ಬೆಂಗಳೂರು: ಬೆಂಗಳೂರಿನಲ್ಲಿ ದಿನಾಂಕ 26/10/2024 ರಂದು ನೆಡೆದ Inspiration Awards and Summit ನಲ್ಲಿ ಪೃಥು ಪಿ ಅದ್ವೈತ್ ರವರನ್ನು Karnataka Glory Awards-2024 ರಲ್ಲಿ Raising Star ” Excellence in Best Talented Rising Star of Karnataka” ಎಂಬ ಬಿರುದು ಮತ್ತು ಪ್ರಶಸ್ತಿಯನ್ನು ವಿಶ್ರಾಂತ ಕರ್ನಾಟಕ ಪೋಲೀಸ್ ವರಿಷ್ಠಾಧಿಕಾರಿ S B ಚಬ್ಬಿ ರವರು ನೀಡಿದರು.
ಮೈಸೂರಿನ ಪೂರ್ಣ ಚೇತನ ಪಬ್ಲಿಕ್ ಶಾಲೆಯ ಮೂರನೇ ತರಗತಿ ವಿದ್ಯಾರ್ಥಿ ಪೃಥು ಪಿ ಅದ್ವೈತ್ ರವರು 30 ನಿಮಿಷದಲ್ಲಿ 150 ಶ್ಲೋಕಗಳನ್ನು ಪಠಿಸಿ ಏಕಕಾಲದಲ್ಲಿ ಮೂರು ವಿಶ್ವ ದಾಖಲೆ ನಿರ್ಮಿಸಿದ್ದರು.
ಇದನ್ನು ಗಮನಿಸಿದ Inspiration Awards and Summit ಸಂಸ್ಥೆಯು ಬೆಂಗಳೂರಿನಲ್ಲಿ ನಡೆದ Inspiration Awards and Summit ನ Karnataka Glory Award 2024 ರಲ್ಲಿ ಮೈಸೂರಿನ ಪೃಥು ಪಿ ಅದ್ವೈತ್ ರವರನ್ನು Rising Star ಎಂಬ ಪ್ರಶಸ್ತಿ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪೃಥು ಪಿ ಅದ್ವೈತ್ ರವರು ವಿಶ್ವದಾಖಲೆಯನ್ನು ಮೆಚ್ಚಿ ಪ್ರೋತ್ಸಾಹಿಸಿ ನನಗೆ ಈ ಪ್ರಶಸ್ತಿ ನೀಡಿರುವುದು ನನ್ನ ಕಲಿಕೆಯ ಜವಾಬ್ದಾರಿ ಮತ್ತಷ್ಟು ಹೆಚ್ಚಿಸಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಶ್ರಾಂತ ಪೋಲಿಸ್ ವರಿಷ್ಠಾಧಿಕಾರಿ S.B ಚಬ್ಬಿ ಮಕ್ಕಳ ಸಾಧನೆ ನೋಡುವುದೇ ಬಹಳ ಸಂತೋಷದ ವಿಷಯ. ಮಕ್ಕಳ ಪ್ರತಿಭೆಯನ್ನು ಗುರುತಿಸುವುದು ನಮ್ಮೆಲ್ಲರ ಕರ್ತವ್ಯ. ಏಳನೇ ವರ್ಷದಲ್ಲಿ ಈ ಅಪ್ರತಿಮ ಸಾಧನೆ ಮಾಡುವುದು ಸಾಧಾರಣ ವಿಷಯವಲ್ಲ. ಇವರಿಂದ ಸ್ಫೂರ್ತಿ ಪಡೆದು ಮತ್ತಷ್ಟು ಮಕ್ಕಳು ಸಾಧನೆಯ ಪಥ ತುಳಿಯಲಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಗ್ಲೋರಿ ಅವಾರ್ಡ್ ನ ವ್ಯವಸ್ಥಾಪಕಿ ಶೃತಿ ರಾಕೇಶ್, ಪೋಲಿಸ್ ವರಿಷ್ಠಾಧಿಕಾರಿ ಎಸ್.ಬಿ. ಚಬ್ಬಿ, ಪೋಷಕರಾದ ಪುನೀತ್ ಜಿ, ಪೂಜಾ ಎನ್, ಉದ್ಯಮಿ ಪ್ರದೀಪ್ ದುಬೆ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.