ಚಾಮರಾಜನಗರ: ಯೂತ್ ಫಾರ್ ಸೇವಾ ಸಂಸ್ಥೆ ದೇಶದ ಬಹುದೊಡ್ಡ ಯುವ ಸಂಘಟನೆಯಾಗಿದ್ದು ,ರಾಷ್ಟ್ರೀಯ ಮೌಲ್ಯಗಳಾದ ಸೇವೆ ಮತ್ತು ತ್ಯಾಗ, ಯುವಶಕ್ತಿಯ ಸದ್ಬಳಕೆ ,ಭವಿಷ್ಯದ ಮಕ್ಕಳ ಉನ್ನತಿಗಾಗಿ ಶ್ರಮಿಸುತ್ತಿದೆ ಎಂದು ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತರು , ಯೂಥ್ ಫಾರ್ ಸೇವಾ ಸಂಸ್ಥೆಯ ಸಲಹಾ ಸಮಿತಿಯ ಸದಸ್ಯ ಸುರೇಶ್ ಎನ್ ಋಗ್ವೇದಿ ತಿಳಿಸಿದರು.
ಅವರು ಯೂತ್ ಫಾರ್ ಸೇವಾ ಸಂಸ್ಥೆ ಡಾ. ಬಿ.ಆರ್ ಅಂಬೇಡ್ಕರ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ 24 .25 ನೇ ಸಾಲಿನ ಚಿನ್ನರ ಮೇಳ ,ಜೈ ಜವಾನ್ ಜೈ ಕಿಸಾನ್ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ವಿಶ್ವದಲ್ಲಿ ಹೆಚ್ಚು ಯುವಶಕ್ತಿಯನ್ನು ಹೊಂದಿರುವ ಭಾರತಕ್ಕೆ ತನ್ನದೇ ಆದ ಸಂಸ್ಕೃತಿ ಪರಂಪರೆಯ ಮೌಲ್ಯವನ್ನು ಯುವಕರಲ್ಲಿ ಮತ್ತು ಮಕ್ಕಳಲ್ಲಿ ಪುನರುಸ್ತಾನಗೊಳಿಸಿ ಸೇವೆ ಮತ್ತು ತ್ಯಾಗದ ರಾಷ್ಟ್ರೀಯ ಮೌಲ್ಯಗಳನ್ನು ಬೆಳೆಸುವ ಮೂಲಕ ತನ್ನಲ್ಲಿರುವ ಪ್ರತಿಭೆಯನ್ನು ರಾಷ್ಟ್ರಕ್ಕೆ ಅರ್ಪಿಸುವ ಮನೋಗುಣವನ್ನು ಬೆಳೆಸುವ ಚಿಗುರು ಕಾರ್ಯಕ್ರಮ ವಿಶೇಷವಾಗಿದೆ. ಚಾಮರಾಜನಗರದ 30 ಸರ್ಕಾರಿ ಶಾಲೆಗಳ ಸಾವಿರದ ಮುನ್ನೂರಕ್ಕೂ ಹೆಚ್ಚು ಪ್ರತಿಭೆಗಳಿಗೆ ಅವಕಾಶ ನೀಡಿ 21 ಸ್ಪರ್ಧೆಗಳ ಮೂಲಕ ಪ್ರತಿಭೆಗೆ ಅವಕಾಶ ನೀಡಿದೆ. ಭಾರತದ ಯುವಶಕ್ತಿ ಸನ್ಮಾರ್ಗದಲ್ಲಿ ನಡೆಯಲು ಯೂಥ್ ಫಾರ್ ಸೇವಾ ಸಂಸ್ಥೆಗೆ ಸೇರ್ಪಡೆಯಾಗಿ ದೇಶದ ಉನ್ನತಿ ಯನ್ನು ಸಾಧಿಸಿ ಎಂದು ತಿಳಿಸಿ ಯುವಕರಿಗೆ ಕಲೆ, ಸಾಹಿತ್ಯ , ಸಂಸ್ಕೃತಿಯಮೌಲ್ಯಗಳೇ ಯುವಶಕ್ತಿಯ ಉಸಿರಾಗಲಿ . ವೈಯಕ್ತಿಕ ಸಾಧನೆಯ ಜೊತೆಗೆ ರಾಷ್ಟ್ರೀಯ ಸಾಧನೆ ಹೆಚ್ಚಾಗಲಿ. ಮಕ್ಕಳು ದೇವರ ಸಮಾನ ಗಳಲ್ಲಿ ಸದ್ಭಾವವನ್ನು ದೇಶ ಹಾಗು ಸಮಾಜದ ಬಗ್ಗೆ ಪ್ರೀತಿ ,ವಿಶ್ವಾಸ, ಆತ್ಮಸ್ಥೈರ್ಯವನ್ನು ಬೆಳೆಸಲು ಸ್ಪರ್ಧೆಗಳು ಹೆಚ್ಚು ನಡೆಯಬೇಕು ಎಂದು ತಿಳಿಸಿದರು.

