Monday, April 21, 2025
Google search engine

Homeರಾಜ್ಯಸುದ್ದಿಜಾಲಬೆಂಗಳೂರು ನಗರ ರೂಪುಗೊಂಡಿರುವುದಕ್ಕೆ ನಾಡಪ್ರಭು ಕೆಂಪೇಗೌಡ ಪರಿಶ್ರಮ ಅಧಿಕ : ಶಾಸಕ ಅನಿಲ್ ಚಿಕ್ಕಮಾದು ಅಭಿಮತ

ಬೆಂಗಳೂರು ನಗರ ರೂಪುಗೊಂಡಿರುವುದಕ್ಕೆ ನಾಡಪ್ರಭು ಕೆಂಪೇಗೌಡ ಪರಿಶ್ರಮ ಅಧಿಕ : ಶಾಸಕ ಅನಿಲ್ ಚಿಕ್ಕಮಾದು ಅಭಿಮತ

ವರದಿ :ಎಡತೊರೆ ಮಹೇಶ್

ಎಚ್.ಡಿ. ಕೋಟೆ :ಉದ್ಯೋಗವನ್ನರಸಿ ಬೆಂಗಳೂರಿಗೆ ತೆರಳಿದ ಗ್ರಾಮೀಣ ನಿರುದ್ಯೋಗಗಳಿಗೆ ಉದ್ಯೋಗ ನೀಡುವ ನಗರವಾಗಿ ಬೆಂಗಳೂರು ನಗರ ರೂಪುಗೊಂಡಿರುವುದಕ್ಕೆ ನಾಡಪ್ರಭು ಕೆಂಪೇಗೌಡರವರ ಶ್ರಮ ಹೆಚ್ಚಿನ ಪ್ರಮಾಣದಲ್ಲಿದೆ ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.

ಪಟ್ಟಣದ ಜೆ.ಕೆ. ಶೋರೂಂ ಆವರಣದಲ್ಲಿ ಯುವ ಒಕ್ಕಲಿಗರ ಹಿತರಕ್ಷಣಾ ಸಮಿತಿ ವತಿಯಿಂದ ಸೋಮವಾರ ನಡೆದ ನಾಡಪ್ರಭು ಕೆಂಪೇಗೌಡರ ಜಯಂತಿ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕೆಂಪೇಗೌಡರಮುಂದಾಲೋಚನೆಯಿಂದಾಗಿ ಬೆಂಗಳೂರನ್ನು ಉತ್ತಮ ರೀತಿಯಲ್ಲಿ ನಿರ್ಮಿಸಿದ್ದರು. ಅಗತ್ಯಕ್ಕೆ ತಕ್ಕಂತೆ ಕೆರೆಕಟ್ಟೆಗಳನ್ನು ನಿರ್ಮಿಸಿ, ಅಂದಿನ ದಿನದಲ್ಲೇ ಸುಸಜ್ಜಿತ ನಗರಕ್ಕೆ ನಾಂದಿಯನ್ನು ಹಾಡಿದ್ದರು ಎಂದರು. ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಆದಿಚುಂಚನಗಿರಿ ಮಠದಲ್ಲಿ ವಿದ್ಯಾರ್ಜನೆಯನ್ನು ಉಚಿತವಾಗಿ ನೀಡುತ್ತಿದ್ದು ಇದು ಒಕ್ಕಲಿಗ ಸಮಾಜದ ಹೆಮ್ಮೆಯ ವಿಷಯ ಎಂದರು. ಪ್ರತಿಭಾ ಪುರಸ್ಕಾರವನ್ನು ಉದ್ದೇಶಿಸಿ ಮಾತನಾಡಿದ ಅವರು ಕಠಿಣ ಶ್ರಮದಿಂದಾಗಿ ವಿದ್ಯಾರ್ಥಿಗಳು ಇಂದು ಪುರಸ್ಕಾರವನ್ನು ಸ್ವೀಕರಿಸುತ್ತಿದ್ದಾರೆ, ಅದೇ ರೀತಿ ನೂತನವಾಗಿ ವೈದ್ಯರಾಗುತ್ತಿರುವ ಇಬ್ಬರಿಗೆ ಸನ್ಮಾನಿಸುತ್ತಿರುವುದು ಸಹ ಸಂತಸದ ವಿಚಾರ ಎಂದರು.

