ಹನಗೋಡು: ಹುಣಸೂರು ತಾಲ್ಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಕಾಂಡಂಚಿನ ಪ್ರದೇಶದಲ್ಲಿ ಮಾನವ-ಆನೆ ಸಂಘರ್ಷವನ್ನು ಕಡಿಮೆ ಮಾಡಲು ರೈಲ್ವೆ ಕಂಬಿ ಬ್ಯಾರಿಕೇಡ್ ಗಳನ್ನು ನಿರ್ಮಿಸಲು ೨೦೨೩-೨೪ ನೇ ಸಾಲಿನ ಆಯವ್ಯಯದಲ್ಲಿ ೨೨.೫೦ ಕೋಟಿ ರೂ ಅನುಧಾನ ಮೀಸಲಿಡಬೇಕೆಂದು ಹುಣಸೂರಿನ ಮಾಜಿ ಶಾಸಕ ಎಚ್ ಪಿ ಮಂಜುನಾಥ್ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಹುಣಸೂರು ತಾಲೋಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ನಿರ್ಮಾಣ ಮಾಡಿರುವ ರೈಲ್ವೆ ಬ್ಯಾರಿಕೆಡ್ ನ್ನು ವೀರನಹೊಸಹಳ್ಳಿ ವನ್ಯಜೀವಿ ವಲಯದಲ್ಲಿ ೭ ಕಿ.ಮೀ ದೂರ ಹಾಗೂ ಹುಣಸೂರು ವನ್ಯಜೀವಿ ವಲಯದಲ್ಲಿ ೬ಕಿ.ಮೀ. ದೂರ ರೈಲ್ವೆ ಬ್ಯಾರಿಕೆಟ್ ನಿರ್ಮಾಣ ಮಾಡದೆ ಬಾಕಿ ಉಳಿದಿದೆ.
ಕಳೆದ ಬಿಜೆಪಿ ನೇತೃತ್ವದ ಸರ್ಕಾರ ಅವಧಿಯಲ್ಲಿ ಹಂಸೂರು ವನ್ಯ ಜೀವಿ ವಲಯದ ವ್ಯಾಪ್ತಿಯಲ್ಲಿನ ಉಡುವೇಪುರದಿಂದ ಉತ್ತೇನಹಳ್ಳಿ ವರಗೆ ಸೂಕ್ಷ್ಮ ಹಾಗೂ ಅಧಿಕ ವನ್ಯಪ್ರಾಣಿಗಳ ಹಾವಳಿ ಇರುವ ಪ್ರದೇಶದಲ್ಲಿ ರೈಲ್ವೆ ಕಂಬಿ ಬ್ಯಾರಿಕೇಡ್ ನಿರ್ಮಾಣಕ್ಕೆ ೪,೦೦ ಕೋಟಿ ರೂಗಳ ಅನುಧಾನ ಮಂಜೂರಾಗಿದ್ದು, ಸದರಿ ಯೋಜನೆಯನ್ನು ಮಾರ್ಪಡಿಸಿ ಅನುಧಾನವನ್ನು ಕಡಿಮೆ ಯೋಜನಾ ವೆಚ್ಚವೆಂದು ಹೇಳಿ ಹೊಸ ತಾಂತ್ರಿಕತೆಗಾಗಿ (ರೋಪ್ ಬ್ಯಾರಿಕೇಡ್) ಉಪಯೋಗಿಸಿಕೊಂಡಿದ್ದು, ಅಧಿಕಾರಿಗಳ ನಿರ್ಲಕ್ಷತೆ ಹಾಗೂ ಆಡಳಿತ ಪಕ್ಷದ ಅಧಿಕಾರ ಶಾಹಿ ಧೋರಣೆಯಿಂದ ಆನೇಚೌಕೂರು ವಲಯಕ್ಕೆ ಉಪಯೋಗಿಸಿಕೊಳ್ಳಲಾಗಿರುತ್ತದೆ. ಸದರಿ ಯೋಜನೆಯು ಕೆಲವು ತಾಂತ್ರಿಕ ದೋ?ದ ಹಿನ್ನಲೆಯಲ್ಲಿ ವಿಫಲ ಯೋಜನೆಯಾಗಿದ್ದು, ಹುಣಸೂರು ಭಾಗಕ್ಕೆ ಅನ್ಯಾಯವಾಗಿ ಸಮಸ್ಯೆ ಸಮಸ್ಯೆಯಾಗಿ ಉಳಿದಿರುತ್ತದೆ.
ಹುಣಸೂರು ವನ್ಯಜೀವಿ ವಲಯದ ವ್ಯಾಪ್ತಿಯಲ್ಲಿನ ಕಿಕ್ಕೇರಿಕಟ್ಟೆ ಅರಣ್ಯದಂಚಿನ ಉಡುವೇಪುರದಿಂದ ಉತ್ತೇನಹಳ್ಳಿ ವರಗಿನ ಪ್ರದೇಶವು ಅತಿ ಸೂಕ್ಷ್ಮ ಪ್ರದೇಶವಾಗಿದ್ದು, ಕಾಡಾನೆ ಹಾವಳಿ ನಿಯಂತ್ರಣದ ಪ್ರಮುಖ ಭಾಗವಾಗಿರುವುದರಿಂದ ತುರ್ತುಗಾಗಿ ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಮಾಡಲು ಅಗತ್ಯವಿರುವ ೭,೦೦ ಕೋಟಿ ರೂಗಳನ್ನು ಜುಲೈ ತಿಂಗಳಿನಲ್ಲಿ ಮಂಡಿಸಲು ಉದ್ದೇಶಿಸಲಾಗಿರುವ ಆಯವ್ಯಯದಲ್ಲಿ (೨೦೨೩-೨೪ ಪರಿಷ್ಕೃತ) ಸೇರ್ಪಡೆ ಮಾಡಿ ಅಭಿವೃದ್ಧಿ ಪಡಿಸಲು ಸಂಬಂಧಿಸಿದವರಿಗೆ ನಿರ್ದೇಶನ ಮಾಡಬೇಕೆಂದು ಮಾಜಿ ಶಾಸಕ ಎಚ್ ಪಿ ಮಂಜುನಾಥ್ ಮುಖ್ಯಮಂತ್ರಿ ಅವರಲ್ಲಿ ಮನವಿ ಪತ್ರ ಸಲ್ಲಿಸಿದ್ದಾರೆ.
ಈ ವೇಳೆ ನಗರ ಅಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ್ ಹಾಗೂ ಯೋಜನೆ ಮತ್ತು ಸಾಂಕೀಕ ಇಲಾಖೆ ಸಚಿವ ಡಿ ಸುಧಾಕರ್ ಇದ್ದರು.