ಮೈಸೂರು: ವಿಶ್ವ ಹಿಂದೂ ಪರಿಷತ್ ಮೈಸೂರು ಇತ್ತೀಚೆಗೆ ಮಂಗಳೂರಿನ ಕಂಕನಾಡಿ ಬಳಿ ರಸ್ತೆಯಲ್ಲಿ ಕುಳಿತು ನಮಾಜ್ ಮಾಡಿದ ವಿಚಾರವಾಗಿ ಸುಮೋಟೋ ಕೇಸ್ ದಾಖಲಿಸಿದ್ದ ಪೋಲಿಸ್ ಅಧಿಕಾರಿಯನ್ನು ಅಮಾನತ್ತು ಮಾಡಿ ಪ್ರಕರಣವನ್ನು ಬಿ ರಿಪೊರ್ಟ ಮಾಡಿ ಅದರ ಗಂಭೀರತೆಯನ್ನು ಸರ್ಕಾರ ಶಿಥಿಲಗೊಳಿಸಿತು.
ಆದರೆ ಮಂಗಳೂರಿನ ಜಿರೋಸ ಕಾಲೇಜು ಬಳಿ ಜೈ ಶ್ರೀರಾಮ್ ಘೋಷಣೆ ಕೂಗಿದಕ್ಕೆ ಅನಧಿಕೃತವಾಗಿ ಘೋಷಣೆ ಕೂಗಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್ ನ ಕಾರ್ಯಕರ್ತರಾದ ಶರಣ್ ಪಂಪ್ ವೆಲ್ ರವರ ಮೇಲೆ ಇತರ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಾಗಿದ್ದು ಇದು ಸರ್ಕಾರದ ದ್ವಂದ್ವ ನೀತಿ ಆಗಿದೆ. ಇದರ ವಿರುದ್ಧ ಮೈಸೂರು ವಿಶ್ವ ಹಿಂದೂ ಪರಿಷತ್ ನಗರ ಹಾಗೂ ಗ್ರಾಮಾಂತರ ವಿಭಾಗದ ವತಿಯಿಂದ ಮೈಸೂರು ಜಿಲ್ಲಾಧಿಕಾರಿಗಳ ಮೂಲಕ ಎರಡು ಪ್ರಕರಣಗಳನ್ನು ಒಂದೇ ರೀತಿ ಪರಿಗಣಿಸಬೇಕು ಹಾಗೂ ಹಿಂದೂ ಕಾರ್ಯಕರ್ತರ ಮೇಲೆ ಹಾಕಿರುವ ಪ್ರಕರಣವನ್ನು ಹಿಂಪಡೆಯಬೇಕೆಂದು ರಾಜ್ಯಪಾಲರಿಗೆ ಮನವಿ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮೈಸೂರು ನಗರ ಉಪಾಧ್ಯಕ್ಷ ಜಗದೀಶ್ ಹೆಬ್ಬಾರ್ ಅನಧಿಕೃತವಾಗಿ ನಮಾಜ್ ಮಾಡಿದ ಪ್ರಕರಣ ದಾಖಲಿಸಿದ ಪೋಲಿಸ್ ಅಧಿಕಾರಿಯ ಅಮಾನತ್ತು ಹಿಂಪಡೆಯಬೇಕೆಂದು ಆಗ್ರಹಿಸಿದರು.
ಜಿಲ್ಲಾ ಸಹ ಕಾರ್ಯದರ್ಶಿ ಪುನೀತ್ ಜಿ ಮಾತನಾಡಿ ಸರ್ಕಾರದ ದ್ವಂದ್ವ ನಿಲುವುಗಳು ಹಿಂದೂ ಕಾರ್ಯಕರ್ತರಲ್ಲಿ ಸರ್ಕಾರದ ಮೇಲೆ ಅನುಮಾನ ಮೂಡಿಸುತ್ತಿದೆ, ಸರ್ಕಾರಗಳು ಯಾವುದೇ ಒಂದು ವರ್ಗದ ಪ್ರಭಾವಕ್ಕೆ ಒಳಗಾಗಿ ನಿರ್ಧಾರ ತೆಗೆದುಕೊಳ್ಳಬಾರದು, ರಸ್ತೆಯಲ್ಲಿ ಅನಧಿಕೃತವಾಗಿ ನಮಾಜ್ ಮಾಡುವುದು ತಪ್ಪಲ್ಲ ಅನ್ನುವುದಾದರೆ ಶಾಲೆ ಕಾಲೇಜು ಆವರಣದಲ್ಲಿ ಜೈ ಶ್ರೀರಾಮ್ ಘೋಷಣೆ ಕೂಗುವುದು ಅಪರಾಧ ವೆಂದು ಸರ್ಕಾರ ಹೇಗೆ ಪರಿಗಣಿಸಿದೆ ಎಂದು ಪ್ರಶ್ನಿಸಿದರು.
ಸರ್ಕಾರದ ಮೇಲೆ ವಿಶ್ವಾಸವಿದೆ ಅವರು ಅಧಿಕಾರಿಗಳು ಜೈ ಶ್ರೀರಾಮ್ ಘೋಷಣೆಗೆ ಏನು ಪ್ರಕರಣ ದಾಖಲಿಸಿದ್ದಾರೆ ಅದನ್ನು ನಮಾಜ್ ಪ್ರಕರಣದಂತೆ ರದ್ದುಗೊಳಿಸುತ್ತಾರೆ. ಹಾಗೂ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರನ್ನು ಪ್ರಕರಣದಿಂದ ಕೈ ಬಿಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮೈಸೂರು ವಿಭಾಗ ಸಂಚಾಲಕಿ ಸವಿತಾ ಘಾಟ್ಕೆ, ಉಪಾಧ್ಯಕ್ಷ ಜಗದೀಶ್ ಹೆಬ್ಬಾರ್, ಅಂಬೀಕಾ ಜೀವನ್, ಕಾರ್ಯದರ್ಶಿ ಪುನೀತ್ ಜಿ, ಸಹ ಕಾರ್ಯದರ್ಶಿ ಜಯಶ್ರೀ, ಜನಾರ್ದನ ರಾವ್, ಮಮತ, ಶಿವು, ಲೋಕೇಶ್, ವಿಶ್ವ ಹಿಂದೂ ಪರಿಷತ್ ನಗರ ಹಾಗೂ ಗ್ರಾಮಾಂತರ ಕಾರ್ಯಕರ್ತರು ಹಾಜರಿದ್ದರು.