Friday, April 11, 2025
Google search engine

Homeರಾಜಕೀಯ‘ನ್ಯಾಷನಲ್ ಲೀಡರ್’: ಯತೀಂದ್ರ ಸಿದ್ದರಾಮಯ್ಯ ಟೀಕೆಗೆ ಸಂಸದ ಪ್ರತಾಪ್ ಸಿಂಹ ತಿರುಗೇಟು

‘ನ್ಯಾಷನಲ್ ಲೀಡರ್’: ಯತೀಂದ್ರ ಸಿದ್ದರಾಮಯ್ಯ ಟೀಕೆಗೆ ಸಂಸದ ಪ್ರತಾಪ್ ಸಿಂಹ ತಿರುಗೇಟು

ಮೈಸೂರು: ಪ್ರತಾಪ್ ಸಿಂಹ ನ್ಯಾಷನಲ್ ಲೀಡರಾ? ಎಂಬ ಮಾಜಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಟೀಕೆಗೆ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ.
ಈ ಕುರಿತು ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಖಂಡಿತ ನಾನು ನ್ಯಾಷನಲ್ ಲೀಡರ್ ಅಲ್ಲ. ಸಾಮಾನ್ಯ ಕುಟುಂಬದ ಹಿನ್ನೆಲೆಯಲ್ಲಿ ಬಂದು ಬರವಣಿಗೆ ಮೂಲಕ ಹೆಸರು ಸಂಪಾದಿಸಿ ಈ ಸ್ಥಾನಕ್ಕೆ ಬಂದಿದ್ದೇನೆ. ಅಪ್ಪ ಸಿಎಂ ಆಗಿದ್ದರೆ ತನ್ನ ಖಾಸಗಿ ಲ್ಯಾಬ್ ಗೆ ಗುತ್ತಿಗೆ ಪಡೆದು ಕೊಳ್ಳುವಂತವರು ನ್ಯಾಷನಲ್ ಲೀಡರ್. ಅಪ್ಪನ ನೆಲೆ ಬಿಡಿಸಿ ಬದಾಮಿ ಕ್ಷೇತ್ರಕ್ಕೆ ಓಡಿಸುವವರು ನ್ಯಾಷನಲ್ ಲೀಡರ್. ತಾನು ಹೇಳಿದ ವರ್ಗಾವಣೆ ಲಿಸ್ಟ್ ಗೆ ಸಹಿ ಮಾಡಿ ಅಂತಾ ಸಿಎಂ ಮೇಲೆ ಒತ್ತಡ ತರುವವರು ನ್ಯಾಷನಲ್ ಲೀಡರ್. ಮೈಸೂರು ಭಾಗದ ನಿಜವಾದ ನ್ಯಾಷನಲ್ ಲೀಡರ್ ಯತೀಂದ್ರ ಸಿದ್ದರಾಮಯ್ಯ ಎಂದು ಟಾಂಗ್ ನೀಡಿದರು.

ರಾಮನ ಪೇಟೆಂಟ್ ಅನ್ನು ಬಿಜೆಪಿಗೆ ಕೊಟ್ಟಿದ್ದೆ ಕಾಂಗ್ರೆಸ್

ರಾಮನ ಪೇಟೆಂಟ್ ಅನ್ನು ಬಿಜೆಪಿಗೆ ಕೊಟ್ಟಿದ್ದೆ ಕಾಂಗ್ರೆಸ್. ರಾಮನನ್ನು ಕಾಂಗ್ರೆಸಿಗರೇ ಭಕ್ತಿ ಭಾವದಿಂದ ಪೂಜಿಸಿದ್ದರೆ ಬಿಜೆಪಿಗೆ ಯಾಕೆ ಈ ಪೇಟೆಂಟ್ ಸಿಗುತ್ತಿತ್ತು ? ರಾಮನ ಅಸ್ತಿತ್ವವನ್ನೇ ನ್ಯಾಯಾಲಯದಲ್ಲಿ ಪ್ರಶ್ನಿಸಿದ ಕಾಂಗ್ರೆಸ್ ಗೆ ರಾಮ ಏನೂ ಬಿಜೆಪಿ ಪೇಟೆಂಟ್ ಹಾ ಎಂದು ಕೇಳುವ ನೈತಿಕತೆ ಇಲ್ಲ. ಕಾಂಗ್ರೆಸ್‌ ಗೆ ರಾಮರಾಜ್ಯದ ಮೇಲೆ ನಂಬಿಕೆ ಇದ್ಯಾ? ರಾವಣ ರಾಜ್ಯದ ಮೇಲೆ ನಂಬಿಕೆ ಇದ್ಯಾ ಅವರನ್ನೇ ಕೇಳಿ ? ಕಾಂಗ್ರೆಸ್ ಗೆ ಗಾಂಧೀಜಿಯ ರಾಮ ರಾಜ್ಯದ ಮೇಲೆ ನಂಬಿಕೆ ಇಲ್ಲ. ಎಂದು ಸಂಸದ ಪ್ರತಾಪ್ ಸಿಂಹ ಲೇವಡಿ ಮಾಡಿದರು.
ಅಯೋಧ್ಯೆ ಮಂತ್ರಾಕ್ಷತೆಗೆ ಅನ್ನಭಾಗ್ಯ ಅಕ್ಕಿ ಬಳಸಿದ ಆರೋಪ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಂಸದ ಪ್ರತಾಪ್ ಸಿಂಹ, ಮಂತ್ರಾಕ್ಷತೆ ಸ್ವೀಕರಿಸಲು ಆಗದ ಕೈಗಳಿಗೆ ಮಂತ್ರಾಕ್ಷತೆಗೆ ಅಕ್ಕಿ ಕೊಡಲು ಮನಸ್ಸು ಬರುತ್ತಾ ? ಅಕ್ಷತೆ, ಗೋತ್ರದ ಮೇಲೆ ಕಾಂಗ್ರೆಸ್ ಗೆ ಸಿದ್ದರಾಮಯ್ಯಗೆ ನಂಬಿಕೆ ಇಲ್ಲ. ಅಯೋಧ್ಯೆಗೆ ಹೋಗುವುದು ಬಿಡುವುದು ಸಿದ್ದರಾಮಯ್ಯ ಅವರಿಗೆ ಬಿಟ್ಟ ವಿಚಾರ ಎಂದು ಸಂಸದ ಪ್ರತಾಪ ಸಿಂಹ ಹೇಳಿದರು.

RELATED ARTICLES
- Advertisment -
Google search engine

Most Popular