Friday, April 4, 2025
Google search engine

Homeಕಾಡು-ಮೇಡುತ್ಯಾಗ-ಬಲಿದಾನಗಳ ಸ್ಮರಣೆಗಾಗಿ ರಾಷ್ಟ್ರೀಯ ಅರಣ್ಯ ಹುತಾತ್ಮ ದಿನಾಚರಣೆ

ತ್ಯಾಗ-ಬಲಿದಾನಗಳ ಸ್ಮರಣೆಗಾಗಿ ರಾಷ್ಟ್ರೀಯ ಅರಣ್ಯ ಹುತಾತ್ಮ ದಿನಾಚರಣೆ

ಭಾರತೀಯ ಅರಣ್ಯ ಸೇವೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ದಿವಂಗತ ಕೀರ್ತಿಚಕ್ರ ಪಿ.ಶ್ರೀನಿವಾಸ್ ರವರ ಸ್ಮರಣೆ ಕಾರ್ಯಕ್ರಮ

ಹನೂರು : ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ದೇಶದ ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಗಾಗಿ ಮಾಡಿದ ತ್ಯಾಗ ಮತ್ತು ಬಲಿದಾನಗಳ ಸ್ಮರಣೆಗಾಗಿ ರಾಷ್ಟ್ರಿಯ ಅರಣ್ಯ ಹುತಾತ್ಮ ದಿನಾಚರಣೆಯನ್ನು ದೇಶಾದ್ಯಂತ ಆಚರಿಸಲಾಗುತ್ತದೆ ಎಂದು ಕಾವೇರಿ ಉಪ ವಲಯ ಸಂರಕ್ಷಣಾಧಿಕಾರಿ ಅಂಕಾರಾಜು ಅವರು ತಿಳಿಸಿದರು.

ತಾಲೂಕಿನ ಗೋಪಿನಾಥಂ ಗ್ರಾಮದ ಅರಣ್ಯ ಪ್ರದೇಶದಲ್ಲಿರುವ ಯರಕಂಹಳ್ಳ ಕಾಡಿನಲ್ಲಿ ಹುತಾತ್ಮರ ದಿನಾಚರಣೆ ಹಿನ್ನೆಲೆ ಹಮ್ಮಿಕೊಂಡಿದ್ದ ಭಾರತೀಯ ಅರಣ್ಯ ಸೇವೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ದಿವಂಗತ ಕೀರ್ತಿಚಕ್ರ ಪಿ.ಶ್ರೀನಿವಾಸ್ ರವರ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

1730 ಸೆಪ್ಟೆಂಬರ್ 11 ರಂದು ಜೋದಾಪುರದ ಮಹಾರಾಜ ಅಭಯ ಸಿಂಗ್ ನ ಸೈನಿಕರು ಕೇರ್ಜನೆ ಪ್ರಾಂತ್ಯದಲ್ಲಿ ಬೆಳೆದಿದ್ದ ಮರಗಳನ್ನ ರಾಜನ ಹೊಸ ಮನೆಗೆ ಅವಶ್ಯವಿದ್ದು ಕೇರ್ಜಿಲ ಮರಗಳನ್ನು ಕಡಿಯಲು ವಿರೋಧಿಸಿದ ಬಿಷ್ಣೊಯಿ ಸಮುದಾಯದ 363 ಪುರುಷ, ಮಹಿಳೆ ಮತ್ತು ಮಕ್ಕಳನ್ನು ಕೊಲ್ಲಲಾಯಿತು.

ಅರಣ್ಯ ಸಂಪತ್ತು ಮರಗಳ ಸಂರಕ್ಷಣೆಗಾಗಿ ಬಲಿದಾನ ಹೊಂದಿದ ಬಿಷ್ಣೊಯಿಗಳ ತ್ಯಾಗ ಮತ್ತು ಬಲಿದಾನಗಳನ್ನು ಸ್ಮರಣೆಗಾಗಿ ರಾಷ್ಟ್ರಿಯ ಅರಣ್ಯ ಹುತಾತ್ಮರ ದಿನಾಚರಣೆಯನ್ನ ದೇಶದದ್ಯಂತ ಆಚರಿಸಲಾಗುತ್ತದೆ. ಭಾರತ ಸರ್ಕಾರ ಪರಿಸರ ಮತ್ತು ಅರಣ್ಯ ಸಚಿವಲಯದ ನಿದರ್ಶನದ ಮೇರೆಗೆ ಸೆಪ್ಟೆಂಬರ್ 11 ರಂದು ರಾಷ್ಟ್ರಿಯ ಅರಣ್ಯ ಹುತಾತ್ಮರ ದಿನವೆಂದು ಘೋಷಿಸಲಾಗಿದೆ.

