ಮಂಡ್ಯ: ನಾಗಮಂಗಲ ಕೋಮುಗಲಭೆ ವಿಷಯ ಗಂಭೀರವಾಗಿದೆ. ಇಲ್ಲಿನ ಸ್ಥಿತಿ ನೋಡಿದರೆ ಮನಕಲಕುತ್ತದೆ. ಕೆಲವು ಸಮುದಾಯಗಳನ್ನು ಓಲೈಕೆ ಮಾಡುತ್ತಿರುವುದು ಎದ್ದು ಕಾಣುತ್ತಿದೆ. ಹಿಂದೂಗಳು ಹಬ್ಬ ಆಚರಣೆ ಮಾಡುವುದು ಕಾನೂನು ಬಾಹಿರವಾ? ಹೀಗೆ ಮುಂದುವರಿದರೆ ದೇಶ ಎಲ್ಲಿಗೆ ಹೋಗಿ ನಿಲ್ಲಲಿದೆ? ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಪ್ರಶ್ನಿಸಿದರು.
ನಾಗಮಂಗಲಕ್ಕೆ ಭೇಟಿ ನೀಡಿ ಗಲಭೆ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಲಭೆ ಪೂರ್ವ ನಿಯೋಜಿತ ಎನಿಸುತ್ತದೆ. ಟಾರ್ಗೆಟ್ ಮಾಡಿ ಕೆಲವರ ಅಂಗಡಿಗಳಿಗೆ ಬೆಂಕಿ ಹಾಕಲಾಗಿದೆ. ಇದರ ಹಿಂದಿನ ಉದ್ದೇಶ ಏನು? ಯಾರು ಮಾಡಿದರು ಎಂದು ಗೊತ್ತಾಗಬೇಕು ಎಂದು ಆಗ್ರಹಿಸಿದರು.