ವರದಿ : ಚಪ್ಪರದಹಳ್ಳಿ ವಿನಯ್ ಕುಮಾರ್
ಬೆಟ್ಟದಪುರ : ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದಲ್ಲಿ ನಾಡಪ್ರಭು ಕೆಂಪೇಗೌಡರ 515ನೇ ಜಯಂತೋತ್ಸವ ಕಾರ್ಯಕ್ರಮವನ್ನು ಕೆಂಪೇಗೌಡರ ಪುತ್ತಳಿಯನ್ನು ಬೆಳ್ಳಿರಥದಲ್ಲಿ ಗ್ರಾಮಗಳ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡುವ ಮೂಲಕ ಅದ್ದೂರಿಯಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ನಿವೃತ್ತ ದೈಹಿಕ ಶಿಕ್ಷಕ ನಾರಾಯಣಗೌಡ ಕೆಂಪೇಗೌಡರ ಇತಿಹಾಸದ ಬಗ್ಗೆ ನಮ್ಮ ಜನಾಂಗದ ಪ್ರತಿಯೊಬ್ಬ ವ್ಯಕ್ತಿಯು ತಿಳಿಯಬೇಕು. ಬೆಂಗಳೂರು ನಿರ್ಮಾಣದಲ್ಲಿ ಕೆಂಪೇಗೌಡರ ಪಾತ್ರ ಅತಿ ಅಮೂಲ್ಯವಾದದ್ದು. ಕೆಂಪೇಗೌಡರ ಸಾಧನೆಗಳು ಇಂದಿನ ಯುವ ಪೀಳಿಗೆಗೆ ಮಾದರಿಯಾಗುತ್ತದೆ ಎಂದರು.
ರೈತ ಮುಖಂಡ ದೇವರಾಜೇಗೌಡ ಮಾತನಾಡಿ ಕೆಂಪೇಗೌಡರು ಒಕ್ಕಲಿಗ ಸಮಾಜಕ್ಕೆ ಅಲ್ಲದೆ ಎಲ್ಲಾ ಸಮುದಾಯಗಳಿಗೆ ಮಾದರಿಯಾಗಿದ್ದು, ಅವರ ಸಾಧನೆಗಳನ್ನು ನೆನಪಿಸಿಕೊಳ್ಳುವ ಕೆಲಸವಾಗಬೇಕು ಎಂದರು.

ಈ ಸಂದರ್ಭದಲ್ಲಿ ಒಕ್ಕಲಿಗ ಸಮುದಾಯದ ಮುಖಂಡರುಗಳಾದ ಹಾಲು ಗೋವಿಂದೇಗೌಡ, ಮಹೇಶ್, ನಟರಾಜ್, ಮಂಜಣ್ಣ, ಸಾಲಿಗ್ರಾಮ ಮಂಜಣ್ಣ, ಚೇತನ್, ನಾಗರಾಜ್,ವೆಂಕಟೇಶ್, ಮಾಸ್ಟರ್ ಚಂದ್ರೇಗೌಡ, ನಾಗೇಗೌಡ , ರಾಜು, ಕುಮಾರ್, ಕೃಷ್ಣೇಗೌಡ, ನಾಗರಾಜು, ಗೋವಿಂದೇಗೌಡ, ಶಿವಣ್ಣಗೌಡ, ದೇವರಾಜ , ಉದಯ್, ಚಂದ್ರು, ಗಿರಿಗೌಡ, ಹೊನ್ನೇಗೌಡ, ನಂದೀಶ, ಶರತ್, ಕಾರ್ತಿಕ್, ಉಮೇಶ್, ಮಹೇಶ್, ಗೋಪಾಲ, ಯೋಗೇಶ, ರಾಜೇಗೌಡ, ಕೆಂಗಪ್ಪ, ಪ್ರವೀಣ್, ಪ್ರತಾಪ, ಕೃಷ್ಣ, ವಿನೋದ, ಆದಿ,ಮನು,
ರಾಮೇಗೌಡ, ಗಣೇಶ, ರಾಜೇಶ್,ವಿನಯ್, ರಘು, ಸತೀಶ್, ಸೇರಿದಂತೆ ಕುಲಬಾಂಧವರು ಹಾಜರಿದ್ದರು.