ಭಾರತೀಯ ಅರಣ್ಯ ಸೇವೆಯ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ದಿವಂಗತ ಕೀರ್ತಿಚಕ್ರ ಪಿ.ಶ್ರೀನಿವಾಸ್ ರವರು ಕಾಡುಗಳ್ಳ ವೀರಪ್ಪನ್ ನಿಂದ ವಿಧಿವಶರಾದ ದಿನ ನವೆಂಬರ್ 10 ರಂದು ಕರ್ನಾಟಕ ಅರಣ್ಯ ಇಲಾಖೆ ಹುತಾತ್ಮರ ದಿನದಂದು 1992 ರಿಂದ 2012 ರ ವರೆಗೂ ಆಚರಿಸಲಾಗುತ್ತದೆ ಎಂದು ತಿಳಿಸಿದರು.

ಕಾವೇರಿ ವನ್ಯಧಾಮ ವಲಯ ಅರಣ್ಯ ಅಧಿಕಾರಿ (ಡಿ.ಸಿ.ಎಫ್.) ಸುರೇಂದ್ರ ರವರು ಮಾತನಾಡಿ
ಕಾಡು, ನಾಡು, ಜಲ, ಪರಿಸರ, ವನ್ಯಪ್ರಾಣಿಗಳ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಮುಡುಪಾಗಿಟ್ಟಿದ್ದ ದಿವಂಗತ ಪಿ.ಶ್ರೀನಿವಾಸ್ ರವರ ಸೇವೆ ಅನನ್ಯ, ಅವರ ಧೈರ್ಯ, ಸಾಹಸ ಹಾಗೂ ಗೋಪಿನಾಥ್ಂ ಗ್ರಾಮದ ಜನರ ಮನದಲ್ಲಿ ಇನ್ನು ಹೆಸರುವಾಸಿಯಾಗಿದ್ದು, ಎಲ್ಲ ವರ್ಗದ ಜನರ ಕಷ್ಟ ಸುಖದಲ್ಲಿ ಭಾಗಿಯಾಗಿ, ಅರಣ್ಯ ಅಧಿಕಾರಗಳ ದಕ್ಷ ಅಧಿಕಾರಿಯಾಗಿ ಸೇವೆ ಸಲ್ಲಿಸಿ, ಅವರ ಆಧರ್ಶ ತತ್ವಗಳನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಮಲೆ ಮಹದೇಶ್ವರ ವನ್ಯಧಾಮ ಅಧಿಕಾರಿಗಳಾದ ಸಂತೋಷ್ ಕುಮಾರ್ ಮಾತನಾಡಿ ನಮ್ಮ ಜಿಲ್ಲೆಯಲ್ಲಿ ಆನೆ ಗಣತಿ ಯಲ್ಲಿ ಬಂಡೀಪುರ 1 ನೇ ಸ್ಥಾನ, ನಾಗರಹೊಳೆ 2ನೇ ಸ್ಥಾನ, ಮಹದೇಶ್ವರ ಬೆಟ್ಟ 3ನೇ ಸ್ಥಾನ, ಬಿ.ಆರ್.ಟಿ 4 ನೇ ಸ್ಥಾನ ಹಾಗೂ ಕಾವೇರಿ 5 ನೇ ಸ್ಥಾನದಲ್ಲಿದೆ, ನಮ್ಮಲ್ಲಿ ಕಾಡು ವನ್ಯ ಪ್ರಾಣಿಗಳು ಅತೀ ಹೆಚ್ಚಾಗಿದ್ದು, ಸಾರ್ವಜನಿಕರು ನಮ್ಮ ಅಧಿಕಾರಿಗಳಿಗೆ ಸ್ಪಂದಿಸಬೇಕು,

