ಮೈಸೂರು: ನಮ್ಮೂರು ಮೈಸೂರು ಸಮಾಜ ಸೇವಾ ಟ್ರಸ್ಟ್ ಸ್ನೇಹ ಬಳಗದ ವತಿಯಿಂದ ರಾಷ್ಟ್ರಕವಿ ಕುವೆಂಪು ರವರ ಜಯಂತಿಯನ್ನು ಕುವೆಂಪುರವರ ಕರ್ಮ ಭೂಮಿಯಾದ ಮೈಸೂರಿನ ಉದಯ ರವಿ ನಿಲಯದಲ್ಲಿ ಅತ್ಯಂತ ಸರಳವಾಗಿ ಅಚ್ಚುಕಟ್ಟಾಗಿ ಆಚರಿಸಲಾಯಿತು.
ಇದೆ ವೇಳೆ ಶಾಸಕರಾದ ಕೆ ಹರೀಶ್ ಗೌಡರು ಪುಷ್ಪನಮನ ಸಲ್ಲಿಸಿ ಕುವೆಂಪುರವರು ವಿಶ್ವಕವಿ ಹಾಗೂ ರಾಷ್ಟ್ರಕವಿ ವಿಶ್ವ ಮಾನವ ಎಂಬ ಸಂದೇಶವನ್ನು ಸಾರಿದ ಮಹಾನ್ ಚೇತನ ಹಾಗೂ ಯುವ ಪೀಳಿಗೆಗೆ ಹೊಸ ಹೊಸ ಪದಗಳನ್ನು ನಾಡಿನಾದ್ಯಂತ ಸಾರಿದ ಮಹಾನ್ ಚೇತನ ಎಂದು ಬಣ್ಣಿಸಿದರು ಹಾಗೂ ನಾನು ನಮ್ಮ ತಂದೆಯವರ ಜೊತೆ ನನಗೆ 7 ರಿಂದ 8 ವರ್ಷ ಇರಬೇಕು ಮಗುವಾಗಿದ್ದಾಗ ಬಂದು ಈ ಹಸಿರು ಜಾಗದಲ್ಲಿ ಆಟ ಆಡಿದ ದಿನಗಳನ್ನು ನೆನಪಿಸಿಕೊಂಡರು.
ವಿಧಾನ ಪರಿಷತ್ ಸದಸ್ಯರಾದ ತಿಮ್ಮಯ್ಯನವರು ಮಾತನಾಡಿ ಅಂದು ಅವರ ಮನೆಗೆ ಮುಖ್ಯಮಂತ್ರಿಗಳು ಬರುವ ವೇಳೆ ಅಕ್ಕ ಪಕ್ಕದ ರಸ್ತೆಗಳನ್ನು ಸ್ವಚ್ಛಗೊಳಿಸುವಾಗ ಸದಾ ಕುವೆಂಪುರವರು ಹೊರಗೆ ಬಂದು ಇದು ನೀವುಗಳು ಮುಖ್ಯಮಂತ್ರಿ ಬಂದಾಗ ಮಾತ್ರ ಸ್ವಚ್ಛಗೊಳಿಸುವುದ ಎಂದು ನಗೆ ಚಟಾಕಿ ಆರಿಸಿದ್ದನ್ನು ನೆನಪಿಸಿಕೊಂಡರು.
ಈ ವೇಳೆ ಟ್ರಸ್ಟ್ ನ ಅಧ್ಯಕ್ಷರಾದ ಎ ರವಿ, ಉಪಾಧ್ಯಕ್ಷರಾದ ಗುರುರಾಜ್ , ಮೈಸೂರು ಕೋ ಆಪರೇಟಿವ್ಬ ನಿರ್ದೇಶಕ ಯೋಗೇಶ್, ರವಿ, ಸಿದ್ದಪ್ಪ, ಕೃಪಾ ಚೆಲುವರಾಯಸ್ವಾಮಿ, ಮಾಯಾ ಕೇಬಲ್ ಮಂಜು ,ಮಂಜು ಮಾಜಿನಗರ ಪಾಲಿಕೆ ಸದಸ್ಯರಾದ ಭರತೇಶ್ ಇತರರು ಇದ್ದರು.