ಉದ್ಘಾಟನೆಯನ್ನು ಬಸವರಾಜೇಂದ್ರ ಆಸ್ಪತ್ರೆಯ ತಜ್ಞರಾದ ಡಾ ಶ್ವೇತಾ ಶಶಿಧರ್ ಸರ್ಕಾರಿ ಶಾಲೆಯ ಮಕ್ಕಳಿಗೆ ಅವಕಾಶ ನೀಡಿ ಅವರ ಪ್ರತಿಭೆಗಳ ಅನಾವರಣಕ್ಕೆ ಚಿಗುರು ಹಮ್ಮಿಕೊಂಡಿರುವುದು ಉತ್ತಮ ಕಾರ್ಯ. ಮಕ್ಕಳ ಪ್ರತಿಭೆ ರಾಷ್ಟ್ರದ ಶಕ್ತಿಯಾಗಿದೆ . ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಉಳಿದ ಸಮಯದಲ್ಲಿ ತಮ್ಮಲ್ಲಿರುವ ಕೌಶಲ್ಯಗಳನ್ನು ಅನಾವರಣಗೊಳಿಸಿಕೊಳ್ಳಬೇಕು ಎಂದು ತಿಳಿಸಿದರು.
ಮಜಾ ಭಾರತ ಖ್ಯಾತಿಯ ಕಲಾವಿದರಾದ ಜಗದೀಶ್ ಕುಮಾರ್ ಜೆಕೆ ಮಕ್ಕಳೊಂದಿಗೆ ಸಂವಾದ ನಡೆಸಿ ಪ್ರತಿ ಮಗುವಿನಲ್ಲೂ ಉತ್ತಮ ಪ್ರತಿಭೆಗಳಿದೆ. ಕಲೆ, ಸಾಹಿತ್ಯ ಜನಪದ ,ಸಾಂಸ್ಕೃತಿಕ ಪ್ರಜ್ಞೆಯನ್ನು ಕಂಡು ಪ್ರೋತ್ಸಾಹಿಸುವ ಶಕ್ತಿ ಶಿಕ್ಷಕರಲಿದ್ದು ,ಉತ್ತಮ ವೇದಿಕೆಗಳು ಪ್ರತಿಭೆಯ ಅನಾವರಣಕ್ಕೆ ಅವಕಾಶ ನೀಡುತ್ತದೆ . ಗಮನವಿಟ್ಟು ಪ್ರತಿಸ್ಪರ್ಧೆಯಲ್ಲೂ ಭಾಗವಹಿಸಿ . ಸೋಲು ಗೆಲುವಿನ ಬಗ್ಗೆ ತಲೆಕೆಡಿಸಿಕೊಳ್ಳದೆ ಪ್ರತಿಬಾರಿಯೂ ಗೆಲುವು ನನ್ನದೇ ಎಂಬ ಭಾವದಿಂದ ಸ್ಪರ್ಧೆಯಲ್ಲಿ ಭಾಗವಹಿಸಿ ಎಂದು ತಿಳಿಸಿದರು.
