರ್ ಪಾಟೀಲ್ ಮತ್ತು ಧನುಷ್ ಗೌಡ ಸೇರಿದಂತೆ ತಂಡದ 13 ಆಟಗಾರರು ಚಾಮುಂಡೇಶ್ವರಿ ದೇವಿಯ ಆಶೀರ್ವಾದ ಪಡೆದು ಮಹಾರಾಜ ಟ್ರೋಫಿ ಪಂದ್ಯಾವಳಿಗಾಗಿ ತರಬೇತಿಗೆ ಚಾಲನೆ ನೀಡಿದ್ದಾರೆ .

ದೇಗುಲದಲ್ಲಿ 6 ಅಡಿ ಎತ್ತರದ ಅಖಂಡ ಜ್ಯೋತಿಯನ್ನು ಬೆಳಗಿಸಿ ದೇವಿಯ ಆಶೀರ್ವಾದವನ್ನು ಕೋರಲಾಯಿತು. ಮಾರ್ಗದರ್ಶನ ನೀಡಲು ಮತ್ತು ತಂಡದ ಗೆಲುವಿಗೆ ಸಹಾಯ ಮಾಡಲು ತಂಡದವರು ದೇವಿಯನ್ನು ಕೋರಿಕೊಂಡರು.

ಚಾಮುಂಡೇಶ್ವರಿ ದೇಗುಲ ಮೈಸೂರಿನ ಪ್ರಸಿದ್ಧ ಯಾತ್ರಾ ಸ್ಥಳವಾಗಿದೆ. ಏನಾದರೂ ಮಹತ್ವದ ಕಾರ್ಯಗಳಿಗೆ ಚಾಮುಂಡೇಶ್ವರಿ ದೇವಿಯ ಆಶೀರ್ವಾದ ಪಡೆಯುವುದು ಪ್ರತೀತಿಯಾಗಿದೆ . 2024 ರ ಆಗಸ್ಟ್ 15 ರಿಂದ ಸೆಪ್ಟೆಂಬರ್ 1 ರವರೆಗೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಮಹಾರಾಜ ಮಹಾರಾಜ ಟ್ರೋಫಿಗಾಗಿ ಮೈಸೂರು ವಾರಿಯರ್ಸ್‌ ತಂಡ ಈ ಮೂಲಕ ಸಿದ್ಧತೆ ಆರಂಭಿಸಿದೆ.

RELATED ARTICLES
- Advertisment -
Google search engine

Most Popular