Friday, April 18, 2025
Google search engine

Homeರಾಜ್ಯಸುದ್ದಿಜಾಲಮೈಸೂರು: ಅದ್ದೂರಿಯಾಗಿ ನಡೆದ “ಯೋಗ ಸರಪಳಿ-ಪ್ರಜಾಪ್ರಭುತ್ವಕ್ಕಾಗಿ ಯೋಗ” ಕಾರ್ಯಕ್ರಮ

ಮೈಸೂರು: ಅದ್ದೂರಿಯಾಗಿ ನಡೆದ “ಯೋಗ ಸರಪಳಿ-ಪ್ರಜಾಪ್ರಭುತ್ವಕ್ಕಾಗಿ ಯೋಗ” ಕಾರ್ಯಕ್ರಮ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾದ ಐದನೇ ದಿನವಾದ ಇಂದು ಯೋಗ ದಸರಾ ಉಪ ಸಮಿತಿ ವತಿಯಿಂದ ಅರಮನೆಯ ಆವರಣದಲ್ಲಿ “ಯೋಗ ಸರಪಳಿ – ಪ್ರಜಾಪ್ರಭುತ್ವಕ್ಕಾಗಿ ಯೋಗ” ಕಾರ್ಯಕ್ರಮ ಆಯೋಜಿಸಲಾಗಿದ್ದು, ಯೋಗ ಅಧಿಕಾರೇತರ ಉಪಸಮಿತಿಯ ಅಧ್ಯಕ್ಷರಾದ ಎಂ.ಮಹೇಶ್ ಅವರು ಉದ್ಘಾಟನೆ ಮಾಡಿದರು.

4000 ಕ್ಕೂ ಹೆಚ್ಚು ಜನರು ಭಾಗಿ:

ಯೋಗ ಸರಪಳಿಯಲ್ಲಿ ಯೋಗಪಟುಗಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸೇರಿದಂತೆ ಮೈಸೂರಿನ ವಿವಿಧೆಡೆಯಿಂದ ಆಗಮಿಸಿದ್ದ, ಸುಮಾರು 4000 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದು, ಬೆಳಗ್ಗೆ 6 ಗಂಟೆಗೆ ಅರಮನೆಯ ಮೈದಾನ ಸಾವಿರಾರು ಜನರಿಂದ ತುಂಬಿತ್ತು. ಈ ದೃಶ್ಯವು ಯೋಗದ ತವರೂರೆನಿಸಿಕೊಳ್ಳುವ ಮೈಸೂರಿನ ಸೊಬಗನ್ನು ಹೆಚ್ಚಿಸಿತು.

ಸಂವಿಧಾನ ಪೀಠಿಕೆ ಬೋಧನೆ, ಪ್ರಜಾಪ್ರಭುತ್ವದ ಆಶಯಗಳನ್ನು ಸಾರಿದ ಯೋಗ ಗುಚ್ಚ ಪ್ರದರ್ಶನ, ಯೋಗ ಗುಚ್ಚ ನೃತ್ಯ, ವಿವಿಧ ಶಾಲೆಯ ವಿದ್ಯಾರ್ಥಿಗಳಿಂದ ಯೋಗ ನೃತ್ಯ ಪ್ರದರ್ಶನ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳನ್ನು ನೆರದಿದ್ದಂತಹ ಜನರು ಕಣ್ತುಂಬಿಕೊoಡರು.

ಯೋಗ ಸರಪಳಿ ಸೇರಿದಂತೆ ವಿವಿಧ ಭಂಗಿಗಳ ಪ್ರದರ್ಶನ:

ಯೋಗಪಟುಗಳಿಂದ ಯೋಗ ಸರಪಳಿಯ ನಿರ್ಮಾಣ, ಸೂರ್ಯ ನಮಸ್ಕಾರ, ವಜ್ರಾಸನ, ತ್ರಿಕೋನಾಸನ, ಸಿದ್ಧಾಸನ, ಅರ್ಧಚಕ್ರಾಸನ ಸೇರಿದಂತೆ ಯೋಗದ ವಿವಿಧ ಭಂಗಿಗಳನ್ನು ಪ್ರದರ್ಶಿಸಿದರು.

ಕಾರ್ಯಕ್ರಮದಲ್ಲಿ ಜೆ.ಎಸ್.ಎಸ್.ಸಮೂಹದ ಮುಖ್ಯಸ್ಥರಾದ ಶ್ರೀಹರಿ, ಯೋಗ ದಸರಾ ಉಪಸಮಿತಿಯ ವಿಶೇಷಾಧಿಕಾರಿಗಳಾದ ಕೆ.ರಮ್ಯ, ಕಾರ್ಯಾಧ್ಯಕ್ಷರಾದ ಅನಂತರಾಜು, ಕಾರ್ಯದರ್ಶಿಗಳಾದ ಪುಷ್ಪ ಸೇರಿದಂತೆ ಇನ್ನಿತರ ಸದಸ್ಯರು ಭಾಗವಹಿಸಿದ್ದರು.

RELATED ARTICLES
- Advertisment -
Google search engine

Most Popular