Friday, April 18, 2025
Google search engine

Homeಸ್ಥಳೀಯನಂಜನಗೂಡು ಶಾಸಕ ಧ್ರುವನಾರಾಯಣ್ ಅವರ ನೂತನ ಕಛೇರಿ ಉದ್ಘಾಟನೆ

ನಂಜನಗೂಡು ಶಾಸಕ ಧ್ರುವನಾರಾಯಣ್ ಅವರ ನೂತನ ಕಛೇರಿ ಉದ್ಘಾಟನೆ

ನಂಜನಗೂಡು: ಪಟ್ಟಣದ ತಾಲ್ಲೂಕು ಪಂಚಾಯತಿ ಕಟ್ಟಡದಲ್ಲಿ ಶಾಸಕ ದರ್ಶನ್ ಧ್ರುವನಾರಾಯಣ್ ನೂತನ ಕಛೇರಿಯನ್ನು ಟೇಪ್ ಕತ್ತರಿಸುವ ಮೂಲಕ ಉದ್ಘಾಟನೆ ಮಾಡಲಾಗಿತ್ತು.

ಸುಮಾರು ಲಕ್ಷ ರೂ. ಗಳಲ್ಲಿ ಶಾಸಕರ ಕೊಠಡಿಯನ್ನು ನವೀಕರಿಸಲಾಗಿದೆ.

ನಂತರ ಮಾತನಾಡಿದ ಶಾಸಕ ದರ್ಶನ್ ಧ್ರುವನಾರಾಯಣ್, ಸರ್ಕಾರಿ ರಜೆ ದಿನಗಳನ್ನು ಹೊರತುಪಡಿಸಿ ಎಲ್ಲಾ ದಿನಗಳಲ್ಲಿ ಮುಂಜಾನೆ ೧೦ ರಿಂದ ಸಂಜೆ ೪ ರವರೆಗೆ ಕಛೇರಿಯಲ್ಲಿ ಕ್ಷೇತ್ರದ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಲಾಗುವುದು. ಅಹವಾಲುಗಳನ್ನು ಸ್ವೀಕರಿಸಲು ಕಚೇರಿಯಲ್ಲಿ ಪ್ರತ್ಯೇಕವಾಗಿ ಸಿಬ್ಬಂದಿಯನ್ನು ನೇಮಿಸಲಾಗಿರುತ್ತದೆ ಎಂದರು.

ಮುಂದಿನ ದಿನಗಳಲ್ಲಿ ವಾರದಲ್ಲಿ ೨ ದಿನಗಳು ಜನ ಸಂಪರ್ಕ ಸಭೆ ನಡೆಸಲಾಗುತ್ತದೆ. ಕ್ಷೇತ್ರದ ಸಮಸ್ಯೆಗಳನ್ನು ಆದಷ್ಟು ಬೇಗ ನಿವಾರಿಸಲು ಪ್ರಯತ್ನಿಸುತ್ತೇನೆ ಎಂದು ತಿಳಿಸಿದರು.

RELATED ARTICLES
- Advertisment -
Google search engine

Most Popular