ಬೆಂಗಳೂರು: ನಮ್ಮ ಮೆಟ್ರೋ ನಮ್ಮ ಹೆಮ್ಮೆ.. ಬೆಂಗಳೂರಿಗರ ಜೀವನಾಡಿ. ಲಕ್ಷಾಂತರ ಜನರಿಗೆ ಆಧಾರವಾಗಿದೆ. ಮೆಟ್ರೋ ಅಂದರೆ ಸಾಕು ಜನರು ಮುಗಿಬೀಳುತ್ತಾರೆ. ಸಾಮಾನ್ಯವಾಗಿ ಸರ್ಕಾರಿ ಬಸ್ಗಳಲ್ಲಿ ಪ್ರಯಾಣಿಕರುನಿಯಮಗಳನ್ನು ಉಲ್ಲಂಘಿಸಿದರೆ ದಂಡ ವಿಧಿಸಲಾಗುತ್ತದೆ. ಆದರೆ ಕಳೆದ 6 ತಿಂಗಳ ಅವಧಿಯಲ್ಲಿ, ಸುಮಾರು 27,000 ಪ್ರಯಾಣಿಕರು ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಆದರೂ ನಮ್ಮ ಮೆಟ್ರೋ ಪ್ರಯಾಣಿಕರಿಗೆ ದಂಡ ವಿಧಿಸಿಲ್ಲ.
ಈ ಬಗ್ಗೆ ಮಾಧ್ಯಮ ಪ್ರಕಟನೆ ಹೊರಡಿಸಿರುವ ನಮ್ಮ ಮೆಟ್ರೋ, ಸಪ್ಟೆಂಬರ್ 2024 ರಿಂದ ಮಾರ್ಚ್ 2025ರ ವರೆಗೆ ಅಂದರೆ ಕಳೆದ ಆರು ತಿಂಗಳಲ್ಲಿ ಸಂಚಾರ ದಟ್ಟಣೆ ಇಲ್ಲದ ಸಮಯದಲ್ಲಿ ಮೆಟ್ರೋದ ಭದ್ರತಾ ದಳವು ನಡೆಸಿದ ವಾಡಿಕೆಯ ಭದ್ರತಾ ತಪಾಸಣೆಯ ಪ್ರಕಾರ ಸಹ ಪ್ರಯಾಣಿಕರಿಗೆ ಅನಾನುಕೂಲತೆ ಉಂಟುಮಾಡುವ ಹಾಗೂ ಮೆಟ್ರೋ ನಿಯಮಗಳ ಉಲಂಘನೆ ಮಾಡಿದ ಸುಮಾರು 27,000 ಕ್ಕೂ ಹೆಚ್ಚು ಘಟನೆಗಳು ಬಹಿರಂಗವಾಗಿದೆ ಎಂದು ತಿಳಿಸಿದೆ.