ಮೈಸೂರು: ಇಂಡಿಕಾ ಯೋಗ ಸಂಸ್ಥೆ ವತಿಯಿಂದ ಡಿ.೧೨ರಿಂದ ೧೫ರವರೆಗೆ ನಗರದ ನಜರ್‌ಬಾದ್ ಪೊಲೀಸ್ ಠಾಣೆ ಬಳಿಯ ವಿಂಡ್ ಚೈಮ್ಸ್‌ನಲ್ಲಿ ಮೈಸೂರು ಯೋಗ ಉತ್ಸವ ಆಯೋಜಿಸಲಾಗಿದೆ ಎಂದು ಮುಖ್ಯಸ್ಥ ಡಾ.ವಿನಯಚಂದ್ರ ಬನವತಿ ತಿಳಿಸಿದರು.
ನಾಳೆ ಡಿ.೧೨ರಂದು ಬೆಳಗ್ಗೆ ೧೧ಕ್ಕೆ ಎಸ್‌ವಿವೈಎಎಸ್‌ಎ ಯೋಗ ವಿವಿ ಉಪ ಕುಲಪತಿ ಡಾ.ಎನ್.ಕೆ.ಮಂಜುನಾಥ್ ಶರ್ಮ ಉದ್ಘಾಟಿಸುವರು. ಇನ್ನಿತರ ಗಣ್ಯರು ಹಾಜರಿರುವರು. ಯೋಗ ಉತ್ಸವದಲ್ಲಿ ಹೆಸರಾಂತ ಯೋಗ ಶಿಕ್ಷಕರು ಪಾಲ್ಗೊಳ್ಳಲಿದ್ದಾರೆ. ಅಭ್ಯಾಸ ಗೋಷ್ಠಿ, ಕಮ್ಮಟ, ಕಾರ್ಯಾಗಾರ, ಸ್ವಾಸ್ಥ್ಯ ಕುರಿತ ವಸ್ತು ಪ್ರದರ್ಶನ, ಯೋಗ, ಆಯುರ್ವೇದ, ಆರೋಗ್ಯ ಮೊದಲಾದವುಗಳಿಗೆ ಸಂಬಂಧಿಸಿದ ಉತ್ಪನ್ನ ಮತ್ತು ಸೇವೆ ಪ್ರದರ್ಶನ, ಸಾಂಸ್ಕೃತಿಕ ಸಂಜೆ ಆಯೋಜಿಸಲಾಗಿದೆ ಎಂದರು.
ಎಲ್ಲರಿಗೂ ಉಚಿತ ಪ್ರವೇಶವಿದೆ. ಭಾರತೀಯ ಯೋಗ ಸಂಸ್ಥೆ, ಮೈಸೂರು ಯೋಗ ಒಕ್ಕೂಟ, ಯೂರೋಪ್ ಯೋಗ ಒಕ್ಕೂಟ ಮೊದಲಾದವು ಸಹಯೋಗ ನೀಡಿವೆ. ಹೆಚ್ಚಿನ ಮಾಹಿತಿಗಾಗಿ ದೂ. ೯೮೮೦೧ ೯೩೮೭೨ನ್ನು ಸಂಪರ್ಕಿಸಬಹುದಾಗಿದೆ. ಎಂದು ತಿಳಿಸಿದರು.