ಮೈಸೂರು : ನಗರದ ಶ್ರೀ ಜಯಚಾಮರಾಜೇಂದ್ರ ಮೃಗಾಲಯದ 13 ವರ್ಷದ ಗಂಡು ಹುಲಿ ‘ಪೃಥ್ವಿ’ ಬುಧವಾರ ನಿಧನವಾಗಿದೆ.
ನರರೋಗದಿಂದ ಬಳಲುತ್ತಾ ಕಳೆದೆರಡು ದಿನಗಳಿಂದ ಆಹಾರ ಸೇವಿಸದೇ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ವಿಶೇಷ ತಂಡದಿಂದ ಚಿಕಿತ್ಸೆ ಮುಂದುವರಿಸಿದ್ದರಾದರೂ ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ನಿಧನವಾಗಿದೆ. ಪೃಥ್ವಿ ಮೃಗಾಲಯದ ಪ್ರಮುಖ ಆಕರ್ಷಣೆಯಾಗಿತ್ತು ಮತ್ತು ಪ್ರವಾಸಿಗರಿಗೆ ಚೆನ್ನಾಗಿ ಪರಿಚಿತವಾಗಿತ್ತು.



