ಮೈಸೂರು : ನಗರದ ಅಮೃತ ವಿಶ್ವವಿದ್ಯಾಪೀಠಂ ಕ್ಯಾಂಪಸ್‌ನ ದೃಶ್ಯ ಸಂವಹನ ವಿಭಾಗದ ವತಿಯಿಂದ ಫೆಬ್ರವರಿ ೧೬, ೧೭ ರಂದು ಸಿನಿರಮಾ-೨೦೨೪ ೬ನೇ ರಾಷ್ಟ್ರೀಯ ಕಿರು ಚಿತ್ರೋತ್ಸವವನ್ನು ಆಯೋಜಿಸಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ.ರವೀಂದ್ರನಾಥ್ ತಿಳಿಸಿದರು.
ನಗರದ ಬೋಗಾದಿ ಎರಡನೇ ಹಂತದಲ್ಲಿರುವ ಅಮೃತ ವಿಶ್ವವಿದ್ಯಾಪೀಠಂನ ಆವರಣದಲ್ಲಿ ಏರ್ಪಡಿಸಿರುವ ರಾಷ್ಟ್ರೀಯ ಕಿರು ಚಿತ್ರೋತ್ಸವವನ್ನು ಫೆ.೧೬ ರಂದು ಬೆಳಗ್ಗೆ ೧೦.೦೦ ಗಂಟೆಗೆ
ರಾಷ್ಟ್ರಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕ ಪಿ.ಶೇಷಾದ್ರಿ ಉದ್ಘಾಟಿಸಲಿದ್ದು, ನಟಿ ವಿನಯಾ ಪ್ರಸಾದ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ದೃಶ್ಯ ಸಂವಹನ ವಿಭಾಗದ ಮುಖ್ಯಸ್ಥರಾದ ಡಾ.ಮೌಲ್ಯ ಬಲಾಡಿ ಮಾತನಾಡಿ, ಕಿರು ಚಿತ್ರೋತ್ಸವದ ಸಮಾರೋಪ ಸಮಾರಂಭವು ಫೆಬ್ರವರಿ ೧೭ರಂದು ಸಂಜೆ ೫.೩೦ ಕ್ಕೆ ನಡೆಯಲಿದ್ದು, ಕನ್ನಡ ಚಿತ್ರರಂಗದ ಹೆಸರಾಂತ ನಟ ನೆನಪಿರಲಿ ಪ್ರೇಮ್ ಹಾಗೂ ಪ್ರಸಿದ್ಧ ಸಂಗೀತ ನಿರ್ದೇಶಕ ಗುರುಕಿರಣ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಮೈಸೂರಿನ ಡಿಆರ್‌ಸಿ ಮಲ್ಟಿಪ್ಲೆಕ್ಸ್ ಸಿನೆಮಾಸ್‌ನ ಮಾಲೀಕರಾದ ವೈಶಾಲಿ ಹನುಮಂತ್ ಹಾಗೂ ಹನುಮಂತ್ ಗೌರವ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.