ಮಂಡ್ಯ: ಮೈಶುಗರ್ ವಿರುದ್ಧ ಸುಮಲತಾ ಮತ್ತೆ ಅಪಸ್ವರ ತೆಗೆದಿದ್ದು, ಸರ್ಕಾರಿ ಸ್ವಾಮ್ಯದಲ್ಲಿ ಮೈಷುಗರ್ ಕಾರ್ಖಾನೆ ನಡೆಯುತ್ತಿರೋದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಹೊಸ ಕಾರ್ಖಾನೆಗೆ 500 ಕೋಟಿ ಘೋಷಣೆ ಆದ ಬೆನ್ನಲ್ಲೇ ಸಂಸದೆ ಸುಮಲತಾ ಅಂಬರೀಶ್ ಆಕ್ರೋಶ ವ್ಯಕ್ತಪಡಿಸಿದ್ದು, 150 ಕೋಟಿಯ ಲೆಕ್ಕ ನೀಡುವಂತೆ ಮೈಶುಗರ್ ಕಾರ್ಖಾನೆ ಭ್ರಷ್ಟಾಚಾರದ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ.
ಮಂಡ್ಯದ ಮದ್ದೂರಿನಲ್ಲಿ ಸಂಸದೆ ಸುಮಲತಾ ಅಂಬರೀಶ್ ಮಾಧ್ಯಮದವರ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯಿಸಿದ್ದಾರೆ..
ಮೈಶುಗರ್ ಕಾರ್ಖಾನೆ ಪ್ರಾರಂಭಕ್ಕೆ ಹೋರಾಟ ಮಾಡಿದ್ದು ನಾನು, ಸ್ವಾರ್ಥಕ್ಕೆ ಪ್ರತಿಭಟನೆ ನಡೆಸಿ ಅಡ್ಡಗಾಲು ಹಾಕಿದ್ರು ಎಂದು ಸಂಘಟನೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರ ನಡೆಸಬೇಕು ಅಂತ ಹೋರಾಟ ಮಾಡಿದವರನ್ನ ಉತ್ತರ ಕೊಡಿ ಎಂದಿರುವ ಸಂಸದೆ ಸುಮಲತಾ ಸಂಘಟನೆಗಳ ಸ್ವಾರ್ಥದಿಂದ ಕಾರ್ಖಾನೆಯನ್ನ ಈ ಮಟ್ಟಕ್ಕೆ ತಂದು ನಿಲ್ಲಿಸಿದ್ದಾರೆ. ಮೈಶುಗರ್ ಕಾರ್ಖಾನೆ ಪುನರ್ ಚಾಲನೆಗೆ ಐದು ವರ್ಷ ಹೋರಾಟ ಮಾಡಿದ್ದೆ. ಎಷ್ಟೋ ಚೀಫ್ ಮಿನಿಸ್ಟರ್, ಅಧಿಕಾರಿಗಳು, ಸಚಿವರನ್ನ ಮೀಟ್ ಮಾಡಿ ಡೆಲ್ಲಿಯಿಂದ ಇಲ್ಲಿಯವರೆಗೆ ಒಬ್ಬರನ್ನ ಭೇಟಿ ಮಾಡಿ ಚರ್ಚೆ ಮಾಡಿದ್ದೇನೆ. ಬಸವರಾಜ ಬೊಮ್ಮಾಯಿ ಅವರು 50 ಕೋಟಿ ಕೊಟ್ಟು ಚಾಲನೆ ಕೊಟ್ಟರು.
