ಚಾಮರಾಜನಗರ: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಂದರ್ಭದಲ್ಲಿ ನನ್ನ ಭೂಮಿ ನನ್ನ ದೇಶ ಅಭಿಯಾನವನ್ನು ಆರಂಭಿಸಿರುವ ಕೇಂದ್ರ ಸರ್ಕಾರಕ್ಕೂ ಹಾಗೂ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿ ಅವರಿಗೂ ವಿಶೇಷವಾದ ಅಭಿನಂದನೆಗಳನ್ನು ಋಗ್ವೇದಿ ಯೂತ್ ಕ್ಲಬ್ ಅಧ್ಯಕ್ಷರಾದ ಶರಣ್ಯ ಎಸ್ ಋಗ್ವೇದಿ ಸಲ್ಲಿಸಿದ್ದಾರೆ.
ಪ್ರಧಾನಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿಯವರು ಮನ್ ಕಿ ಬಾತ್ ನಲ್ಲಿ ತಿಳಿಸಿರುವಂತೆ ದೇಶದ ಎಲ್ಲೆಡೆ ನಮ್ಮ ದೇಶಕ್ಕಾಗಿ ಅರ್ಪಣೆ ಮಾಡಿಕೊಂಡು ವೀರ ಸ್ವರ್ಗವನ್ನು ಸೇರಿದ ಯೋಧರಿಗೆ ಗೌರವ ಅಮೃತಂಜಾಲಿಯನ್ನು ನೀಡುವ ಕಾರ್ಯಕ್ರಮ ರೂಪಿಸಿರುವುದು, ಅಮೃತ ಕಳಶ ಯಾತ್ರೆ ಮೂಲಕ ದೇಶದ ವಿವಿಧ ಮಣ್ಣುಗಳನ್ನು ಸಂಗ್ರಹಿಸಿ ರಾಷ್ಟ್ರೀಯ ಸ್ಮಾರಕ ಸ್ಥಾಪನೆ ಮಾಡುವ ಉದ್ದೇಶ ದಿಂದ ರಾಷ್ಟ್ರದ ಪ್ರತಿಯೊಬ್ಬರಲ್ಲೂ ರಾಷ್ಟ್ರೀಯತೆ ,ರಾಷ್ಟ್ರಭಕ್ತಿ ,ರಾಷ್ಟ್ರ ಚಿಂತನೆಯನ್ನು ಮೂಡಿಸಿ ದೇಶದ ಸಂಸ್ಕೃತಿ ,ಪರಂಪರೆ , ಇತಿಹಾಸ,ಗೌರವವನ್ನು ಮತ್ತಷ್ಟು ಹೆಚ್ಚಿಸಲು ಸಹಾಯಕವಾಗುವುದೆಂದು ತಿಳಿಸಿರುವ ಶರಣ್ಯ ಋಗ್ವೇದಿ ಪ್ರತಿ ಹಳ್ಳಿ ಹಳ್ಳಿಗಳಲ್ಲಿ, ಶಾಲಾ-ಕಾಲೇಜುಗಳಲ್ಲಿ, ವಿಶ್ವವಿದ್ಯಾಲಯಗಳಲ್ಲಿ ಕಾರ್ಖಾನೆಗಳಲ್ಲಿ ,ಸಾರ್ವಜನಿಕ ಸ್ಥಳಗಳಲ್ಲಿ ವಿಶೇಷವಾದ ಅಭಿಯಾನವನ್ನು ಪ್ರತಿಯೊಬ್ಬ ಭಾರತೀಯನ ಸ್ವಯಂ ಪ್ರೇರಿತರಾಗಿ ಭಾಗವಹಿಸುವಂತಹ ದೂರದೃಷ್ಟಿಯ ಕಾರ್ಯಕ್ರಮವನ್ನು ರೂಪಿಸುವಂತೇ ಆಗಲಿ. ಪ್ರತಿ ಜಿಲ್ಲೆ ಮತ್ತು ತಾಲೂಕುಗಳಲ್ಲೂ ವಿಶೇಷವಾದ ಸಮಿತಿಗಳನ್ನು ನಿರ್ಮಾಣ ಮಾಡಿ ನಿರಂತರವಾಗಿ ಕಾರ್ಯಕ್ರಮ ರೂಪಿಸಿ ರಾಷ್ಟ್ರದ ಚೈತನ್ಯವನ್ನು ಮತ್ತಷ್ಟು ಹೆಚ್ಚಿಸುವ ದಿಕ್ಕಿನಲ್ಲಿ ಯುವ ಸಮುದಾಯವನ್ನು ,ನಿವೃತ್ತ ಸೈನಿಕರನ್ನು, ಸಕ್ರಿಯ ಸಮಾಜ ಸೇವಕರನ್ನು ಹಾಗೂ ಎಲ್ಲಾ ಸ್ತ್ರೀಶಕ್ತಿ ಸಂಘಗಳನ್ನು ಬಳಸಿಕೊಳ್ಳುವ ಮೂಲಕ ರಾಷ್ಟ್ರದಲ್ಲಿ ನವಸ್ಪೂರ್ತಿಯನ್ನು ತುಂಬಿ ಅಮೃತ ಮಹೋತ್ಸವದ ಸಂದರ್ಭದಲ್ಲಿ ರಾಷ್ಟ್ರೀಯ ಪ್ರಜ್ಞೆಯನ್ನು ವಿಜೃಂಭಿಸಬೇಕೆಂದು ಮನವಿ ಮಾಡಿದ್ದಾರೆ.
ಕೇಂದ್ರ ಸರ್ಕಾರದ ನನ್ನ ಭೂಮಿ ನನ್ನ ದೇಶ ಅಭಿಮಾನ ಅತ್ಯಂತ ಯಶಸ್ವಿಯಾಗಲಿ ಆ ಕಾರ್ಯಕ್ಕಾಗಿ ಸ್ವಯಂ ಪ್ರೇರಿತರಾಗಿ ಹಳ್ಳಿಹಳ್ಳಿಗಳಲ್ಲಿ ಯುವ ಸಮುದಾಯ ಜಾಗೃತಗೊಳ್ಳಬೇಕಾಗಿದೆ ಎಂದು ಅವರು ತಿಳಿಸಿ ಇದೊಂದು ರಾಷ್ಟ್ರಕಾಗಿ ಸಲ್ಲಿಸುವ ಸೇವೆ ಎಂದು ಭಾವಿಸಿ, ಈ ಕಾರ್ಯದಲ್ಲಿ ಸಂಪೂರ್ಣ ವಿದ್ಯಾರ್ಥಿಗಳು ಭಾಗವಹಿಸಿ ಯಶಸ್ವಿಗೊಳಿಸಿ ಕೊಡಬೇಕು ಎಂದು ಶರಣ್ಯ ಋಗ್ವೇದಿ ಮನವಿ ಮಾಡಿದ್ದಾರೆ.
ನನ್ನ ಭೂಮಿ ನನ್ನ ದೇಶ ಶೀರ್ಷಿಕೆ ಅಡಿಯಲ್ಲಿ ಅಭಿಯಾನ ಕೈಗೊಂಡಿರುವ ಕೇಂದ್ರ ಸರ್ಕಾರಕ್ಕೆ ಅಭಿನಂದನೆಯನ್ನು ಸಲ್ಲಿಸಿ ಪ್ರಧಾನಿ ಮೋದಿಯವರಿಗೆ ಪತ್ರ ಬರೆದು ಅರ್ಪಿಸಿದ್ದಾರೆ.