Saturday, April 19, 2025
Google search engine

Homeಸಿನಿಮಾಜುಲೈ 7 ರಂದು 'ನ್ಯಾನೋ ನಾರಾಯಣಪ್ಪ' ಚಿತ್ರ ಬಿಡುಗಡೆ

ಜುಲೈ 7 ರಂದು ‘ನ್ಯಾನೋ ನಾರಾಯಣಪ್ಪ’ ಚಿತ್ರ ಬಿಡುಗಡೆ

ನಿರ್ದೇಶಕ ಕುಮಾರ್ ಅವರ ‘ನ್ಯಾನೋ ನಾರಾಯಣಪ್ಪ’ ಎನ್ನುವ ಚಿತ್ರ ವಿಭಿನ್ನ ಟೈಟಲ್‌ ನಿಂದ  ಭಾರೀ ಕುತೂಹಲ ಮೂಡಿಸಿದೆ.

‘KGF’ ಚಿತ್ರದಲ್ಲಿ ಸಣ್ಣ ಪಾತ್ರ ಮಾಡಿ ಗಮನ ಸೆಳೆದ ದಿವಂಗತ ಕೃಷ್ಣೋಜಿ ರಾವ್ ಚಿತ್ರದ ಲೀಡ್ ರೋಲ್‌ ನಲ್ಲಿ ನಟಿಸಿದ್ದಾರೆ. ಹಾಸ್ಯದ ಜೊತೆಗೆ ಭಾವಾನತ್ಮಕ ಅಂಶವನ್ನು ಹದವಾಗಿ ಬೆರೆಸಿ ಕುಮಾರ್ ‘ನ್ಯಾನೋ ನಾರಾಯಣಪ್ಪ’ ಸಿನಿಮಾ ಕಥೆ ಹೆಣೆದಿದ್ದಾರೆ. 6 ತಿಂಗಳ ಹಿಂದೆಯಷ್ಟೆ ನಟ ಕೃಷ್ಣೋಜಿ ರಾವ್ ನಿಧನರಾಗಿದ್ದರು. ಅವರ ಕೊನೆಯ ಸಿನಿಮಾ ‘ನ್ಯಾನೋ ನಾರಾಯಣಪ್ಪ’ ಜುಲೈ 7ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ಚಿತ್ರದ ‘ಮನಿ ಹಂಟರ್’ ಸಾಂಗ್ ಬಿಡುಗಡೆಯಾಗಿದೆ. ನಿರ್ದೇಶಕ ಕುಮಾರ್ ಸಾಹಿತ್ಯದ ಬರೆದಿರುವ ಈ ಹಾಡನ್ನು ಅಂಕಿತಾ ಕುಂಡು ಹಾಡಿದ್ದಾರೆ. ಆಕಾಶ್ ಪರ್ವ ಟ್ಯೂನ್ ಹಾಕಿದ್ದು ಹಾಟ್ ಅಂಡ್ ಸ್ಪೈಸಿ ಸಾಂಗ್‌ ಗೆ ಗಿರಿ, ಶಿವಣ್ಣ, ಕಾಕ್ರೋಚ್ ಸುಧಿ ಸೇರಿದಂತೆ ಹಲವರು ಹೆಜ್ಜೆ ಹಾಕಿದ್ದಾರೆ.
ಕೇಸರಿ ಫಿಲ್ಮಂ ಕ್ಯಾಪ್ಚರ್ ಬ್ಯಾನರ್ ಅಡಿಯಲ್ಲಿ ಸ್ವತಃ ಕುಮಾರ್ ‘ನ್ಯಾನೋ ನಾರಾಯಣಪ್ಪ’ ಚಿತ್ರ ನಿರ್ಮಾಣ ಮಾಡಿದ್ದಾರೆ. ಕಾಕ್ರೋಚ್ ಸುಧಿ, ಗಿರೀಶ್ ಶಿವಣ್ಣ, ಪ್ರಶಾಂತ್ ಸಿದ್ದಿ, ಅನಂತು, ಅಪೂರ್ವಾ ಮುಂತಾದವರು ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಶಿವಶಂಕರ ಛಾಯಾಗ್ರಾಹಣ, ಆಕಾಶ್ ಪರ್ವ ಸಂಗೀತ, ದೀಪು ಮತ್ತು ಸಿದ್ದಾರ್ಥ್ ನಾಯಕ ಸಂಕಲನ ಚಿತ್ರಕ್ಕಿದೆ.

RELATED ARTICLES
- Advertisment -
Google search engine

Most Popular