Friday, April 18, 2025
Google search engine

Homeರಾಜ್ಯ'ಕಾಂತಾರ’ ಸಿನೆಮಾದಲ್ಲಿನ ಅಭಿಯನಕ್ಕಾಗಿ ನಟ ರಿಷಭ್‌ ಶೆಟ್ಟಿಗೆ 'ಅತ್ಯುತ್ತಮ ನಟ’ ಪ್ರಶಸ್ತಿ

‘ಕಾಂತಾರ’ ಸಿನೆಮಾದಲ್ಲಿನ ಅಭಿಯನಕ್ಕಾಗಿ ನಟ ರಿಷಭ್‌ ಶೆಟ್ಟಿಗೆ ‘ಅತ್ಯುತ್ತಮ ನಟ’ ಪ್ರಶಸ್ತಿ

ಹೊಸದಿಲ್ಲಿ: ಹೊಸದಿಲ್ಲಿಯಲ್ಲಿ ನಡೆದ 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ‘ಕಾಂತಾರ’ ಸಿನೆಮಾದಲ್ಲಿನ ಅಭಿಯನಕ್ಕಾಗಿ ನಟ ರಿಷಭ್‌ ಶೆಟ್ಟಿ ‘ಅತ್ಯುತ್ತಮ ನಟ’ ಪ್ರಶಸ್ತಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಸ್ವೀಕರಿಸಿದ್ದಾರೆ. ಈ ಬಾರಿ ಕನ್ನಡಕ್ಕೆ 7 ಪ್ರಶಸ್ತಿಗಳು ಲಭಿಸಿವೆ.

ಇದಲ್ಲದೆ “ಕಾಂತಾರ’ ಸಿನೆಮಾಕ್ಕಾಗಿ “ಅತ್ಯುತ್ತಮ ಮನೋರಂಜನೆ ಸಿನೆಮಾ’, ಪ್ರಾದೇಶಿಕ ಭಾಷೆಗಳ ವಿಭಾಗದಲ್ಲಿ “ಅತ್ಯುತ್ತಮ ಕನ್ನಡ ಸಿನೆಮಾ’ ಪ್ರಶಸ್ತಿಯನ್ನು “ಕೆಜಿಎಫ್‌ -2′, ಸಾಹಸ ನಿರ್ದೇಶನಕ್ಕಾಗಿ ಇರುವ ಪ್ರಶಸ್ತಿ “ಕೆಜಿಎಫ್‌ -2′, “ಮಧ್ಯಂತರ’ ಸಿನೆಮಾಕ್ಕಾಗಿ “ಅತ್ಯುತ್ತಮ ಸಂಕಲನ’ ಪ್ರಶಸ್ತಿಯನ್ನು ಸುರೇಶ್‌ ಅರಸ್‌, ನಿರ್ದೇಶಕರ ಚೊಚ್ಚಲ ಸಿನೆಮಾಕ್ಕಾಗಿನ ಪ್ರಶಸ್ತಿಯನ್ನು ಮಧ್ಯಂತರ’ ಸಿನೆಮಾ ನಿರ್ದೇಶಕ ದಿನೇಶ್‌ ಶೆಣೈ, ಅತ್ಯುತ್ತಮ ಕಲೆ ಮತ್ತು ಸಾಂಸ್ಕೃತಿಕ ಚಲನಚಿತ್ರ ಪ್ರಶಸ್ತಿ’ ರಂಗ ವೈಭೋಗ’ ಸಿನೆಮಾಕ್ಕೆ ನೀಡಿ ಗೌರವಿಸಲಾಯಿತು.

ಜತೆಗೆ ಈ ಬಾರಿಯ ಪ್ರತಿಷ್ಠಿತ “ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ’ಯನ್ನು ಹಿರಿಯ ನಟ ಮಿಥುನ್‌ ಚಕ್ರವರ್ತಿಯವರಿಗೂ ರಾಷ್ಟ್ರಪತಿಗಳು ಇದೇ ಸಂದರ್ಭದಲ್ಲಿ ವಿತರಿಸಿದರು.

ಜನಪ್ರಿಯ ಚಲನಚಿತ್ರಗಳಾದ ಕಾಂತಾರ ಹಾಗೂ ಶ್ರೇಷ್ಠ ಕನ್ನಡ ಚಿತ್ರ ಕೆಜಿಎಫ್‌ -2 ರಾಷ್ಟ್ರ ಪ್ರಶಸ್ತಿ ಪಡೆದ ನಿರ್ಮಾಪಕ ವಿಜಯ್‌ ಕಿರಗಂದೂರು ರಾಷ್ಟ್ರಪತಿ ದ್ರೌಪದಿ ಮುರ್ಮುರಿಂದ ಪ್ರಶಸ್ತಿ ಸ್ವೀಕರಿಸಿದರು.

RELATED ARTICLES
- Advertisment -
Google search engine

Most Popular