ಮೈಸೂರು: ವಿಶ್ವ ಮಾನವ ಕುವೆಂಪು ಲಯನ್ಸ್ ಸಂಸ್ಥೆಯ ವತಿಯಿಂದ ವಿದ್ಯಾವರ್ಧಕ ಸಂಸ್ಥೆಯ ಜಂಟಿ ಆಶ್ರಯದಲ್ಲಿ ರಾಷ್ಟ್ರ ಕವಿ ಕುವೆಂಪು ಜನ್ಮದಿನೊತ್ಸವ ಸಂಭ್ರಮಾಚರಣೆಯನ್ನು ಅತ್ಯಂತ ಯಶಸ್ವಿಯಾಗಿ ಆಚರಿಸಲಾಯಿತು.
ಈ ಕಾರ್ಯಕ್ರಮವು ಜ್ಯೋತಿ ಬೆಳಗುವುದರೊಂದಿಗೆ ಆರಂಭವಾಗಿ, ಪ್ರಾಸ್ತಾವಿಕ ಭಾಷಣವನ್ನು ಪ್ರಾಂಶುಪಾಲರಾದ ಶಿವಲಿಂಗೇಗೌಡರು ನಡೆಸಿದರು. ಬಳಿಕ ಶ್ರೀಶೈಲ ರಾಮ್ಮನನವರ್ ಮತ್ತು ಡಾ. ಕಾಳಚನ್ನೇ ಗೌಡರು ವೇಧಿಕೆಯನ್ನು ಉದ್ದೇಶಿಸಿ ಮಾತನಾಡಿದರು.

ವಿಶ್ವ ಮಾನವ ಕುವೆಂಪು ಲಯನ್ಸ್ ಸಂಸ್ಥೆ (ಮೈಸೂರು) ವತಿಯಿಂದ ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಡಾ. ಜಿ. ಪಾಂಡುರಂಗ ಮೂರ್ತಿಯವರು, ರಾಷ್ಟ್ರ ಕವಿ ಕುವೆಂಪು ರವರ ಕನ್ನಡ ಸಾಹಿತ್ಯ ದಲ್ಲಿ ವೈಜ್ಞಾನಿಕ ದೃಷ್ಟಿಕೋನ ಮತ್ತು ವಿಶ್ವಮಾನವ ಸಂದೇಶದ ಕುರಿತಾಗಿ ಸಮಗ್ರ ಪ್ರವಚನವನ್ನು ನಡೆಸಿಕೊಟ್ಟರು.
ತಮ್ಮ ವಿಶಿಷ್ಟ ಪ್ರಾಸ ಶೈಲಿಯಲ್ಲಿ ಕುವೆಂಪುರವರ ಬಾಲ್ಯ, ಶಿಕ್ಷಣ, ವೃತ್ತಿ ಜೀವನ, ಸಾಹಿತ್ಯ ಕೃಷಿ, ಮಹಾಕಾವ್ಯ ರಚನೆ, ನಾಟಕ ಸೇರಿದಂತೆ ಅವರ ಒಟ್ಟು ಕೊಡುಗೆಗಳು ಮತ್ತು ಪ್ರಶಸ್ತಿಗಳೂ ಸೇರಿದಂತೆ ಕುವೆಂಪುರವರ ಸಾಹಿತ್ಯದ ವೈಜ್ಞಾನಿಕ ದೃಷ್ಟಿಕೋನವನ್ನು ಹಾಗು ವಿಶ್ವ ಮಾನವ ಸಂದೇಶದೊಂದಿಗೆ ಮಂಡಿಸಿ ವಿದ್ಯಾರ್ಥಿಗಳನ್ನು ರಂಜಿಸಿದರು. ಅಂತಿಮವಾಗಿ, ನಾಡಗೀತೆಯೊಂದಿಗೆ ತಮ್ಮ ಪ್ರವಚನವನ್ನು ಪರಿಪೂರ್ಣ ಗೊಳಿಸಿದರು.

ಈ ಸುಸಂದರ್ಭದಲ್ಲಿ ರಾಷ್ಟ್ರ ಕವಿ ಕುವೆಂಪುರವರ ಕನ್ನಡ ಸಾಹಿತ್ಯ ದಲ್ಲಿ ವೈಜ್ಞಾನಿಕ ದೃಷ್ಟಿಕೋನ ಮತ್ತು ವಿಶ್ವಮಾನವ ಸಂದೇಶ ದ ಕುರಿತಾಗಿ ವಿಶಿಷ್ಟ ಪ್ರವಚನವನ್ನು ನೀಡಿದ ಲಯನ್ಸ್ ಸಂಸ್ಥೆಯ ನಿರ್ದೇಶಕರಾದ ಲಯನ್. ಡಾ. ಜಿ. ಪಾಂಡುರಂಗ ಮೂರ್ತಿ ಯವರನ್ನು ಗಣ್ಯರು ಸನ್ಮಾನಿಸಿದರು.
ವಿಶ್ವ ಮಾನವ ಕುವೆಂಪು ಲಯನ್ಸ್ ಸಂಸ್ಥೆಯ ಕಾರ್ಯದರ್ಶಿ ದಯಾನಂದ ಸಾಗರ್, ಖಜಾಂಚಿ ಶೇಷಾಚಲ ಮತ್ತು ನಿರ್ದೇಶಕರಾದ ಡಾ. ಜಿ. ಪಾಂಡುರಂಗ ಮೂರ್ತಿ, ವಿದ್ಯಾವರ್ಧಕ ಸಂಸ್ಥೆಯ ಶ್ರೀ ಗುಂಡಪ್ಪ, ವಿಶ್ವನಾಥ್, ಕೆ. ಪುಟ್ಟಸ್ವಾಮಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ಶಿವಲಿಂಗೇ ಗೌಡರು, ಸಂಸ್ಥೆಯ ಖಜಾಂಚಿ ಶ್ರೀ ಶೈಲ ರಾಮಣ್ಣವರ, ಹಾಗು ಮಹಾರಾಜ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ.ಕಾಳಚನ್ನೇ ಗೌಡರು ಮತ್ತು ಉಪನ್ಯಾಸಕ ವರ್ಗ ಮತ್ತು ಪದವಿ ವಿದ್ಯಾರ್ಥಿಗಳು ಸದರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.