Friday, April 4, 2025
Google search engine

Homeರಾಜ್ಯಕಾಂಗ್ರೆಸ್ ಆಡಳಿತದಲ್ಲಿ ನಕ್ಸಲ್ ಚಟುವಟಿಕೆ ಹೆಚ್ಚಾಗಿದೆ : ಶಾಸಕ ಸುನೀಲ್ ಕುಮಾರ್

ಕಾಂಗ್ರೆಸ್ ಆಡಳಿತದಲ್ಲಿ ನಕ್ಸಲ್ ಚಟುವಟಿಕೆ ಹೆಚ್ಚಾಗಿದೆ : ಶಾಸಕ ಸುನೀಲ್ ಕುಮಾರ್

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲ ನಕ್ಸಲ್ ಚಟುವಟಿಕೆಗಳು ನಡೆಯುತ್ತವೆ. ಇದಕ್ಕೆ ಸರ್ಕಾರದ ಧೋರಣೆಯೇ ಕಾರಣ ಎಂದು ಶಾಸಕ ಸುನೀಲ್ ಕುಮಾರ್ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಮತ್ತು ಪೊಲೀಸರ ಕಾರ್ಯಚರಣೆಯನ್ನು ಸ್ವಾಗತ ಮಾಡುತ್ತೇನೆ. ಅನೇಕ ವರ್ಷಗಳಿಂದ ನಕ್ಸಲ್ ಚಟುವಟಿಕೆಗಳು ಸ್ತಬ್ದವಾಗಿತ್ತು. ಆದರೆ ಕಳೆದ ಒಂದೂವರೆ ವರ್ಷದಿಂದ ಮತ್ತೆ ನಕ್ಸಲ್ ಚಟುವಟಿಕೆಗಳು ಶುರುವಾಗಿದೆ ಎಂದು ಆರೋಪಿಸಿದರು.

ನಗರ ನಕ್ಸಲ್ಗಳು ಸಹ ಇದ್ದಾರೆ. ಕಾಡಿನಲ್ಲಿ ಕೂತು ಬಂದೂಕು ಹಿಡಿದು ಕಾರ್ಯಚರಣೆ ಮಾಡುವವರು ಇದ್ದಾರೆ. ನಮ್ಮ ಸರ್ಕಾರದ ಅವಧಿಯಲ್ಲಿ ನಕ್ಸಲ್ ಚಟುವಟಿಕೆಯನ್ನು ಮಟ್ಟ ಹಾಕಿದ್ದೆವು. ಇವರೆಲ್ಲ ಹೊರ ರಾಜ್ಯಗಳಲ್ಲಿ ತಲೆಮರಿಸಿಕೊಂಡಿದ್ದರು. ಈಗಿನ ಸರ್ಕಾರ ಬಂದ ಮೇಲೆ ಮತ್ತೆ ತಮ್ಮ ಚಟುವಟಿಕೆಗಳನ್ನು ನಡೆಸಲು ಬಂದಿದ್ದಾರೆ ಎಂದರು.

ನಗರ ನಕ್ಸಲ್ಗಳ ಚಟುವಟಿಕೆಗಳನ್ನ ಸರ್ಕಾರ ಗಮನಿಸಬೇಕು. ವಿಶ್ವವಿದ್ಯಾಲಯ, ಸಾಹಿತಿಗಳು ಎಂದು ಹೇಳಿಕೊಳ್ಳುವವರು, ಬುದ್ಧಿ ಜೀವಿಗಳು ಈ ನಕ್ಸಲ್ ಚಟುವಟಿಕೆಗಳಿಗೆ ಬೆಂಬಲ ನೀಡುತ್ತಾರೆ ಎಂದರು.

ನಕ್ಸಲರ ಮಟ್ಟ ಹಾಕಬೇಕು. ಕ್ಷಮೆ ಕೋರಿ ಬರುವ ವಿಚಾರದಲ್ಲಿ ಸರ್ಕಾರ ಚರ್ಚೆ ಮಾಡಬೇಕು. ನಕ್ಸಲ್ ಚಟುವಟಿಕೆಯನ್ನ ಮತ್ತೆ ನಗರಕ್ಕೆ ಬಂದು ಮುಂದುವರಿಸುವವರಿದ್ದಾರೆ. ಅದರ ಬಗ್ಗೆ ನಿಗಾವಹಿಸಬೇಕು. ನಕ್ಸಲ್ ನಿಗ್ರಹ ಚಟುವಟಿಕೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಬೇಕು ಎಂದು ತಿಳಿಸಿದರು.

RELATED ARTICLES
- Advertisment -
Google search engine

Most Popular