ಮದ್ದೂರು: ಮದ್ದೂರು ತಾಲೂಕು ಆಡಳಿತದ ವತಿಯಿಂದ ನಾಡಪ್ರಭು ಕೆಂಪೇಗೌಡ ಜಯಂತಿಯನ್ನ ವಿಜೃಂಭಣೆಯಿಂದ ಆಚರಣೆ ಮಾಡಿದರು.
ಮೊದಲು ಪಟ್ಟಣದ ಉಗ್ರ ನರಸಿಂಹ ಸ್ವಾಮಿ ದೇವಾಲಯದಿಂದ ಶಾಲಾ ಮಕ್ಕಳ ವಾದ್ಯಗೋಷ್ಠಿ ಹಾಗೂ ಪಥ ಸಂಚಲನದೊಂದಿಗೆ ನಾಡಪ್ರಭು ಕೆಂಪೇಗೌಡರ ಭಾವಚಿತ್ರವನ್ನು ಬೆಳ್ಳಿ ರಥದಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ತುಂತುರು ಮಳೆಯ ನಡುವೆಯೂ ತಾಲೂಕು ಕ್ರೀಡಾಂಗಣದವರೆಗೆ ಮೆರವಣಿಗೆ ನಡೆಸಲಾಯಿತು.
ಬಳಿಕ ತಾಲೂಕು ಕ್ರೀಡಾಂಗಣದಲ್ಲಿ ಶಾಲಾ ಮಕ್ಕಳ ನೃತ್ಯ ಜರುಗಿತು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಐದು ಜನ ಮಹಾನ್ ನೀರನ್ನು ತಾಲೂಕು ಆಡಳಿತ ಸನ್ಮಾನಿಸಿ ತಹಶೀಲ್ದಾರ್ ಸೋಮಶೇಖರ್ ಅಧ್ಯಕ್ಷತೆಯನ್ನ ವಹಿಸಿ ಮಾತನಾಡಿದರು.
ನಾಡಪ್ರಭು ಕೆಂಪೇಗೌಡರು ಅಂದು ವಿವಿಧ ಪೇಟೆಗಳನ್ನು ಸ್ಥಾಪಿಸಿ ಎಲ್ಲಾ ಜನಾಂಗಕ್ಕೂ ವ್ಯಾಪಾರ ವಹಿವಾಟಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪೇಟೆಗಳನ್ನು ನಿರ್ಮಿಸಿಕೊಟ್ಟು, ಕೆರೆಕಟ್ಟೆಗಳನ್ನ ಬೆಂಗಳೂರಿನ ನಾಲ್ಕು ದಿಕ್ಕಿನಲ್ಲಿ ನಿರ್ಮಿಸಿದರು ಅಂದೆ ಎಲ್ಲಾ ರಾಷ್ಟ್ರದ ಹಾಗೂ ಎಲ್ಲಾ ಪ್ರಾಂತ್ಯದ ನಾಣ್ಯಗಳು ಬೆಂಗಳೂರಿನಲ್ಲಿ ಸಿಗುವಂತೆ ಮಾಡಿದರು ಎಂದರು.
ಪ್ರೊ. ಬೋರೇಗೌಡ ಕೆಂಪೇಗೌಡರನ್ನ ಕುರಿತು ಪ್ರಧಾನ ಭಾಷಣ ನೆರವೇರಿಸಿದರು.
ಈ ವೇಳೆ ಬಿಇಓ ಕಾಳಿರಯ್ಯ, ಆರ್ ಎಫ್ ಗವಿಸಿದ್ದಯ್ಯ, ಮುಖಂಡರಾದ ನ.ಲ್ಲಿ ಕೃಷ್ಣ, ಶಿವಪ್ಪ, ಉಮಾಶಂಕರ್, ನಾರಾಯಣ್ ,ರಾಜೇಶ್ ಸೇರಿದಂತೆ ಇತರರು ಹಾಜರಿದ್ದರು.