Thursday, April 3, 2025
Google search engine

Homeಆರೋಗ್ಯಹೆಚ್ ಡಿ ಕೋಟೆ: ರಾಷ್ಟ್ರೀಯ ಜಂತುಹುಳು ನಿವಾರಣ ಕಾರ್ಯಕ್ರಮ

ಹೆಚ್ ಡಿ ಕೋಟೆ: ರಾಷ್ಟ್ರೀಯ ಜಂತುಹುಳು ನಿವಾರಣ ಕಾರ್ಯಕ್ರಮ

ವರದಿ: ಎಡತೊರೆ ಮಹೇಶ್

ಹೆಚ್ ಡಿ ಕೋಟೆ: ಇಂದು ಹೆಚ್ ಡಿ ಕೋಟೆ ತಾಲೋಕು ಮಟ್ಟದ ರಾಷ್ಟ್ರೀಯ ಜಂತುಹುಳು ನಿವಾರಣ ಕಾರ್ಯಕ್ರಮವನ್ನು ಹೈರಿಗೆ ಶಾಲೆಯಲ್ಲಿ ಆಯೋಜನೆ ಮಾಡಲಾಗಿತ್ತು. ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತಿ ಜಯನಾಗರಾಜು ಹಾಗೂ ಎಸ್ ಡಿ ಎಂ ಅದ್ಯಕ್ಷೆ ಕಾಳಮ್ಮ ವಹಿಸಿ ಉದ್ಘಾಟಿಸಿ ಚಾಲನೆ ನೀಡಿದರು.

ಇದೇ ಸಂದರ್ಭದಲ್ಲಿ ತಾಲೋಕು ಆರೋಗ್ಯಾಧಿಕಾರಿಗಳಾದ ಡಾ” ರವಿಕುಮಾರ್ ಅವರು ಮಾತನಾಡಿ, ಕರ್ನಾಟಕದಲ್ಲಿ 2015 ರಿಂದ ಪ್ರಾರಂಭಿಸಿ 2023ರ ವರೆಗೆ ಒಟ್ಟು 15 ಸುತ್ತುಗಳಲ್ಲಿ ಸದರಿ ಕಾರ್ಯಕ್ರಮವನ್ನು ಅನುಷ್ಠಾನ ಮಾಡಲಾಗಿರುತ್ತದೆ ಅದರಂತೆ 2024ನೇ ಸಾಲಿನ ರಾಷ್ಟ್ರೀಯ ಜಂತುಹುಳು ನಿವಾರಣ ಕಾರ್ಯಕ್ರಮವನ್ನು ದಿನಾಂಕ 09.02 2024 ಹಾಗೂ ದಿನಾಂಕ 16.12.2024ರಂದು ಮಾಪ್ ಆಪ್ ದಿನವಾಗಿ ಹಮ್ಮಿಕೊಳ್ಳಲಾಗುತ್ತಿದೆ. ಈ ಸದರಿ ಕಾರ್ಯಕ್ರಮದಲ್ಲಿ 1-19 ವರ್ಷದೊಳಗಿನ ಎಲ್ಲಾ ಮಕ್ಕಳನ್ನು ಗುರಿಯಾಗರಿಸಿ ಕೊಳ್ಳಲಾಗಿದ್ದು ಅದರಂತೆ 2024ನೇ ಸಾಲಿನಲ್ಲಿ 58597 ಮಕ್ಕಳಿಗೆ ಜಂತುಹುಳು ಮಾತ್ರೆಯನ್ನು ನೀಡಲು ಕ್ರಿಯಾ ಯೋಜನೆಯೊಂದಿಗೆ ಕಾರ್ಯ ಪ್ರವೃತ್ತರಾಗಿರುತ್ತೇವೆ.