ಗಡಿ ಕಾಯುವ ಯೋಧರು, ಪೊಲೀಸ್ ಇಲಾಖೆ ಮತ್ತು ನಮ್ಮ ಅರಣ್ಯ ಸಿಬ್ಬಂದಿಗಳು ವನ್ಯ ಜೀವಿಗಳ ಭಯದಿಂದ ಕರ್ತವ್ಯ ನಿರ್ವಹಿಸುಬೇಕಾಗಿದೆ, ನಾವು ರಾತ್ರಿ ಹಗಲು ಎನ್ನದೆ ನಮ್ಮ ಜೀವನನ್ನೇ ಮೂಡಿಪಾಗಿಟ್ಟು ಕೆಲಸ ನಿರ್ವಹಿಸುತಿದ್ದೇವೆ ಎಂದು ತಿಳಿಸಿದರು.

ತಮಿಳುನಾಡು ಅರಣ್ಯ ಇಲಾಖೆಯ ಅಧಿಕಾರಿ ಅರುಣ್ ಕುಮಾರ ಮಾತನಾಡಿ ಕರ್ನಾಟಕ ಅರಣ್ಯ ಇಲಾಖೆ ಹಾಗೂ ತಮಿಳು ನಾಡು ಅರಣ್ಯ ಇಲಾಖೆ ಅಧಿಕಾರಗಳು, ಸಿಬ್ಬಂದಿಗಳು ನಾವು ಎರಡು ರಾಜ್ಯದ ಅಣ್ಣ ತಮ್ಮಂದಿರು ಭಾವೈಕ್ಯದಿಂದ ಉತ್ತಮವಾಗಿ ನಾವು ಕರ್ತವ್ಯ ನಿರ್ವಹಿಸುತ್ತಿದ್ದೇವೆ, ಪಿ ಶ್ರೀನಿವಾಸರವರು ವೀರಪ್ಪನ್ ರವರಿಂದ ಮೃತಪಟ್ಟಿರುವುದು ನಮಗೆ ನೋವಿನ ಸಂಗತಿಯಾಗಿದೆ ಎಂದು ಸ್ಮರಿಸಿದರು.

ಹುತಾತ್ಮ ದಿನಾಚರಣೆಯ ಅಂಗವಾಗಿ ವಿವಿಧ ಗಣ್ಯರು ಅರಣ್ಯ ಇಲಾಖೆಯ ಅಧಿಕಾರಿಗಳು ಹುತಾತ್ಮರಾದ ಪಿ.ಶ್ರೀನಿವಾಸ್ ರವರ ಸ್ಮಾರಕಕ್ಕೆ ಗೌರವ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ನಿವೃತ್ತ ಉಪ ವಲಯ ಅರಣ್ಯಧಿಕಾರಿ ಉದಯ್ ಕುಮಾರ್ ಮತ್ತು ವಾಸುದೇವ್ ಮೂರ್ತಿ, ಮಹದೇಶ್ವರ ಬೆಟ್ಟದ ವೃತ್ತ ನೀರಿಕ್ಷಕ ನಂಜುಂಡಸ್ವಾಮಿ, ಗೋಪಿನಾಥ್ಂ ಗ್ರಾ.ಪಂ ಅಧ್ಯಕ್ಷ ಸೇಲ್ವಿ, ಉಪಾಧ್ಯಕ್ಷ ಮೈನಾ, ಪಿಡಿಒ ರಾಜ್ ಕುಮಾರ್, ವಿವಿಧ ವಲಯದ ಅರಣ್ಯಧಿಕಾರಿಗಳು, ಅರಣ್ಯ ಇಲಾಖೆಯ ಸಿಬ್ಬಂದಿಗಳು, ಶಾಲಾ ಶಿಕ್ಷಕರು, ಶಾಲಾ ಮಕ್ಕಳು, ಗ್ರಾಮಸ್ಥರು ಹಾಜರಿದ್ದರು.

RELATED ARTICLES
- Advertisment -
Google search engine

Most Popular