Saturday, April 19, 2025
Google search engine

Homeಸ್ಥಳೀಯಮೈಸೂರಿನಲ್ಲಿ ರಾಷ್ಟ್ರಮಟ್ಟದ ಏಕಲವ್ಯ ವಸತಿ ಶಾಲೆಗಳ ಕ್ರೀಡಾಕೂಟ

ಮೈಸೂರಿನಲ್ಲಿ ರಾಷ್ಟ್ರಮಟ್ಟದ ಏಕಲವ್ಯ ವಸತಿ ಶಾಲೆಗಳ ಕ್ರೀಡಾಕೂಟ

ಮೈಸೂರು: ಮೈಸೂರಿನಲ್ಲಿ ರಾಷ್ಟ್ರಮಟ್ಟದ ೪ನೇ ಏಕಲವ್ಯ ಮಾದರಿ ವಸತಿ ಶಾಲೆಗಳ ಕ್ರೀಡಾಕೂಟವನ್ನು ಜನವರಿ ೮ ರಿಂದ ೧೨ರವರೆಗೆ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆಸಲಾಗುವುದು ಎಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ನಿರ್ದೇಶಕ ಬಿ. ಕಲ್ಲೇಶ್ ತಿಳಿಸಿದರು.

ಪಡುವಾರಳ್ಳಿಯಲ್ಲಿರುವ ಡಾ. ಬಾಬು ಜಗಜೀವನ್‌ರಾಂ ಭವನದಲ್ಲಿ ತಾಲ್ಲೂಕು ಅಧಿಕಾರಿಗಳು ಕ್ರೈಸ್ ಪ್ರಾಂಶುಪಾಲರು ಹಾಗೂ ವಾರ್ಡನ್‌ಗಳು ಭಾಗವಹಿಸಿದ್ದ ಕ್ರೀಡಾಕೂಟದ ಪೂರ್ವಬಾವಿ ಸಭೆಯಲ್ಲಿ ಮಾತನಾಡಿದ ಅವರು ದೇಶದ ೨೮ ರಾಜ್ಯಗಳಿಂದ ಸುಮಾರು ೬೫೦೦ ಬುಡಕಟ್ಟು ವಿದ್ಯಾರ್ಥಿಗಳು ಕ್ರೀಡಾಕೂಟಕ್ಕೆ ಆಗಮಿಸಲಿದ್ದು ೯ ವಿಭಾಗಗಳಲ್ಲಿ ಕ್ರೀಡೆಗಳು ನಡೆಯಲಿದ್ದು, ಚಾಮುಂಡಿ ವಿಹಾರ ಕ್ರೀಡಾಂಗಣ ಹಾಗೂ ಮೈಸೂರು ವಿಶ್ವ ವಿದ್ಯಾನಿಲಯದ ಓವೆಲ್ ಗ್ರೌಂಡ್‌ನಲ್ಲಿ ಏಕಕಾಲದಲ್ಲಿ ನಡೆಯಲಿವೆ. ದೇಶದ ಎಲ್ಲಾ ರಾಜ್ಯಗಳಿಂದ ಬರುವ ಕ್ರೀಡಾ ಪಟುಗಳಿಗೆ ವಸತಿ ವ್ಯವಸ್ಥೆ, ಊಟದ ವ್ಯವಸ್ಥೆ, ಮಾಡಲಾಗುವುದು. ಕ್ರೀಡಾಕೂಟದ ನಂತರ ಸಂಜೆ ಸಾಂಸ್ರ್ಕತಿಕ ಕಾರ್ಯಕ್ರಮಗಳು ನಡೆಯಲಿವೆ.

ದಿನಾಂಕ ೦೮-೦೧-೨೦೨೪ರಂದು ನಡೆಯುವ ಸಮಾರಂಭವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉದ್ಘಾಟಿಲಿದ್ದು, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಕೇಂದ್ರ ಸಚಿವರು, ರಾಜ್ಯ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಭಾಗವಹಿಸಲಿದ್ದಾರೆ ಎಂದರು ನಂತರ ಚಾಮುಂಡಿ ವಿಹಾರ ಕ್ರೀಡಾಂಗಣಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.

ಈ ಸಂದರ್ಭದಲ್ಲಿ NEST ನ ಉಪಆಯುಕ್ತರಾದ ಇಂದಿರಾ ಮಧುಗಲ್, ಕಛೇರಿ ಅಧೀಕ್ಷಕರಾದ ಪಿಯೂಷ್‌ನಾಥ್, ಮೈಸೂರು ಜಿಲ್ಲೆಯ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಯೋಜನಾ ಸಮನ್ವಯ ಅಧಿಕಾರಿ ಎನ್.ಮುನಿರಾಜು, ಯುವಜನ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಭಾಸ್ಕರ್ ನಾಯಕ್, ಕನ್ನಡ ಸಂಸ್ರ್ಕತಿ ಇಲಾಖೆಯ ಉಪನಿರ್ದೇಶಕ ಸುದರ್ಶನ್, ಕ್ರೈಸ್ ಸಂಯೋಜಕ ಎಸ್.ಕೆ ಮಹದೇವ್, ತಾಲ್ಲೂಕು ಕಲ್ಯಾಣ ಅಧಿಕಾರಿಗಳಾದ ಅರುಣ್ ಪ್ರಭು, ನಾರಾಯಣಸ್ವಾಮಿ, ಕೋಮಲ, ಕ್ರೀಡಾ ತರಬೇತುದಾರರಾದ ರಾಮಸ್ವಾಮಿ, ವಿಶ್ವ, ರವೀಂದ್ರ, ಸುಂದರೇಶ್, ಗಿರೀಶ್, ಲೋಕೇಶ್, ಬಾಲು ಹಾಜರಿದ್ದರು.

RELATED ARTICLES
- Advertisment -
Google search engine

Most Popular