ವರದಿ: ಸತೀಶ್ ಆರಾಧ್ಯ
ಮೈಸೂರು: ನಗರದ ಸ್ಪೋರ್ಟ್ಸ್ ಪೆವಿಲಿಯನ್ ಗ್ರೌಂಡ್ ನಲ್ಲಿ ಟೀಮ್ ಗಂಧದ ಗುಡಿ ಭೀಮನಹಳ್ಳಿ ಮತ್ತು ಅಪ್ಪು ಬಾಯ್ಸ್ ಭೀಮನಹಳ್ಳಿ ನೇತೃತ್ವದಲ್ಲಿ ಆರಾಧ್ಯ ಜನಾಂಗದವರಿಗಾಗಿ ಆಯೋಜಿಸಿದ್ದ ಆರಾಧ್ಯ ಪ್ರೀಮಿಯರ್ ಲೀಗ್ – 6 ರಾಜ್ಯಮಟ್ಟದ ಕ್ರಿಕೆಟ್ ಟೂರ್ನಿಯಲ್ಲಿ ಮಲ್ಲಿಕ್ ಆರಾಧ್ಯ ನಾಯಕತ್ವದ ಮೈಸೂರಿನ ಪವರ್ ಹಿಟ್ಟರ್ಸ್ ತಂಡ ಪ್ರಥಮ ಸ್ಥಾನ ಪಡೆದು ಈ ಬಾರಿಯ ಚಾಂಪಿಯನ್ ಆಗಿ ಹೊರಹೊಮ್ಮಿತು.
ಎರಡು ದಿನ ನಡೆದ ಕ್ರಿಕೆಟ್ ಟೂರ್ನಿಯಲ್ಲಿ ಟೂರ್ನಿ ಆಯೋಜಿಸಿದ್ದ ಎಚ್.ಡಿ ಕೋಟೆ ತಾಲೂಕಿನ ಭೀಮನಹಳ್ಳಿಯ ಲೋಕೇಶ್ ಆರಾಧ್ಯ ನಾಯಕತ್ವದ ಟೀಮ್ ಗಂಧದ ಗುಡಿ , ಅವಿನಾಶ್ ಆರಾಧ್ಯ ನಾಯಕತ್ವದ ಅಪ್ಪು ಬಾಯ್ಸ್, ಮೈಸೂರಿನ ಪವರ್ ಹಿಟ್ಟರ್ಸ್, ಆರಾಧ್ಯ ಟೈಟಾನ್ಸ್ ಮಂಡ್ಯ, ಜೆ.ಪಿ ಕ್ರಿಕೆಟರ್ಸ್, ದಕ್ಷಿಣ ಕಾಶಿ ಕ್ರಿಕೆಟರ್ಸ್, ಆರಾಧ್ಯ ಚಾಲೆಂಜರ್ಸ್, ಆರಾಧ್ಯ ಸ್ಟ್ರೈಕರ್ಸ್ ಸೇರಿ ಒಟ್ಟು 8 ತಂಡಗಳು ಭಾಗವಹಿಸಿದ್ದವು.
ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮೈಸೂರಿನ ಪವರ್ ಹಿಟ್ಟರ್ಸ್ ತಂಡ 6 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 55 ರನ್ ಗೆಲುವಿನ ಗುರಿ ನೀಡಿತು ಬಳಿಕ ಬ್ಯಾಟ್ ಮಾಡಿದ ಸುದರ್ಶನ್ ಆರಾಧ್ಯ ನಾಯಕತ್ವದ ಮಂಡ್ಯದ ಆರಾಧ್ಯ ಟೈಟಾನ್ಸ್ ತಂಡ 6 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 41 ರನ್ ಗಳಿಸಿ 14 ರನ್ ಅಂತರದಿಂದ ಪರಾಭವಗೊಂಡು ದ್ವಿತೀಯ ಸ್ಥಾನ ಪಡೆದರು.

ವಿಜೇತ ತಂಡಕ್ಕೆ 25 ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ ಹಾಗೂ ರನ್ನರ್ ಆಫ್ ತಂಡಕ್ಕೆ 15 ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಯಿತು, ಟೂರ್ನಿಯ ಉತ್ತಮ ಬ್ಯಾಟ್ಸ್ ಮನ್ ಪವರ್ ಹಿಟ್ಟರ್ ತಂಡದ ಮಧು ಆರಾಧ್ಯ ಉತ್ತಮ ಬೌಲರ್ ಅಪ್ಪು ಬಾಯ್ಸ್ ತಂಡದ ಕೀರ್ತನ್ ಆರಾಧ್ಯ ಮುಡಿಗೇರಿತು.