ಜಂತು ಹುಳು ಸೋಂಕು ಹರಡುವ ವಿಧಾನಗಳು

  • ಕಳಪೆ ನೈರ್ಮಲ್ಯ ಮತ್ತು ಕೊಳಕು ಸ್ಥಿತಿಗಳಿಂದ ಸೋಂಕುಗಳು ಉಂಟಾಗುತ್ತವೆ
  • ಜಂತುಹುಳು ಸೋಂಕಿನ ಮಣ್ಣಿನ ಸಮರ್ಪಕದಿಂದ ಹರಡುತ್ತದೆ.
  • ಮಕ್ಕಳ ಕರುಳಿನಲ್ಲಿ ಹೆಚ್ಚು ಸಂಖ್ಯೆಯ ಜಂತುಹುಳು ಇದ್ದಲ್ಲಿ ಹೆಚ್ಚು ಪ್ರಮಾಣದ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಆರೋಗ್ಯ ಮತ್ತು ಪೋಷಕಾಂಶದ ಮೇಲೆ ಜಂತುಹುಳಗಳ ಪರಿಣಾಮ
    ಜಂತು ಹುಳು ಸೋಂಕು ವ್ಯಕ್ತಿಯ ಪೌಷ್ಟಿಕತೆಯ ಮೇಲೆ ಅನೇಕ ರೀತಿಯ ಪರಿಣಾಮಗಳನ್ನು ಬೀರುತ್ತದೆ.
  • ಜಂತು ಹುಳುಗಳು ವ್ಯಕ್ತಿಯಲ್ಲಿ ರಕ್ತವನ್ನು ಒಳಗೊಂಡು ಎಲ್ಲಾ ಪೋಷಕಾಂಶಗಳನ್ನು ಸೇವಿಸುವುದರಿಂದ ರಕ್ತಹೀನತೆಗೆ ಕಾರಣವಾಗುತ್ತದೆ.
  • ಅಪೌಷ್ಟಿಕತೆಯು ವ್ಯಕ್ತಿಯ ಬೌದ್ಧಿಕ ಬೆಳವಣಿಗೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.
  • ಹುಳುಗಳು ಮಾನವನ ದೇಹದಿಂದ ಅವಶ್ಯಕವಾದ ಪೋಷಕಾಂಶಗಳನ್ನು ಹೀರಿಕೊಳ್ಳುವುದರಿಂದ ರಕ್ತಹೀನತೆ ಮತ್ತು ಬೆಳವಣಿಗೆಯ ಕುಂಠಿತಕ್ಕೆ ಕಾರಣವಾಗುತ್ತದೆ.
  • ಕರುಳಿನಲ್ಲಿರುವ ಜಂತುಹುಳುಗಳು ವಿಟಮಿನ್ ಎ ಕೊರತೆಗೆ ಕಾರಣವಾಗುತ್ತದೆ. ಮಕ್ಕಳ ಶಿಕ್ಷಣ ಮತ್ತು ದೀರ್ಘವಾದ ಉತ್ಪಾದಕತೆಯ ಮೇಲೆ ಜಂತು ಉಳುವಿನಿಂದಾಗುವ ಪರಿಣಾಮ
  • ಅತಿಯಾದ ಸೋಂಕಿನಿಂದ ಮಕ್ಕಳು ಆಗಾಗ ಖಾಯಿಲೆ ಬೀಳುವ ಹಾಗೂ ಶಾಲೆಯಲ್ಲಿ ಗಮನ ಕೇಂದ್ರೀಕರಿಸಲು ಅಸಮರ್ಥರಾಗುತ್ತಾರೆ ಅಂತೆಯೇ ಶಾಲೆ,ಅಂಗನವಾಡಿ ಕೇಂದ್ರಗಳಲ್ಲಿ ಹಾಜರಾತಿಯು ಕಡಿಮೆಯಾಗುತ್ತದೆ.
  • ಜಂತುಹುಳು ಸೋಂಕಿನಿಂದಾಗಿ ಮಕ್ಕಳ ದೈಹಿಕ ಬೆಳವಣಿಗೆ ಹಾಗೂ ಮಾನಸಿಕ ಅರಿವಿನ ಬೆಳವಣಿಗೆ ಮೇಲೆ ನಕರಾತ್ಮಕವಾಗಿ ಪರಿಣಾಮ ಬೀರುತ್ತದೆ, ಅವರ ತಾರುಣ್ಯ ವ್ಯವಸ್ಥೆಯಲ್ಲಿ ಕೆಲಸದ ಸಾಮರ್ಥ್ಯ ಹಾಗೂ ವೇತನಗಳ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರುತ್ತದೆ. ಜಂತುಹುಳು ಸೋಂಕಿನ ನಿವಾರಣ ಉಪಯೋಗಗಳು
  • ಕೈಗಳ ಉಗರುಗಳನ್ನು ಚಿಕ್ಕದಾಗಿ ಮತ್ತು ಸ್ವಚ್ಛವಾಗಿಡುವುದು.
  • ಮನೆಯ ಸುತ್ತ ನೈರ್ಮಲ್ಯ ಹಾಗೂ ಶುದ್ಧ ನೀರಿನ ಸೇವನೆ ಮತ್ತು ಮುಚ್ಚಿಟ್ಟ ಆಹಾರ ಬಳಕೆ.
  • ಹಣ್ಣು ಮತ್ತು ತರಕಾರಿಗಳನ್ನು ಶುದ್ಧ ನೀರಿನಿಂದ ತೊಳೆದು ಬಳಸುವುದು.
  • ಶೌಚಾಲಯದ ಬಳಿಕ ಕೈಗಳನ್ನು ಸಾಬೂನಿನಿಂದ ತೊಳೆಯುವುದು.
  • ಪಾದರಕ್ಷೆ ಧರಿಸಿಯೇ ಹೊರಗಡೆ ಹೋಗುವುದು.

ಹಾಗೂ ಇದೇ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಕಾಂತರಾಜು ಮಾತನಾಡಿ, ಈ ನಿಟ್ಟಿನಲ್ಲಿ ರಾಷ್ಟ್ರೀಯ ಜಂತುಹುಳು ನಿವಾರಣ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಜನಪ್ರತಿನಿಧಿಗಳು ಧಾರ್ಮಿಕ ಮುಖಂಡರು ಸ್ವಯಂ ಸೇವಾ ಸಂಸ್ಥೆಗಳು ಭಾಗವಹಿಸಿ 1-19 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಜಂತು ಹುಳು ಮಾತ್ರೆಗಳನ್ನು ಕೊಡಿಸಿ ಜಂತು ಹುಳುವಿನಿಂದ ಆಗುವ ಅನಾಹುತ ಮತ್ತು ದುಷ್ಟ ಪರಿಣಾಮಗಳನ್ನು ತಡೆಗಟ್ಟಲು ಸಹಕರಿಸುವಂತೆ ತಿಳಿಸಿದರು.

ಇದೇ ಸಂದರ್ಭದಲ್ಲಿ ಮಾಜಿ ಅಧ್ಯಕ್ಷ ದಿನೇಶ್ ಮತ್ತು ಎಲ್ಲಾ ಎಸ್ ಡಿ ಎಂ ಸಿ ಸದಸ್ಯರು, ನಾಗೇಂದ್ರ ಪುಷ್ಪ ಆಶಾ ಕಾರ್ಯಕರ್ತರು, ಶಾಲಾ ಶಿಕ್ಷಕರು, ಮುಖಂಡರು, ಸಾರ್ವಜನಿಕರು ಹಾಜರಿದ್ದರು.

RELATED ARTICLES
- Advertisment -
Google search engine

Most Popular