ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಅಪೆಕ್ಸ್ ಬ್ಯಾಂಕ್ ಮೂಲಕ ಡಿಸಿಸಿ ಬ್ಯಾಂಕಿಗೆ ನೀಡುತ್ತಿದ್ದ ಅನುದಾನವನ್ನು ಕಡಿತಗೊಳಿಸಿರುವುದರಿಂದ ಕೃಷಿ ಪತ್ತಿನ ಸಹಕಾರ ಸಂಘಗಳ ಹೊಸ ಸದಸ್ಯರಿಗೆ ಸಾಲ ಸೌಲಭ್ಯ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಎಂಸಿಡಿಸಿಸಿ ಬ್ಯಾಂಕಿನ ನಿರ್ದೇಶಕ ದೊಡ್ಡಸ್ವಾಮೇಗೌಡ ಹೇಳಿದರು.
ತಾಲೂಕಿನ ನಾರಾಯಣಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ೨೦೨೪-೨೫ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಜಿಲ್ಲಾ ಬ್ಯಾಂಕಿಗೆ ಇತ್ತೀಚೆಗೆ ಚುನಾವಣೆ ನಡೆದು ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪೂರ್ಣಗೊಂಡ ನಂತರ ವಿಶೇಷ ಅನುದಾನ ತರಲಾಗುತ್ತದೆ ಎಂದರು. ರೈತರಿಗೆ ಅನುಕೂಲ ಮಾಡಿಕೊಡಬೇಕೆಂಬ ಉದ್ಧೇಶದಿಂದ ಸರ್ಕಾರ ಸಹಕಾರ ಸಂಘಗಳ ಮೂಲಕ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುತ್ತಿದ್ದು, ಇದನ್ನು ರೈತ ಭಾಂದವರು ಸದ್ಬಳಕೆ ಮಾಡಿಕೊಳ್ಳಬೇಕೆಂದು ಮನವಿ ಮಾಡಿದ ನಿರ್ದೇಶಕರು ಯಾವುದೇ ಕಾಣರಕ್ಕೂ ಸುಸ್ತಿದಾರರಾಗಬಾರದು ಎಂದು ತಿಳಿಸಿದರು.
ಅಧ್ಯಕ್ಷ ಎನ್.ಎಸ್.ವಿಠಲ ಮಾತನಾಡಿ ಸಂಘದ ರೈತ ಸದಸ್ಯರ ಮಕ್ಕಳು ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇ.೮೫ಕ್ಕಿಂತ ಹೆಚ್ಚು ಅಂಕ ಗಳಿಸಿರುವ ವಿದ್ಯಾರ್ಥಿಗಳಿಗೆ ಈ ಬಾರಿಯಿಂದ ಪುರಸ್ಕಾರ ನೀಡಿ ನಗದು ಬಹುಮಾನ ನೀಡಲಾಗಿದೆ ಎಂದು ಹೇಳಿದರು. ಮರಣ ಹೊಂದಿದ ಸದಸ್ಯರಿಗೂ ತಲಾ ಐದು ಸಾವಿರ ರೂ ನೀಡಲಾಗುತ್ತಿದ್ದು, ೨೩ ಮಂದಿಗೆ ೧.೧೫ ಲಕ್ಷ ನೀಡಲಾಗಿದೆ ಎಂದು ಮಾಹಿತಿ ನೀಡಿದ ಅಧ್ಯಕ್ಷರು ರೈತರಿಗೆ ಉಪಯುಕ್ತವಾದ ಕಾರ್ಯಕ್ರಮಗಳನ್ನು ಸಂಘದ ವತಿಯಿಂದ ನೀಡಲು ಉದ್ಧೇಶಿಸಲಾಗಿದೆ ಎಂದರು.
ಸAಘದಿAದ ಪಡಿತರ ವಿತರಣೆ ಮಾಡುತ್ತಿದ್ದು, ಗ್ರಾಹಕರಿಗೆ ತೊಂದರೆಯಾಗಬಾರದೆAಬ ಉದ್ಧೇಶದಿಂದ ಸಂಘಕ್ಕೊಳಪಡುವ ಎಲ್ಲಾ ಗ್ರಾಮಗಳಲ್ಲೂ ಉಪಕೇಂದ್ರಗಳನ್ನು ತೆರೆದು ಸಕಾಲದಲ್ಲಿ ಪಡಿತರ ವಿತರಣೆ ಮಾಡಲಾಗುತ್ತದೆ ಎಂದು ಹೇಳಿದ ಅಧ್ಯಕ್ಷರು ಸಂಘದ ಕಟ್ಟಡದ ಸುತ್ತ ತಡೆಗೋಡೆ ನಿರ್ಮಿಸಲು ಆಡಳಿತ ಮಂಡಳಿ ನಿರ್ಧರಿಸಿದ್ದು, ಸರ್ವ ಸದಸ್ಯರೂ ಸಹಕಾರ ನೀಡಬೇಕೆಂದು ಕೋರಿದರು.
ರೈತ ಮುಖಂಡರಾದ ಕೆ.ಎಂ.ಶ್ರೀನಿವಾಸ್, ಅಣ್ಣಯ್ಯ, ಶಶಿಧರಮೂರ್ತಿ, ನಾಗರಾಜು, ತಮ್ಮಯ್ಯ, ಗೋವಿಂದರಾಜು, ದಾಮೋದರ್, ಕಾಂತರಾಜು ಮಾತನಾಡಿ ಸಾಲ ವಸೂಲಾತಿಗೆ ಮೊದಲ ಆದ್ಯತೆ ನೀಡಿ ಸಂಘವನ್ನು ಮತ್ತಷ್ಟು ಆರ್ಥಿಕವಾಗಿ ಅಭಿವೃದ್ಧಿಪಡಿಸಬೇಕೆಂದು ಸಲಹೆ ನೀಡಿದರು.
ಜಿಲ್ಲಾ ಬ್ಯಾಂಕಿನ ಪ್ರತಿನಿಧಿ ಟಿ.ಉಮೇಶ್, ಉಪಾಧ್ಯಕ್ಷ ಎನ್.ಎಸ್.ಮಂಜುನಾಥ್, ನಿರ್ದೇಶಕರಾದ ಎನ್.ಹೆಚ್.ರುದ್ರಸ್ವಾಮಿ, ಎಸ್.ಡಿ.ದಿವಾಕರ, ಎಸ್.ಕೆ.ಶಶಿಕುಮಾರ್, ಎನ್.ಯೋಗೇಶ್, ಶಿವಶಂಕರ್, ಎನ್.ಎಂ.ಪ್ರಸನ್ನಕುಮಾರ್, ರುದ್ರನಾಯಕ, ಮಹಾಲಿಂಗಯ್ಯ, ಹೇಮಾವತಿ, ಅನುರಾಧ, ಮುಖ್ಯಕಾರ್ಯನಿರ್ವಾಹಕಾಧಿಕಾರಿ ಕೆ.ಜಯಣ್ಣ, ಸಿಬ್ಬಂದಿಗಳಾದ ಎಸ್.ಶ್ರೀನಿವಾಸ್, ಎಸ್.ಆರ್.ಯೋಗೇಶ್, ಎಂ.ಮಹದೇವ, ಎನ್.ಟಿ.ರೇವಣ್ಣ, ಎಸ್.ಕಿರಣ್‌ಕುಮಾರ್ ಹಾಜರಿದ್ದರು.