ಆರಾಧ್ಯ ಜನಾಂಗದ ವಿವಿಧ ಸಂಘ ಸಂಸ್ಥೆ ಪದಾಧಿಕಾರಿಗಳು ಸದಸ್ಯರು ಎರಡು ದಿನ ನಡೆದ ಕ್ರಿಕೆಟ್ ಟೂರ್ನಿಯಲ್ಲಿ ಭಾಗವಹಿಸಿ ವಿಜೇತ ತಂಡಗಳಿಗೆ ಪ್ರಶಸ್ತಿ ವಿತರಿಸಿ ಶುಭ ಕೋರಿದರು.
ಈ ಸಂದರ್ಭ ಮೈಸೂರಿನ ಉದ್ಯಮಿ ವಿಶ್ವರಾಧ್ಯ, ಹೆಚ್.ಡಿ ಕೋಟೆಯ ಉದ್ಯಮಿಗಳಾದ ಮಹೇಂದ್ರ ಆರಾಧ್ಯ, ಚಂದ್ರಶೇಖರ್ ಆರಾಧ್ಯ, ಜ್ಯೋತಿಷಿ ಪುಟ್ಟಸೋಮಾರಾದ್ಯ, ಭೀಮನಹಳ್ಳಿ ಪುಟ್ಟಸೋಮರಾಧ್ಯ, ಗುರುದೇವಾರದ್ಯ, ಹುಣಸೂರು ಹರೀಶ್ ಆರಾಧ್ಯ, ಹರಿನಹಳ್ಳಿ ನಟೇಶ್ ಆರಾಧ್ಯ, ನಿವೃತ್ತ ಉಪನ್ಯಾಸಕರಾದ ಮೋದುರು ಮಹೇಶ್ ಆರಾಧ್ಯ, ಉದ್ಯಮಿ ಬೆಂಗಳೂರಿನ ರೇಣುಕಾರಾಧ್ಯ, ವರಲಕ್ಷ್ಮಿ ಸ್ವೀಟ್ಸ್ ಕುಮಾರ್ ಆರಾಧ್ಯ, ಮಹೇಶ್ ಆರಾಧ್ಯ, ಮಲಿಯೂರು ರಾಜಣ್ಣ, ಅಶೋಕ್ ಹರೀನಹಳ್ಳಿ, ಯರಹಳ್ಳಿ ಪುಟ್ಟಸೋಮಾರಧ್ಯ, ಆರಕ್ಷಕ ಇಲಾಖೆ ಎಎಸ್ಐ ಸೋಮಶೇಖರ್ ಆರಾಧ್ಯ, ಹಬಟೂರು ಪ್ರಶಾಂತ್ ಆರಾಧ್ಯ, ಪಿರಿಯಾಪಟ್ಟಣ ತಾಲೂಕು ಕಾರ್ಯ ನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಬೆಕ್ಕರೆ ಸತೀಶ್ ಆರಾಧ್ಯ, ಹುಂಡಿಮಾಳ ಸೋಮಶೇಖರ್ ಆರಾಧ್ಯ, ಭೀಮನಹಳ್ಳಿ ಗ್ರಾಮದ ಎಚ್.ಪಿ ಚಂದ್ರಶೇಖರ್ ಆರಾಧ್ಯ, ಪಂಡಿತಾರಾಧ್ಯ, ಸೋಮಶೇಖರ್ ಆರಾಧ್ಯ, ಷಣ್ಮುಖಾರಾಧ್ಯ ಸೇರಿದಂತೆ ರಾಜ್ಯದ ವಿವಿದೆಡೆಯ ಆರಾಧ್ಯ ಜನಾಂಗ ಮುಖಂಡರು ಸಂಘ ಸಂಸ್ಥೆ ಪದಾಧಿಕಾರಿಗಳು ಸದಸ್ಯರು ಟೂರ್ನಿಯಲ್ಲಿ ಭಾಗವಹಿಸಿದ್ದ ಎಲ್ಲಾ ತಂಡಗಳ ಆಟಗಾರರು ಇದ್ದರು.