Friday, April 18, 2025
Google search engine

Homeರಾಜ್ಯನಾಗಮಂಗಲ: ಕಟ್ಟಡದಲ್ಲಿ ಆತಂಕ ಸೃಷ್ಟಿಸಿದ ರಕ್ತದ ಕಲೆ: ತನಿಖೆ ಕೈಗೊಂಡ ಪೊಲೀಸ್ ಇಲಾಖೆ.!  

ನಾಗಮಂಗಲ: ಕಟ್ಟಡದಲ್ಲಿ ಆತಂಕ ಸೃಷ್ಟಿಸಿದ ರಕ್ತದ ಕಲೆ: ತನಿಖೆ ಕೈಗೊಂಡ ಪೊಲೀಸ್ ಇಲಾಖೆ.!  

ಮಂಡ್ಯ: ನಾಗಮಂಗಲ ಪಟ್ಟಣದ ಟಿವಿ ಬಡಾವಣೆಯ ಕಟ್ಟಡವೊಂದರಲ್ಲಿ ಗೋಡೆ ಭಾಗ ಮತ್ತು ನೆಲದಲ್ಲಿ ರಕ್ತದ ಕಲೆ ಕಾಣಿಸಿಕೊಂಡ ಪರಿಣಾಮ ಜನರು ಆತಂಕಗೊಂಡಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕಟ್ಟಡ ಒಂದರ ನೆಲ, ಗೋಡೆ, ಮೆಟ್ಟಿಲು ಹಾಗೂ ಚರಂಡಿಗಳಲ್ಲಿ ರಕ್ತದ ಕಲೆ ಕಾಣಿಸಿಕೊಂಡಿರುವ ಕುರಿತು ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಡಿವೈಎಸ್ಪಿ ಲಕ್ಷ್ಮಿ ನಾರಾಯಣ ಪ್ರಸಾದ್ ನೇತೃತ್ವದಲ್ಲಿ ಬೆರಳಚ್ಚು ತಜ್ಞರು ಹಾಗೂ ಎಫ್ ಎಸ್ ಐ ಎಲ್ ತಂಡ ಭೇಟಿ ಪರಿಶೀಲನೆ  ಮಾಡಲಾಗಿದೆ. ನಾಗಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮಂಡ್ಯದಲ್ಲಿ ಎಸ್ ಪಿ ಎನ್.ಯತೀಶ್ ಮಾತನಾಡಿ, ಬ್ಲೇಡ್ ಸ್ಯಾಂಪಲ್ ಲ್ಯಾಬ್ ಗೆ ಕಳುಹಿಸಲಾಗಿದೆ. ಅದು ಪ್ರಾಣಿಗಳ ಬ್ಲೇಡ್ ಅಥವಾ ಮನುಷ್ಯರದ್ದಾ ಎಂದು ವರದಿ ಬರಬೇಕಿದೆ. ವರದಿ ಬಂದ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular