ಮದ್ದೂರು: ತಾಲ್ಲೂಕಿನ ಹುಳಗನಹಳ್ಳಿ ಗ್ರಾಮದಲ್ಲಿ ಗುಂಡಿ ಬಿದ್ದ ರಸ್ತೆಗಳನ್ನು ತಮ್ಮ ಸ್ವಂತ ಹಣದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ನಂದೀಶ್ ಗೌಡ ಮುಂಚಿಸುವ ಕೆಲಸಕ್ಕೆ ಮುಂದಾಗಿದ್ದಾರೆ.
ಹುಳಗನಹಳ್ಳಿ ಗ್ರಾಮದಿಂದ ಕದಲಿಪುರಕ್ಕೆ ಹೋಗುವ ರಸ್ತೆ ಸಂಪೂರ್ಣ ರಸ್ತೆ ಗುಂಡಿ ಬಿದ್ದಿದ್ದು, ಗ್ರಾಮ ಪಂಚಾಯಿತಿಯಲ್ಲಿ ರಸ್ತೆ ಗುಂಡಿ ಮುಚ್ಚಿಸಲು ಅನುದಾನವಿಲ್ಲದ ಹಿನ್ನೆಲೆ ಗ್ರಾಮದ ಹಿರಿಯ ಮುಖಂಡರ ಮನವಿ ಮೇರೆಗೆ ಸುಮಾರು ಒಂದು ಪಾಯಿಂಟ್ ಐದು ಲಕ್ಷ ವೆಚ್ಚದಲ್ಲಿ ಗುಂಡಿ ಮುಚ್ಚಿಸುವ ಕೆಲಸಕ್ಕೆ ಸ್ವತಃ ಗ್ರಾಮ ಪಂಚಾಯಿತಿ ಸದಸ್ಯ ನಂದೀಶ್ ಗೌಡ ಮುಂದೆ ನಿಂತು ತಮ್ಮ ಸ್ವಂತ ಹಣದಲ್ಲಿ ಕಾರ್ಯ ಪ್ರವೃತ್ತರಾಗಿದ್ದಾರೆ.

ಈ ವೇಳೆ ಗ್ರಾಮ ಪಂಚಾಯಿತಿ ಸದಸ್ಯ ನಂದೀಶ್ ಗೌಡ ಮಾತನಾಡಿ, ಗುಂಡಿ ಬಿದ್ದ ರಸ್ತೆಗೆ ಜಲ್ಲಿ ಮಣ್ಣು ಹಾಕಿಸುವ ಮೂಲಕ ಗ್ರಾಮದ ಈತ ದೃಷ್ಟಿಯಿಂದ ನನ್ನ ಸ್ವಂತ ಹಣದಲ್ಲಿ ಗ್ರಾಮದ ಹಿರಿಯರ ಮನವಿ ಮೇರೆಗೆ ಅಭಿವೃದ್ಧಿ ಕಾಮಗಾರಿಗೆ ಮುಂದಾಗಿದ್ದು, ಮುಂದಿನ ದಿನಗಳಲ್ಲಿ ಸ್ಥಳೀಯ ಶಾಸಕರ ನೆರವಿನಿಂದ ರಸ್ತೆ ಡಾಂಬರೀಕರಣ ಮಾಡಲು ಶಾಸಕರ ಬಳಿ ಮನವಿ ಮಾಡುತ್ತೇವೆ ಎಂದರು.