ಕಾರ್ಖಾನೆಯಲ್ಲಿ ಹಲವಾರು ಸಮಸ್ಯೆಗಳು ಇವೆ. ಮುಖ್ಯವಾಗಿ ಹಿಂದಿನ ಫಂಡ್ಸ್ ಮಿಸ್ ಯೂಸ್ ಆಗಿ ಭ್ರಷ್ಟಾಚಾರ ಆಗಿದೆ. ಯಡಿಯೂರಪ್ಪ ಅವರು ಒಂದು ದೃಢ ನಿರ್ಧಾರ ತೆಗೆದುಕೊಂಡು ಭ್ರಷ್ಟಾಚಾರದಿಂದ ದೂರವಿಡಲು ಇದನ್ನ O&Mಗೆ ಕೊಟ್ಟು ನಡೆಸಬೇಕು. ಅವಾಗ ರೈತರಿಗೆ ಅನುಕೂಲವಾಗುತ್ತೆ. ಕಾರ್ಖಾನೆ ನಡೆಸಲು ಸರ್ಕಾರಕ್ಕೆ ಅಷ್ಟು ಶಕ್ತಿ ಇಲ್ಲ ಅಂದಿದ್ರು. ಆದ್ರೆ O&Mಗೆ ಸಾಕಷ್ಟು ವಿರೋಧ ವ್ಯಕ್ತವಾಯಿತು.
ರೈತರಿಗೆ ತೊಂದರೆಯಾಗದಂತೆ ನಾನು ಯಾವದೋ ಮಾಡಲ್ ಸರ್ಕಾರಿ ಸ್ವಾಮ್ಯ, ಖಾಸಗಿ, ಅಥವಾ O&M ಏನಾದ್ರು ಮಾಡಿ ಫ್ಯಾಕ್ಟರಿ ಶುರು ಮಾಡಿ ಅಂತ ಹೇಳಿದ್ದೆ ಅಷ್ಟೆ. ಆವಾಗಲೇ ಒಂದು ನಿರ್ಧಾರ ತೆಗೆದುಕೊಂಡಿದ್ರೆ ಇವತ್ತು ಈ ಪರಿಸ್ಥಿತಿಗೆ ಕಾರ್ಖಾನೆ ಬರ್ತಿರಲಿಲ್ಲ. ಇವಾಗ ಸರಿಯಾಗಿ ಕಾರ್ಖಾನೆ ಕಬ್ಬು ಅರೆಯುತ್ತಿಲ್ಲ ಅಂತಾರೆ. ಹಿಂದಿನ ಸರ್ಕಾರ 50ಕೋಟಿ, ಇಂದಿನ ಸರ್ಕಾರ 100ಕೋಟಿ ಏನಾಯ್ತು? ಎಲ್ಲಿಗೆ ಹೋಗಿದೆ ಆ ಹಣ ಎಲ್ಲಾ,? ಇದಕ್ಕೆ ಒಂದು ಅಕೌಂಟ್ ಬೇಕು.
ನಾವು ಅದು ಬೇಡ, ಇದು ಬೇಕು ಅಂತ ಹೋರಾಟ ಮಾಡೋದು ಸುಲಭ. ಆದ್ರೆ ಅನ್ಯಾಯ ಆಗೋದು ರೈತರಿಗೆ.
ತುಂಬಾ ಬೇಜಾರು, ಕೋಪ ಬರುವಂತಹ ವಿಷಯ ಇದು ನಮಗೆ ಪ್ರತಿಯೊಂದು ಹೆಜ್ಜೆಯಲ್ಲೂ ಅಡ್ಡಗಾಲು ಹಾಕೊಂಡು ಬಂದವರೇ ಜಾಸ್ತಿ. ಇವಾಗ ಅವರೆಲ್ಲ ಎಲ್ಲಿದ್ದಾರೆ?. ಅವರು ಮೊದಲು ಉತ್ತರ ಕೊಡಬೇಕು.
ಐತಿಹಾಸಿಕ ಅಂದ್ರಲ್ಲ KRS ಡ್ಯಾಂಗೆ ಎಷ್ಟು ಗೌರವ ಅಷ್ಟೇ ಮೈಶುಗರ್ ಕಾರ್ಖಾನೆಗೂ ಗೌರವ ಇದೆ ಎಂದು
ಮಂಡ್ಯದ ಮದ್ದೂರಿನಲ್ಲಿ ಸಂಸದೆ ಸುಮಲತಾ ಅಂಬರೀಶ್ ಆಕ್ರೋಶ ಹೊರಹಾಕಿದ್ದಾರೆ.