ಮಂಡ್ಯ: ಜಿಲ್ಲೆಯ ನಾಗಮಂಗಲದಲ್ಲಿ ನಡೆದಿದ್ದಂತ ಗಲಭೆ ಘಟನೆ ಸಂಬಂಧಿಸಿದಂತ ಮತ್ತೊಬ್ಬ ಅಧಿಕಾರಿಯ ತಲೆದಂಡವಾಗಿದೆ. ನಾಗಮಂಗಲ ಠಾಣೆಯ ಇನ್ಸ್ ಪೆಕ್ಟರ್ ಬಳಿಕ ನಾಗಮಂಗಲದ ಡಿವೈಎಸ್ಪಿಯನ್ನು ಅಮಾನತುಗೊಳಿಸಿ ಆದೇಶಿಸಲಾಗಿದೆ.
ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶ ಮೂರ್ತಿ ವಿಸರ್ಜನೆಯ ವೇಳೆಯಲ್ಲಿ ಉಂಟಾಗಿದ್ದಂತ ಗಲಾಟೆ ಸಂಬಂಧ ಮತ್ತೊಬ್ಬ ಅಧಿಕಾರಿಯ ತಲೆದಂಡವಾಗಿದೆ. ನಾಗಮಂಗಲ ಡಿವೈಎಸ್ಪಿ ಡಾ.ಸುಮೀತ್ ಅವರನ್ನು ಅಮಾನತುಗೊಳಿಸಲಾಗಿದೆ.
ಈ ಸಂಬಂಧ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರು ಆದೇಶ ಹೊರಡಿಸಿದ್ದಾರೆ. ಆದೇಶದಲ್ಲಿ ನಾಗಮಂಗಲ ಗಲಬೆ ಸಂಬಂಧ ಕರ್ತವ್ಯ ಲೋಪದ ಆರೋಪದಡಿ ಡಿವೈಎಸ್ಪಿ ಡಾ.ಸುಮೀತ್ ಅಮಾನತುಗೊಳಿಸುತ್ತಿರುವುದಾಗಿ ತಿಳಿಸಿ, ಆದೇಶಿಸಿದ್ದಾರೆ.