ಸಮಾಜ ಸೇವಕರಾದ ವೆಂಕಟರಮಣ ಸ್ವಾಮಿ ಚಾಮರಾಜನಗರ ಜಿಲ್ಲೆಯಲ್ಲಿ ಯೂತ್ ಫಾರ್ ಸೇವಾ ಸಂಸ್ಥೆ ಚಿಗುರು ಕಾರ್ಯಕ್ರಮದ ಮೂಲಕ ಉತ್ತಮ ಕಾರ್ಯವನ್ನು ನಿರ್ವಹಿಸಿದೆ.ಸರ್ಕಾರಿ ಶಾಲೆಯ ಮಕ್ಕಳ ಪ್ರತಿಭೆಗೆ ಅವಕಾಶ ನೀಡಿದೆ. ಹಳ್ಳಿಗಳಲ್ಲಿ ಉತ್ತಮ ಪ್ರತಿಭೆಗಳು ಇದ್ದಾರೆ. ಅವಕಾಶ ನೀಡಬೇಕುಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ಭಾರತ ಸೇವಾದಳದ ಜಿಲ್ಲಾಧ್ಯಕ್ಷರಾದ ವೆಂಕಟ ನಾಗಪ್ಪ ಶೆಟ್ಟಿ ವಹಿಸಿ ಮಾತನಾಡಿ ಜಿಲ್ಲೆಯ .ಮಕ್ಕಳ ಪ್ರತಿಭೆಗೆ ಅವಕಾಶದ ವೇದಿಕೆಗಳು ಬಹಳ ಮುಖ್ಯ . ಉತ್ತಮ ಸ್ಪರ್ಧಿಗಳಿಗೆ ವೇದಿಕೆಗಳು ಅನಿವಾರ್ಯವಾಗಿದೆ. ಚಿಗುರು ವೇದಿಕೆ ಯೂತ್ ಫಾರ್ ಸೇವಾ ಸಂಸ್ಥೆಯ ಶ್ರೇಷ್ಠತೆಯ ಸಂಕೇತವಾಗಿದೆ. ಮತ್ತಷ್ಟು ಶಾಲೆಗಳಲ್ಲಿ ಯೂತ್ ಫಾರ್ ಸೇವಾ ಸಂಸ್ಥೆ ಸೇವೆ ಸಲ್ಲಿಸಲಿ ಎಂದರು.
ಪ್ರಾಸ್ತಾವಿಕವಾಗಿ ಯೂತ್ ಫಾರ್ ಸೇವಾ ಸಂಸ್ಥೆಯ ಕಾರ್ಯಕ್ರಮ ನಿರ್ದೇಶಕರಾದ ಬೆಂಗಳೂರಿನ ಕೆಎ ವಿಶ್ವನಾಥ್ ಶರ್ಮ ಮಾತನಾಡಿ ಯೂತ್ ಫಾರ್ ಸೇವಾ ಸಂಸ್ಥೆ ದೇಶದ ಯುವಶಕ್ತಿಯ ಪ್ರಗತಿ, ವಿಕಾಸ, ಸಂಸ್ಕಾರ, ಸಂಘಟನೆ ಹಾಗೂ ಸಮನ್ವತೆಯ ಮೂಲ ಶಕ್ತಿಯೊಂದಿಗೆ ಕಾರ್ಯನಿರ್ವಹಿಸುತ್ತಿದೆ. ರಾಷ್ಟ್ರದ ಬೆಳವಣಿಗೆಗೆ ಸಹಾಯಕವಾಗಲಿ ಎಂದರು.

ಕಾರ್ಯಕ್ರಮದಲ್ಲಿ ರೋಟರಿ ಸಿಲ್ಕ್ ಸಿಟಿ ಸಂಸ್ಥೆಯ ಪ್ರಭುರಾಮಮಾಣಿಕ್ ಚಂದ್, ಸೇವಾ ಭಾರತಿ ವಿದ್ಯಾ ಸಂಸ್ಥೆಯ ಮಂಜುನಾಥ್, ಯೂಥ್ ಫಾರ್ ಸೇವಾ ಸಂಸ್ಥೆಯ ವಿಷ್ಣು ,ಮನೋಜ್, ತೇಜು ನಾಯಕ್ ಉಪಸ್ಥಿತರಿದ್ದರು.
1300 ಮಕ್ಕಳು, 21 ಸ್ಪರ್ಧೆಗಳಿಗೆ ವಿದ್ಯಾರ್ಥಿಗಳು ಬಹಳ ಸಂತೋಷ ಸಂಭ್ರಮದಿಂದ ಪಾಲ್ಗೊಂಡು ಇಡೀ ವಾತಾವರಣ ಮಕ್ಕಳ ಕಲರವ ವಾಗಿ ಸಂತೋಷವನ್ನು ಉಂಟು ಮಾಡಿತ್ತು.
ಯೂಥ್ ಫಾರ್ ಸೇವಾ ಸಂಸ್ಥೆಯ ಕಾರ್ಯಕರ್ತರು ಬಹಳ ಅಚ್ಚುಕಟ್ಟು ತನದಿಂದ ಶಿಸ್ತುಬದ್ಧವಾಗಿ ನಿರ್ವಹಿಸಿದ್ದರು.