ಬೆಂಗಳೂರು: ಕೆಎಸ್ಆರ್ಟಿಸಿಗೆ ಒಟ್ಟು 9 ವರ್ಗಗಳಲ್ಲಿ ಹಾಗೂ ಬಿಎಂಟಿಸಿಗೆ 4 ವರ್ಗಗಳಲ್ಲಿ ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿಯ ಕಾರ್ಪೊರೇಟ್ ಮೇಲಾಧಾರ(Corporate Collateral) ರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿವೆ. ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿ, ನವದೆಹಲಿಯ ಪಿ.ಹೆಚ್.ಡಿ. ಚೇಂಬರ್ಸ್ನಲ್ಲಿ ಆಯೋಜಿಸಿದ್ದ 17ನೇ ವಿಶ್ವ ಸಂವಹನ ಸಮ್ಮೇಳನ ಮತ್ತು ಪ್ರಶಸ್ತಿ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಿಗಮದ ಪರವಾಗಿ ಕೆಎಸ್ಆರ್ಟಿಸಿಯ ವಿಭಾಗೀಯ ನಿಯಂತ್ರಣಾಧಿಕಾರಿ ಹಿಮವರ್ಧನ ನಾಯ್ಡು ಅಲೂರಿ(ಚಿಕ್ಕಬಳ್ಳಾಪುರ ವಿಭಾಗ), ಕೋಲಾರ ವಿಭಾಗದ ವಿ. ಬಸವರಾಜು, ಬೆಂಗಳೂರು ಕೇಂದ್ರೀಯ ವಿಭಾಗದ ಎಸ್. ಲಕ್ಷ್ಮಣ್ ಹಾಗೂ ಮಂಡ್ಯ ವಿಭಾಗದ ಎಸ್.ಪಿ ನಾಗರಾಜ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು.
ಬಾಂಗ್ಲಾದೇಶ ಮಾಹಿತಿ ಆಯುಕ್ತ ಗುಲಾಂ ರೆಹಮಾನ್, ಪಿ.ಆರ್.ಸಿ.ಐ ಮುಖ್ಯಸ್ಥ ಎಂ ಬಿ ಜಯರಾಂ, ಎನ್.ಎಫ್.ಎಲ್ ನಿರ್ದೇಶಕ ಬಿ.ವಿ ವಿಠ್ಠಲ್, ಸ್ವಿಜರ್ಲೆಂಡ್ ಮಾಧ್ಯಮ ಹಾಗೂ ಪತ್ರಿಕೋದ್ಯಮ ಸಂಸ್ಥೆ (IMeG) ನಿರ್ದೇಶಕ ಪ್ರೊ. ಮ್ಯಾಥ್ಯು ಹಿಬರ್ಡ್ ವಿವಿಧ ವರ್ಗಗಳಲ್ಲಿ ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಲಭಿಸಿದ ಪ್ರಶಸ್ತಿಗಳ ವಿವರ ಈ ಕೆಳಗಿನಂತಿದೆ.
ಕೆಎಸ್ಆರ್ಟಿಸಿಗೆ ದೊರೆತ ಪ್ರಶಸ್ತಿಗಳು:
- ವರ್ಷದ ಅತ್ಯುತ್ತಮ ಗ್ರಾಹಕ ಸ್ನೇಹಿ ಸಂಸ್ಥೆ- ಡೈಮಂಡ್ ಪ್ರಶಸ್ತಿ
- ಅತ್ಯುತ್ತಮ ವರ್ಷದ ಸೇವಾ ಉಪಕ್ರಮ – ಡೈಮಂಡ್ ಪ್ರಶಸ್ತಿ
- ಸಾಂಸ್ಥಿಕ ಹಾಗೂ ವ್ಯಾವಹಾರಿಕ ಸಂಪರ್ಕ ಉಪಕ್ರಮ- ಡೈಮಂಡ್ ಪ್ರಶಸ್ತಿ
- ಗ್ರಾಹಕ ಸೇವೆಯಲ್ಲಿ ಅತ್ಯುತ್ತಮ ತಾಂತ್ರಿಕತೆ ಬಳಕೆ- ಬೆಳ್ಳಿ ಪ್ರಶಸ್ತಿ
- ವಿವಿಧತೆ ಹಾಗೂ ಸಮಾನತೆಯ ಉತ್ತಮ ಉಪಕ್ರಮ- ಬೆಳ್ಳಿ ಪ್ರಶಸ್ತಿ
- ಅತ್ಯುತ್ತಮ ವರ್ಷದ ಉಪಕ್ರಮ ಉತ್ಪನ್ನ- ಬೆಳ್ಳಿ ಪ್ರಶಸ್ತಿ
- ಅತ್ಯುತ್ತಮ ಮಾನವ ಸಂಪನ್ಮೂಲ ಉಪಕ್ರಮ- ಕಂಚಿನ ಪ್ರಶಸ್ತಿ
- ಸಾರ್ವಜನಿಕ ಸಂಪರ್ಕ ಅಧ್ಯಯನ- ಕಂಚಿನ ಪ್ರಶಸ್ತಿ
- ಪ್ರಾದೇಶಿಕ ಆಂತರಿಕ ನಿಯತಕಾಲಿಕ ಮುದ್ರಣ- ಸಮಾಧಾನಕರ ಪ್ರಶಸ್ತಿ.
ಬಿ.ಎಂ.ಟಿ.ಸಿಗೆ ದೊರೆತ ಪ್ರಶಸ್ತಿಗಳು
ಬಿಎಂಟಿಸಿಗೆ ಈ ಕೆಳಕಂಡ 4 ವರ್ಗಗಳಲ್ಲಿ ಪ್ರಶಸ್ತಿ ಲಭಿಸಿದ್ದು, ಸಂಸ್ಥೆಯ ಪರವಾಗಿ ಪಶ್ಚಿಮ ವಲಯದ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಾಥ್ ಎನ್ ಪ್ರಶಸ್ತಿಯನ್ನು ಸ್ವೀಕರಿಸಿದರು.
1.ಸಾಂಸ್ಥಿಕ ಕೈಪಿಡಿ- ಡೈಮಂಡ್ ಪ್ರಶಸ್ತಿ
2.ಗ್ರಾಹಕ ಸೇವೆಯಲ್ಲಿ ಅತ್ಯುತ್ತಮ ತಾಂತ್ರಿಕತೆ ಬಳಕೆ- ಚಿನ್ನದ ಪ್ರಶಸ್ತಿ
3.ಅತ್ಯುತ್ತಮ ಮಾನವ ಸಂಪನ್ಮೂಲ ಉಪಕ್ರಮ- ಬೆಳ್ಳಿ ಪ್ರಶಸ್ತಿ
4.ವರ್ಷದ ಅತ್ಯುತ್ತಮ ಸೃಜನಶೀಲ ಜಾಹೀರಾತು-ಕಂಚಿನ ಪ್ರಶಸ್ತಿ