ಯಳಂದೂರು: ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್(ಐಎನ್‌ಟಿಯುಸಿ)ನ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಶಾಸಕ ಎ.ಆರ್. ಕೃಷ್ಣಮೂರ್ತಿ ರವರ ಶಿಫಾರಸ್ಸಿನ ಮೇರೆಗೆ ಬೂದಿತಿಟ್ಟು ಎನ್. ಸತೀಶ್ ಆಯ್ಕೆಯಾಗಿದ್ದಾರೆ.
ಶಾಸಕ ಎ.ಆರ್.ಕೃಷ್ಣಮೂರ್ತಿ ಮಂಗಳವಾರ ಈ ಆದೇಶ ಪತ್ರವನ್ನು ತಮ್ಮ ನಿವಾಸದಲ್ಲಿ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಸತೀಶ್ ಮಾತನಾಡಿ, ಪಕ್ಷದಲ್ಲಿ ನಾನು ನಿಷ್ಠಾವಂತನಾಗಿ ಸೇವೆ ಸಲ್ಲಸುತ್ತಿದ್ದೆ. ಈ ಹಿನ್ನೆಲೆಯಲ್ಲಿ ನನ್ನನ್ನು ಪಕ್ಷ ಗುರುತು ಮಾಡಿ ಈ ಜವಾಬ್ದಾರಿಯನ್ನು ನೀಡಿದೆ. ಇದಕ್ಕೆ ಕಾರಣರಾದ ಶಾಸಕರಿಗೆ ಹಾಗೂ ಐಎನ್‌ಟಿಯುಸಿ ರಾಜ್ಯಾಧ್ಯಕ್ಷರಾದ ಡಿ. ಲಕ್ಷ್ಮಿವೆಂಕಟೇಶ್‌ರವರಿಗೆ ನಾನು ಚಿರಋಣಿಯಾಗಿದ್ದೇನೆ. ಇಲ್ಲಿ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸುವಲ್ಲಿ ಪ್ರಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದರು.
ಕಾಡಾ ಅಧ್ಯಕ್ಷ ಪಿ. ಮರಿಸ್ವಾಮಿ, ಗ್ಯಾರಂಟಿ ಯೋಜನೆಯ ಉಪಾಧ್ಯಕ್ಷ ಕಿನಕಹಳ್ಳಿ ಪ್ರಭುಪ್ರಸಾದ್, ಕಂದಹಳ್ಳಿ ನಂಜುಂಡಸ್ವಾಮಿ, ಮಧುವನಹಳ್ಳಿ ಶಿವಕುಮಾರ್, ಚಾಮುಲ್ ನಿರ್ದೇಶಕ ನಂಜುಂಡಸ್ವಾಮಿ, ಕಮರವಾಡಿ ರೇವಣ್ಣ, ಪದ್ಮಾಪುರುಷೋತ್ತಮ್, ರಘು, ಮಹಾದೇವಸ್ವಾಮಿ, ನಾಗಯ್ಯ, ಪ್ರಸಾದ್, ಹರವೆ ಮಹೇಶ್, ಮಸಣಾಪುರ ವಿಜಯ್ ಸೇರಿದಂತೆ ಅನೇಕರು ಇದ್ದರು.