ತಹಸೀಲ್ದಾರ್ ಶ್ರೀನಿವಾಸ್ ಮಾತನಾಡಿ ‘ಕೆಂಪೇಗೌಡರವರು ಉತ್ತಮ ಆಡಳಿತಗಾರರಾದ ಹಿನ್ನಲೆ ಉತ್ತಮ ಬೆಂಗಳೂರು ನಿರ್ಮಾಣವಾಗಲು ಕಾರಣವಾಯಿತು. ಅಂದು ನಿರ್ಮಾಣವಾದ ಬೆಂಗಳೂರು ಇಂದು ವಿಶ್ವದ ಹಲವುಪ್ರಮುಖ ನಗರಗಳಲ್ಲಿ ಮೊದಲ ಸಾಲಿನಲ್ಲಿ ನಿಲ್ಲುತ್ತದೆ. ಕೆಂಪೇಗೌಡರು ಎಲ್ಲರನ್ನು ಸಮಾನವಾಗಿ ಕಾಣುವ ದೃಷ್ಠಿಯಿಂದ ಎಲ್ಲಾ ಸಮಾಜದವರಿಗೂ ಪೇಟೆಗಳನ್ನು ನಿರ್ಮಿಸಿ ಅಂದೇ ಸಮಾನತೆಯತ್ತ ದಿಟ್ಡ ಹೆಜ್ಜೆಯನ್ನು ಇಟ್ಟಿದ್ದರು ಎಂದರು.

ಈ ವೇಳೆ ಎಂಬಿಬಿಎಸ್ ದ್ವಿತೀಯ ಪಿಯುಸಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ದರ್ಜೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಾದ ವಿವೇಕ್, ಹರ್ಷ ವೈ ಗೌಡ, ನಂದಿನಿ, ಮೋಹನ್ ಎಲ್ ಗೌಡ, ಯೋಗೇಶ್, ಸಿಂಚನ ಕೆ. ಗೌಡ, ಕೀರ್ತನ್, ಶಶಾಂಕ, ರಶ್ಮಿತಾ, ದೀಕ್ಷಿತ್ ಗೌಡ, ಕೀರ್ತನ ಕೆ. ಗೌಡ, ವರ್ಷ ಸಿ. ಗೌಡ, ನಯನ, ಐಶ್ವರ್ಯರವರಿಗೆ ಪ್ರತಿಭಾ ಪುರಸ್ಕಾರ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಯುವ ಒಕ್ಕಲಿಗರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಅಂಗಡಿ ಸತೀಶ್, ಉಪಾಧ್ಯಕ್ಷ ಡಿ ಸ್ವಾಮಿ, ಕಾರ್ಯದರ್ಶಿ ಮೀನ್ ರಾಜಣ್ಣ, ಡಾಕ್ಟರ್ ಪ್ರಜ್ವಲ್, ಆಂದೋಲನ ಮಂಜು, ಕಾಳರಾಜು , ರವಿ, ನಿಂಗರಾಜ್ ಮಾಸ್ಟರ್, ತಾಲ್ಲೂಕು ಒಕ್ಕಲಿಗ ಸಮಾಜದ ಅಧ್ಯಕ್ಷ ಸುರೇಂದ್ರ ಡಿ. ಗೌಡ, ಮಾಜಿ ಅಧ್ಯಕ್ಷ ಸಿ.ಎನ್. ನರಸಿಂಹೇಗೌಡ, ಬಿಜೆಪಿ ಅಧ್ಯಕ್ಷ ಶಂಭೇಗೌಡ, ಸತೀಶ್‌ಗೌಡ, ಜೆಕೆ ಶೋರೂಮ್ ಮಾಲೀಕ ಜಯರಾಮ್, ಮಾರುತಿ, ಹರೀಶ್‌ಗೌಡ, ಶ್ರೀನಿವಾಸ್, ಎಡತೊರೆ ಮಹೇಶ್, ನಿಂಗರಾಜು, ಸ್ವಾಮಿ, ರಾಮಚಂದ್ರ, ವೀರೇಂದ್ರ, ಜಿಯಾರ ಸೋಮೆಶ್, ಸಾಗರ ಮಹೇಂದ್ರ, ಸಿರಿ ಗೌಡ, ಕಾಳಿಹುಂಡಿ ಸಿದ್ದೇಗೌಡ, ಜಯರಾಮೇಗೌಡ, ಚಂದ್ರು ಮಾರುತಿ, ಪ್ರೇಮ್ ಕುಮಾರ್, ರವಿ, ಪ್ರತಾಪ್, ರಾಮಚಂದ್ರ,, ಕಲ್ಲೇಶ್ ಗೌಡ, ಸಿದ್ದೇಗೌಡ, ಯಶವಂತ್, ಕಲ್ಲೇಶ್‌ಗೌಡ, ಶಂಭು ಇದ್ದರು.

RELATED ARTICLES
- Advertisment -
Google search engine

Most Popular