Saturday, April 19, 2025
Google search engine

Homeಸ್ಥಳೀಯಕುಲಕಸುಬು ಉಳಿಸಿ ಬೆಳೆಸುವ ಕಡೆ ಜನಾಂಗ ಕಾರ್ಯೋನ್ಮುಖರಾಗಬೇಕು: ಕೆ ಹರೀಶ್ ಗೌಡ

ಕುಲಕಸುಬು ಉಳಿಸಿ ಬೆಳೆಸುವ ಕಡೆ ಜನಾಂಗ ಕಾರ್ಯೋನ್ಮುಖರಾಗಬೇಕು: ಕೆ ಹರೀಶ್ ಗೌಡ

ಮೈಸೂರು: ಕುಲಕಸುಬು ಉಳಿಸಿ ಬೆಳೆಸುವ ಕಡೆ ಜನಾಂಗ ಕಾರ್ಯೋನ್ಮುಖರಾಗಬೇಕು ಎಂದು ಚಾಮರಾಜ ಕ್ಷೇತ್ರದ ಶಾಸಕರಾದ ಹರೀಶ್ ಗೌಡ ತಿಳಿಸಿದರು.

ಮೈಸೂರು ಜಿಲ್ಲಾ ಚಿನ್ನ ಬೆಳ್ಳಿ ಕೆಲಸಗಾರರ ಅಭಿವೃದ್ಧಿ ಸಂಘದ ಉದ್ಘಾಟನೆ ಸಮಾರಂಭ ಹಾಗೂ ಭಗವಾನ್ ವಿಶ್ವಕರ್ಮ ರವರ ಪೂಜಾ ಕಾರ್ಯಕ್ರಮದಲ್ಲಿ ಸಂಘದ ರಹದಾರಿ ಬಿಡುಗಡೆಗೊಳಿಸಿ ಮಾತನಾಡಿದರು.

ಪ್ರಸ್ತುತ ದಿನದಲ್ಲಿ ಎಷ್ಟೇ ತಂತ್ರಜ್ಞಾನ ಅವಿಷ್ಕಾರಗಳು ಮುಂದುವರೆದರೂ ಸಹ ಪುರಾತನ ಶೈಲಿಯ ವಿಶ್ವಕರ್ಮ ಜನಾಂಗದ ಕೆತ್ತನೆ ಕೆಲಸಕ್ಕೆ ಮಹತ್ವವಿದೆ ಬೇಡಿಕೆಯಿದೆ.  ಅದರಲ್ಲೂ ನಮ್ಮ ಹಳೇಮೈಸೂರು ಭಾಗದ  ಶಿಲ್ಪಕಲೆ ಕೆತ್ತನೆ, ಚಿನ್ನಾಭರಣಗಳ ಶೈಲಿ, ಮತ್ತು ಮರಗೆಲಸಗಳ ಕೆಲಸ ನಿರ್ವಹಿಸುವ ವಿಶ್ವಕರ್ಮ ಜನಾಂಗದವರಿಗೆ ದೇಶವಿದೇಶದಲ್ಲಿ ಬೇಡಿಕೆಯಿದೆ.  ಮೈಸೂರು ಸುತ್ತಮುತ್ತ ವಿಶ್ವಕರ್ಮ ಜನಾಂಗದ ಜನಸಂಖ್ಯೆ ಉತ್ತಮವಾಗಿದೆ ಸಂಘಟನಾತ್ಮಕವಾಗಿ ಎಲ್ಲರೂ ಒಗ್ಗೂಡಬೇಕಿದೆ ಮತ್ತು ಉಳ್ಳವರು ಉಳ್ಳವರಿಗಾಗಿ ಸಹಕಾರ ನೀಡಲು ಸಹಕಾರಿ ಸಂಘ ಸಂಸ್ಥೆಗಳ ಸ್ಥಾಪನೆಯ ಕಡೆ ಚಿಂತಿಸಿ ಎಂದು ಕರೆ ನೀಡಿದರು

ಬುದ್ಧಿವಂತಿಕೆ, ದೂರದೃಷ್ಟಿ, ಕೌಶಲಗಳನ್ನು ಹೊಂದಿರುವ ವಿಶ್ವಕರ್ಮ ಸಮಾಜದವರು ಹುಟ್ಟು ತಂತ್ರಜ್ಞರಾಗಿದ್ದಾರೆ. ನಿರಂತರ ಸಾಮಾಜಿಕ ಸೇವೆಯಲ್ಲಿ ನಿರತರಾದ ಈ ಸಮುದಾಯ ಶೈಕ್ಷಣಿಕ, ಆರ್ಥಿಕ, ರಾಜಕಿಯ ಸೇರಿದಂತೆ ಎಲ್ಲ ರಂಗದಲ್ಲಿಯೂ ಸಬಲರಾಗಬೇಕು’ ಎಂದು ಆಶಿಸಿದರು.

ಇಡೀ ಮನುಕುಲಕ್ಕೆ ಅನ್ನ ನೀಡುವ ರೈತಾಪಿ ವರ್ಗದವರಿಗೆ ಅತ್ಯವಶ್ಯಕ ಈ ವಿಶ್ವಕರ್ಮದವರು. ಶ್ರಮಿಕ ವರ್ಗದ ಸ್ವಾಭಿಮಾನಿ ಜೀವಿಗಳು ಇವರು. ಪ್ರತಿಯೊಂದು ದೇವರ ಪರಿಕಲ್ಪನೆ ಕಟ್ಟಿಕೊಟ್ಟದ್ದು ಈ ಸಮಾಜ. ಹೀಗಾಗಿ ವಿಶ್ವಕರ್ಮರು ಇಲ್ಲದೆ ಇ ಜಗತ್ತು ಇಲ್ಲಎಂದು ನುಡಿದರು

ಇದೇ ಸಂದರ್ಭದಲ್ಲಿ ನೂತನವಾಗಿ ಅಧ್ಯಕ್ಷರಾಗಿ ನೇಮಕಗೊಂಡ ಮೈಸೂರು ಜಿಲ್ಲಾ ಚಿನ್ನ ಬೆಳ್ಳಿ ಕೆಲಸಗಾರರ ಅಭಿವೃದ್ಧಿ ಸಂಘದ ಸುರೇಶ್ ಗೋಲ್ಡ್ ರವರಿಗೆ ಸನ್ಮಾನಿಸಿ ಅಭಿನಂದಿಸಿದರು.

ಮುಖ್ಯ ಅತಿಥಿಗಳಾಗಿ ಶಾಸಕರಾದ ಕೆ ಹರೀಶ್ ಗೌಡ  , ನಗರಪಾಲಿಕ ಸದಸ್ಯರಾದ ರಮಣಿ, ಲೋಕೇಶ್ ಪಿಯಾ, ಮೈಸೂರು ಜಿಲ್ಲಾ ಚಿನ್ನ ಬೆಳ್ಳಿ ಕೆಲಸಗಾರರ ಅಭಿವೃದ್ಧಿ ಸಂಘದ ಸುರೇಶ್ ಗೋಲ್ಡ್,  ಸಂಘದ ಗೌರವಾಧ್ಯಕ್ಷರು ರವಿಪ್ರಕಾಶ್ ಮತ್ತು ರಾಘವೇಂದ್ರ , ಹಾಗೂ ಇನ್ನಿತರರು ಭಾಗವಹಿಸಿದ್ದರು.

RELATED ARTICLES
- Advertisment -
Google search engine

Most Popular